Ritesh Genelia: ಬಾಲಿವುಡ್ ನ ಆದರ್ಶ ದಂಪತಿ ಮಾಡಿದ ದೊಡ್ಡ ನಿರ್ಧಾರ; ರಿತೇಶ್ ಜೆನಿಲಿಯಾ ಜೋಡಿಯ ಮಹತ್ವದ ಕಾರ್ಯ

Written by Soma Shekar

Published on:

---Join Our Channel---

Ritesh Genelia: ಬಾಲಿವುಡ್ ನ ಸ್ಟಾರ್ ದಂಪತಿಗಳಲ್ಲಿ ರಿತೇಶ್ ದೇಶ್ಮುಖ್ ಮತ್ತು ಜೆನಿಲಿಯಾ (Ritesh Genelia) ದಂಪತಿ ಬಹಳ ವಿಶೇಷವಾಗಿದ್ದಾರೆ. ತಮ್ಮ ನಡುವಿನ ಪ್ರೀತಿ, ಆತ್ಮೀಯತೆ ಹಾಗೂ ಆಪ್ತತೆಯಿಂದಲೇ ಇವರು ಆದರ್ಶ ದಂಪತಿ ಎನಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಮನರಂಜನೆಯ ವೀಡಿಯೋ ಹಂಚಿಕೊಳ್ಳುವ ಈ ಜೋಡಿ ಬಗ್ಗೆ ಯಾರೂ ಸಹಾ ನೆಗೆಟಿವ್ ಆಗಿ ಕಾಮೆಂಟ್ ಮಾಡೋದಿಲ್ಲ.

ಮಾದರಿ ದಂಪತಿ ಎನಿಸಿಕೊಂಡಿರುವ ಜೆನಿಲಿಯಾ ಮತ್ತು ರಿತೇಶ್ ಈಗ ಮಾಡಿದರು ಒಂದು ಮಹತ್ವದ ನಿರ್ಧಾರದಿಂದಾಗಿ ಮತ್ತೊಮ್ಮೆ ಈ ಜೋಡಿಯನ್ನು ಅವರ ಅಭಿಮಾನಿಗಳು ಮತ್ತು ನೆಟ್ಟಿಗರು ಸಹಾ ಹಾಡಿ ಹೊಗಳುತ್ತಿದ್ದಾರೆ. ಹೌದು, ರಿತೇಶ್ ಮತ್ತು ಜೆನಿಲಿಯಾ ತಮ್ಮ ಅಂಗಾಂಗ ದಾನ (Organ Donation) ಮಾಡುವ ನಿರ್ಧಾರವನ್ನು ಮಾಡಿದ್ದಾರೆ.

ಯಾರಿಗೇ ಆದರೂ ಜೀವನದ ಉಡುಗೊರೆಗಿಂತ ದೊಡ್ಡ ಉಡುಗೊರೆ ಬೇರೊಂದಿಲ್ಲ ಎಂದು ಈ ದಂಪತಿ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO) ಸಹಾ ಈ ದಂಪತಿಯ ವೀಡಿಯೋ ಶೇರ್ ಮಾಡಿಕೊಂಡಿದ್ದು ಇಬ್ಬರಿಗೂ ಧನ್ಯವಾದಗಳನ್ನು ತಿಳಿಸಿದೆ.

NOTTO ಸಂಸ್ಥೆಯು, ಬಾಲಿವುಡ್ ಜೋಡಿಗಳಾದ ರಿತೇಶ್ ಮತ್ತು ಜೆನಿಲಿಯಾ ತಮ್ಮ ಅಂಗಾಂಗಳನ್ನು ದಾನ ಮಾಡಲು ನಿರ್ಧರಿಸಿದ್ದು, ಅವರಿಗೆ ಕೃತಜ್ಞರಾಗಿದ್ದೇವೆ. ಅಂಗಾಂಗ ದಾನದ ಈ ಹೆಜ್ಜೆ ಈ ಉದಾತ್ತ ಕಾರ್ಯಕ್ಕೆ ಸೇರಲು ಹೊಸ ಸ್ಪೂರ್ತಿಯಾಗಿದೆ ಎಂದು ಹೇಳಿದೆ. ರಿತೇಶ್ ಮತ್ತು ಜೆನಿಲಿಯಾ ನಿರ್ಧಾರಕ್ಕೆ ಸಾಕಷ್ಟು ಮೆಚ್ಚುಗೆ ಗಳು ಹರಿದು ಬರುತ್ತಿವೆ.

ರಿತೇಶ್ ಅವರು ಈ ಹಿಂದೆಯೇ ತಾವು ಅಂಗಾಂಗ ದಾನವನ್ನು ಮಾಡುವ ನಿರ್ಧಾರವನ್ನು ಮಾಡಿದ್ದರು. ಈಗ ಅವರ ಈ ನಿರ್ಧಾರಕ್ಕೆ ಅವರ ಪತ್ನಿ ಜೆನಿಲಿಯಾ ಅವರು ಸಹಾ ಕೈ ಜೋಡಿಸಿದ್ದಾರೆ. ಈ ಜೋಡಿಯ ನಿರ್ಧಾರ ಖಂಡಿತ ಬಹಳಷ್ಟು ಜನರಿಗೆ ಅಂಗ ದಾನವನ್ನು ಮಾಡಲು ಸ್ಪೂರ್ತಿಯಾಗಲಿದೆ.

Leave a Comment