Sai Pallavi: ಸಾಯಿಪಲ್ಲವಿ ಮುಖದಲ್ಲಿ ಮೊಡವೆ ಮಾಯ, ಕೊನೆಗೂ ಎಲ್ಲಾ ನಟಿಯರ ದಾರಿಗೆ ಬಂದ್ರ ಸಹಜ ಸುಂದರಿ?

Written by Soma Shekar

Published on:

---Join Our Channel---

Sai Pallavi: ಟಾಲಿವುಡ್ ನ (Tollywood) ಲೇಡಿ ಪವರ್ ಸ್ಟಾರ್ ಖ್ಯಾತಿಯ ನಟಿ ಸಾಯಿ ಪಲ್ಲವಿ (Sai Pallavi) ಸದ್ಯಕ್ಕಂತೂ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಹಜ ನಟನೆ ಮತ್ತು ಡ್ಯಾನ್ಸ್ ವಿಚಾರದಲ್ಲಿ ತನಗೆ ತಾನೇ ಸಾಟಿ ಎಂದು ಸಾಬೀತು ಮಾಡಿರುವ ಸಾಯಿ ಪಲ್ಲವಿ ಈಗಾಗಲೇ ಪ್ರಬುದ್ಧ ನಾಯಕಿ ಎನಿಸಿಕೊಂಡಿದ್ದಾರೆ. ಸ್ಟಾರ್ ನಟಿಯರ ಹಾದಿಯಲ್ಲಿ ಹೆಜ್ಜೆ ಹಾಕದೇ ವಿಭಿನ್ನ ಪಾತ್ರಗಳ ಮೂಲಕ ಸಿನಿ ಪ್ರೇಮಿಗಳನ್ನು ರಂಜಿಸುತ್ತಾ ತನ್ನದೇ ಆದ ಪ್ರತ್ಯೇಕ ಅಸ್ತಿತ್ವವನ್ನು ಸಿನಿಮಾ ರಂಗದಲ್ಲಿ ಕಂಡುಕೊಂಡಿರುವ ನಾಯಕಿಯಾಗಿದ್ದಾರೆ ಸಾಯಿ ಪಲ್ಲವಿ.

ಈಗ ಸಾಯಿ ಪಲ್ಲವಿ ಅವರ ಕುರಿತಾಗಿ ಹೊಸದೊಂದು ವಿಚಾರವು ಸುದ್ದಿಯಾಗಿದೆ. ನಟಿ ಸಾಯಿ ಪಲ್ಲವಿ ಮುಖದಲ್ಲಿದ್ದ ಮೊಡವೆಗಳು (Pimples) ಮಾಯವಾಗಿದ್ದು, ಬೇರೆ ನಟಿಯರ ಹಾಗೆ ಸಾಯಿ ಪಲ್ಲವಿ ಕೂಡಾ ಸರ್ಜರಿ ಮೊರೆ ಹೋಗಿ ಬಿಟ್ರಾ ಎನ್ನುವ ಪ್ರಶ್ನೆಯೊಂದು ಅನೇಕರಿಗೆ ಮೂಡಿದೆ. ಸಾಯಿ ಪಲ್ಲವಿ ತಮ್ಮ ಮೊದಲ ಸಿನಿಮಾಕ್ಕೆ ಎಂಟ್ರಿ ಕೊಟ್ಟಾಗಲೇ ಅವರ ಮುಖದಲ್ಲಿ ಮೊಡವೆಗಳು ಇದ್ದವು‌.

ಅಲ್ಲದೇ ನಟಿ ತಾವು ನಟಿಸಿದ ಹಲವು ಸಿನಿಮಾಗಳಲ್ಲಿ ಮೇಕಪ್ ಇಲ್ಲದೇ ಸಹಜವಾದ ಲುಕ್ ನಲ್ಲೇ ನಟಿಸಿ ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದುಕೊಂಡರು. ಆದರೆ ಈಗ ನಟಿಯ ಮುಖದಲ್ಲಿ ಮೊಡವೆಗಳು ಮಾಯವಾಗಿದ್ದು ಸಂದರ್ಶನವೊಂದರಲ್ಲಿ ಇದರ ಬಗ್ಗೆ ನಟಿಯನ್ನು ಪ್ರಶ್ನೆ ಮಾಡಲಾಗಿದ್ದು, ಮುಖದ ಮೊಡವೆ ನಿವಾರಣೆಗೆ ಸರ್ಜರಿಯನ್ನು ಮಾಡಿಸಿಕೊಂಡ್ರಾ ಎಂದು ಪ್ರಶ್ನೆಯನ್ನು ಕೇಳಲಾಗಿದೆ.

ಮುಖದ ಸರ್ಜರಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟಿಯು, ಹದಿಹರೆಯದ ಹುಡುಗಿಯರಲ್ಲಿ ಮುಖದ ಮೇಲೆ ಮೊಡವೆಗಳು ಆಗೋದು ಸಾಮಾನ್ಯವಾದ ವಿಷಯವಾಗಿದೆ, ದಿನಗಳು ಕಳೆದ ಹಾಗೆ ಅವು ಕಡಿಮೆಯಾಗುತ್ತದೆ, ನನ್ನ ವಿಚಾರದಲ್ಲೂ ಅಷ್ಟೇ ಎನ್ನುವ ಮಾತನ್ನು ಹೇಳಿದ್ದಾರೆ. ಅಲ್ಲದೇ ತನ್ನ ಸದೃಢ ಕೂದಲಿಗಾಗಿ ಪೋಷಕಾಂಶಯುಕ್ತ ಆಹಾರ ಮತ್ತು ಆಲೋವೆರಾ ಜೆಲ್ ಅನ್ನು ಕೂದಲಿಗೆ ಹಚ್ಚುತ್ತೇನೆ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.

Leave a Comment