Sai Pallavi: ಮಾಡಲ್ಲ, ಮಾಡಲ್ಲ ಅಂತಾನೇ ಗ್ರೀನ್ ಸಿಗ್ನಲ್ ಕೊಟ್ಟಿದ್ಯಾಕೆ? ಶಾಕ್ ನಲ್ಲಿ ಸಾಯಿಪಲ್ಲವಿ ಫ್ಯಾನ್ಸ್

Written by Soma Shekar

Published on:

---Join Our Channel---

Sai Pallavi: ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿ ಸಾಯಿ ಪಲ್ಲವಿ (Sai Pallavi) ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಪ್ರಸ್ತುತ ನಟಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ರಾಮಾಯಣ ಸಿನಿಮಾದಲ್ಲಿ ರಣಬೀರ್ ಜೊತೆಗೆ ಸೀತೆಯಾಗಿ ನಟಿ ನಟಿಸುತ್ತಿದ್ದಾರೆ. ದಕ್ಷಿಣದಲ್ಲಿ ಅದರಲ್ಲೂ ವಿಶೇಷವಾಗಿ ಟಾಲಿವುಡ್ ನಲ್ಲಿ ಲೇಡಿ ಪವರ್ ಸ್ಟಾರ್ ಅಂತಾನೇ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ ಸಾಯಿ ಪಲ್ಲವಿ.

ತೆಲುಗಿನಲ್ಲಿ ಸಾಯಿ ಪಲ್ಲವಿ ಯಾವುದೇ ಸಿನಿಮಾದಲ್ಲಿ ನಟಿಸಬೇಕಾದರೂ ಒಂದಷ್ಟು ಕಂಡೀಷನ್ ಗಳನ್ನು ಹಾಕುತ್ತಾರೆ. ಬೋಲ್ಡ್ ಡ್ರೆಸ್ ಗಳು ಇಲ್ಲ, ಕಿಸ್ಸಿಂಗ್ ಸೀನ್ ಮಾಡಲ್ಲ, ಹಸಿ ಬಿಸಿ ಸೀನ್ ಗಳಲ್ಲಿ ನಟಿಸಲ್ಲ ಎನ್ನುವುದು ನಟಿಯ ಷರತ್ತುಗಳಾಗಿವೆ. ಆದ್ದರಿಂದಲೇ ಸಾಯಿ ಪಲ್ಲವಿ ಹೆಚ್ಚು ಸಿನಿಮಾಗಳಲ್ಲಿ ನಟಿಸುವುದು ತೀರಾ ವಿರಳ ಎಂದೇ ಹೇಳಬಹುದಾಗಿದೆ.

ತೆಲುಗಿನಲ್ಲಿ ಯುವ ಸ್ಟಾರ್ ನಟರ ಜೊತೆಗೆ ನಟಿಸಿರುವ ಸಾಯಿ ಪಲ್ಲವಿ ಈ ಹಿಂದೆ ವಿಜಯ ದೇವರಕೊಂಡ ಜೊತೆಗೆ ನಟಿಸುವ ಅವಕಾಶ ಸಿಕ್ಕಾಗ ಸಿನಿಮಾಕ್ಕೆ ನೋ ಹೇಳಿದ್ದರು. ಹೌದು, ವಿಜಯ ದೇವರಕೊಂಡ (Vijay Devarakonda) ಮತ್ತು ರಶ್ಮಿಕಾ ನಾಯಕಿಯಾಗಿ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದ ಡಿಯರ್ ಕಾಮ್ರೇಡ್ ಸಿನಿಮಾಕ್ಕೆ ನಾಯಕಿಯಾಗಿ ಮೊದಲ ಆಯ್ಕೆ ಸಾಯಿ ಪಲ್ಲವಿ ಆಗಿದ್ದರು.‌

ಆದರೆ ಸಿನಿಮಾದಲ್ಲಿದ್ದ ಕಿಸ್ಸಿಂಗ್ ಸೀನ್ ಗಳ ಕಾರಣದಿಂದಾಗಿ ಸಾಯಿ ಪಲ್ಲವಿ ಆ ಸಿನಿಮಾಕ್ಕೆ ನೋ ಹೇಳಿದ್ದರು. ವಿಜಯ ದೇವರಕೊಂಡ ಸಿನಿಮಾಗಳಲ್ಲಿ ನಾಯಕ, ನಾಯಕಿಯ ನಡುವೆ ಕಿಸ್ಸಿಂಗ್ ಸಾಮಾನ್ಯ ಆಗಿರೋದ್ತಿಂದ ಬಹುಶಃ ಸಾಯಿ ಪಲ್ಲವಿ ವಿಜಯ್ ಜೊತೆ ನಟಿಸೋದು ಅಸಾಧ್ಯ ಎನ್ನುವುದು ಸಹಾ ಅನೇಕರ ಅಭಿಪ್ರಾಯವಾಗಿದೆ.

ಆದರೆ ಈಗ ಎಲ್ಲಾ ಅನುಮಾನಗಳಿಗೆ ಬ್ರೇಕ್ ಬಿದ್ದಿದೆ. ವಿಜಯ ದೇವರಕೊಂಡ ನಾಯಕನಾಗಿರುವ ರವಿ ಕಿರಣ್ ಕೋಲಾ ನಿರ್ದೇಶನದ ಸಿನಿಮಾದಲ್ಲಿ ನಾಯಕಿಯಾಗಿ ಸಾಯಿ ಪಲ್ಲವಿ ನಟಿಸೋದಕ್ಕೆ ಗ್ರೀನ್ ಸಿಗ್ನಲ್ ಅನ್ನು ನೀಡಿದ್ದಾರೆನ್ನುವ ವಿಚಾರವು ಹೊರ ಬಂದಿದ್ದು ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ.

ಹಾಗಾದ್ರೆ ಈ ಹೊಸ ಸಿನಿಮಾದಲ್ಲಿ ನಾಯಕ ನಾಯಕಿ ನಡುವೆ ಲಿಪ್ ಲಾಕ್ ಸೀನ್ ಗೆ ನಿರ್ದೇಶಕರು ಬ್ರೇಕ್ ಹಾಕೋ ನಿರ್ಧಾರವನ್ನು ಮಾಡಿದ್ದಾರಾ? ಅಥವಾ ಸಾಯಿ ಪಲ್ಲವಿ ಅದಕ್ಕೆ ಸಹಾ ಓಕೆ ಹೇಳಿ ಬಿಟ್ರಾ? ಅನ್ನೋದು ಈಗ ಎಲ್ಲರ ಹೊಸ ಪ್ರಶ್ನೆಯಾಗಿದೆ. ಇದರ ಉತ್ತರಕ್ಕಾಗಿ ಕಾದು ನೋಡಬೇಕಾಗಿದೆ.

Leave a Comment