Saif Ali Khan: ಕರೀನಾ ಹೆಸರನ್ನ ಅಳಿಸಿದ ಸೈಫ್, ಮತ್ತೊಂದು ಮದುವೆಗೆ ಸಿದ್ಧವಾದ್ರಾ? ಎಂದು ಕಾಲೆಳೆದ ನೆಟ್ಟಿಗರು

Written by Soma Shekar

Published on:

---Join Our Channel---

Saif Ali Khan: ಬಾಲಿವುಡ್ ನ ಸ್ಟಾರ್ ದಂಪತಿಗಳಲ್ಲಿ ಸೈಫ್ ಅಲಿ ಖಾನ್ (Saif Ali Khan) ಮತ್ತು ಕರೀನಾ ಕಪೂರ್ (Kareena Kapoor) ಜೋಡಿಯೂ ಒಂದಾಗಿದೆ. ಕರೀನಾ ಮತ್ತು ಸೈಫ್ ಪ್ರೇಮಿಸಿ ಮದುವೆಯಾದವರು. ಕರೀನಾ ಸೈಫ್ ಅಲಿ ಖಾನ್ ಅವರಿಗೆ ಎರಡನೇ ಪತ್ನಿ ಅನ್ನೋದು ತಿಳಿದಿರುವ ವಿಚಾರ. ಸೈಫ್ ಅವರನ್ನು ಹಿರಿಯ ನಟಿ ಅಮೃತಾ ಸಿಂಗ್ (Amritha Singh) ಪ್ರೇಮಿಸಿ ಮದುವೆಯಾಗಿದ್ದರು. ಅಮೃತಾ ವಯಸ್ಸಿನಲ್ಲಿ ಸೈಫ್ ಗಿಂತ ಹಿರಿಯರು. ಆದರೂ ಇಬ್ಬರ ನಡುವಿನ ಪ್ರೇಮ ಅವರನ್ನು ಒಂದು ಮಾಡಿತ್ತು.

ಆದರೆ ಇಬ್ಬರು ಮಕ್ಕಳಾದ ನಂತರ ಸೈಫ್ ಮತ್ತು ಅಮೃತ ವಿಚ್ಚೇದನ ಪಡೆದು ದೂರಾದರು. ಇದಾದ ನಂತರ ಸೈಫ್ ಕರೀನಾ ಪ್ರೇಮದಲ್ಲಿ ಬಿದ್ದರು. ಮದುವೆಯಾದರು ಇಬ್ಬರು ಮಕ್ಕಳ ತಂದೆ ತಾಯಿಯಾದರು. ಸೈಫ್ ತಮ್ಮ ಪ್ರೀತಿಯ ಹೆಂಡತಿಯ ಹೆಸರನ್ನು ತಮ್ಮ ಮಣಿಕಟ್ಟಿನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದರು. ಇದು ಪತ್ನಿಯ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕಾಗಿ ಹಾಕಿಸಿಕೊಂಡಿದ್ದರು.

ಆದರೆ ಈಗ ಇದ್ದಕ್ಕಿದ್ದ ಹಾಗೆ ಸೈಫ್ ಮಣಿಕಟ್ಟಿನ ಮೇಲಿದ್ದ ಪತ್ನಿಯ ಹೆಸರಿನ ಟ್ಯಾಟೂ ಮಾಯವಾಗಿದೆ. ಇತ್ತೀಚಿಗೆ ಸೈಫ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಪತ್ನಿಯ ಹೆಸರಿನ ಟ್ಯಾಟೂ (Tattoo) ಇದ್ದ ಜಾಗದಲ್ಲಿ ಈಗ ಬೇರೊಂದು ಟ್ಯಾಟೂ ಕಾಣಿಸಿದೆ. ಇದರ ಅರ್ಥ ಸೈಫ್ ತಮ್ಮ ಪತ್ನಿಯ ಹೆಸರನ್ನು ಅಳಿಸಿ ಹಾಕಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.‌

ಇದನ್ನ ನೋಡಿದ ಅಭಿಮಾನಿಗಳು ಸೈಫ್ ಮತ್ತು ಕರೀನಾ ನಡುವೆ ಬಿರುಕು ಮೂಡಿರೋ ಹಾಗಿದೆ ಎನ್ನುವ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಇಬ್ಬರು ವಿಚ್ಚೇದನವನ್ನು ಪಡೆಯುವ ನಿರ್ಧಾರವನ್ನು ಮಾಡಿದ್ದಾರಾ ? ಎನ್ನುವ ಪ್ರಶ್ನೆಯನ್ನು ಮಾಡಿದ್ದಾರೆ. ಆದರೆ ಇನ್ನೂ ಕೆಲವರು ಅವರು ಹೊಸ ಸಿನಿಮಾಕ್ಕಾಗಿ ತಾತ್ಕಾಲಿಕ ಟ್ಯಾಟೂ ಹಾಕಿಸಿರಬಹುದು ಎಂದು ಸಹಾ ಹೇಳುತ್ತಿದ್ದಾರೆ.

Leave a Comment