Rashmika Mandanna: ವಿಜಯ ದೇವರಕೊಂಡ ಫ್ಯಾನ್ಸ್ ಗೆ ಭಾರೀ ನೋವು ಕೊಟ್ಟ ರಶ್ಮಿಕಾ; ಕೋಪಗೊಂಡ ಫ್ಯಾನ್ಸ್

Written by Soma Shekar

Published on:

---Join Our Channel---

Rashmika Mandanna: ತೆಲುಗಿನ ಯುವ ಸ್ಟಾರ್ ನಟ ವಿಜಯ ದೇವರಕೊಂಡ (Vijaya Devarakonda) ಮೇ 9 ರಂದು ತಮ್ಮ 35 ನೇ ವರ್ಷದ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳ ಮೂಲಕ ತಮ್ಮ ಅಭಿಮಾನ ನಟನಿಗೆ ಜನ್ಮದಿನದ ಶುಭಾಶಯವನ್ನು ತಿಳಿಸುವ ಫೋಟೋಗಳನ್ನು ಶೇರ್ ಮಾಡಿಕೊಂಡು ಖುಷಿ ಪಟ್ಟಿದ್ದಾರೆ. ಆದರೆ ಇದೇ ವೇಳೆ ನಟನ ಅಭಿಮಾನಿಗಳಿಗೆ ರಶ್ಮಿಕಾ ಮಂದಣ್ಣ‌ ಬಗ್ಗೆ ಬೇಸರ ಕೂಡಾ ಮೂಡಿದೆ ಎನ್ನುವುದು ಸತ್ಯ.

ರಶ್ಮಿಕಾ (Rashmika Mandanna) ಮತ್ತು ವಿಜಯ ದೇವರಕೊಂಡ ಬಹಳ ಆತ್ಮೀಯರು ಎನ್ನುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಗೀತಗೋವಿಂದಂ (Geeta Govindam) ಸಿನಿಮಾದ ಮೂಲಕ ಜೋಡಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡ ಈ ಜೋಡಿ ಅಪಾರ ಅಭಿಮಾನಿಗಳ ಮೆಚ್ಚುಗೆ ಪಡೆದಿದ್ದರು. ಅಲ್ಲಿಂದಲೇ ಇವರ ನಡುವೆ ಒಂದು ಸ್ನೇಹ ಕೂಡಾ ಮೂಡಿತ್ತು. ಆದರೆ ಅವರ ನಡುವೆ ಸ್ನೇಹಕ್ಕಿಂತ ಹೆಚ್ಚಿನದೇನೋ ಇದೆ ಎಂಬುದಾಗಿ, ಈ ಜೋಡಿ ಮದುವೆ ಆಗ್ತಾರೆ ಅನ್ನೋದಾಗಿ ಆಗಾಗ ಸುದ್ದಿಗಳು ಹರಿದಾಡೋದು ಸಾಮಾನ್ಯ.

ರಶ್ಮಿಕಾ ವಿಜಯ್ ಅವರ ಕುಟುಂಬದ ಜೊತೆಗಿರುವ ಫೋಟೋ, ಮಾಲ್ಡೀವ್ಸ್ ನಲ್ಲಿ ಇಬ್ಬರು ಜೊತೆಗಿದ್ದರೆನ್ನುವ ಫೋಟೋಗಳು, ರಶ್ಮಿಕಾ ಜನ್ಮದಿನಕ್ಕೆ ವಿಜಯ ದೇವರಕೊಂಡ ವಿದೇಶಕ್ಕೆ ಹಾರಿ ವಿಶ್ ಮಾಡಿದ್ದರೆಂದು ಹೀಗೆ ಹತ್ತು ಹಲವು ಸುದ್ದಿಗಳು ಇವರ ಬಗ್ಗೆ ಆಗಿದೆ. ಇಷ್ಟೆಲ್ಲಾ ಆತ್ಮೀಯತೆ ಇದ್ದರೂ ರಶ್ಮಿಕಾ ನಟನ ಹುಟ್ಟುಹಬ್ಬಕ್ಕೆ ಒಂದು ವಿಶ್ ಕೂಡಾ ಮಾಡಿಲ್ಲ.

ವಿಜಯ್ ದೇವರಕೊಂಡ ಜನ್ಮದಿನಕ್ಕೆ ರಶ್ಮಿಕಾ ಯಾಕೆ ವಿಶ್ ಮಾಡಿಲ್ಲ ಎಂದು ನಟನ ಅಭಿಮಾನಿಗಳು ಪ್ರಶ್ನೆಯನ್ನು ಮಾಡಿದ್ದಾರೆ. ಈ ವಿಷಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗೋ ಜೊತೆಗೆ ಒಂದಷ್ಟು ಚರ್ಚೆಗಳಿಗೆ ಸಹಾ ಕಾರಣವಾಗಿದೆ. ರಶ್ಮಿಕಾ ಯಾಕೆ ಹೀಗೆ ಮಾಡಿದ್ರು ಅನ್ನೋದು ಸದ್ಯಕ್ಕಂತೂ ಉತ್ತರ ಇಲ್ಲದ ಪ್ರಶ್ನೆ. ಇನ್ನು ನಟನ ಜನ್ಮದಿನದಂದು ಅವರ ಹೊಸ ಸಿನಿಮಾದ ಕುರಿತಾಗಿ ಅಧಿಕೃತ ಘೋಷಣೆಯನ್ನು ಮಾಡಲಾಗಿದೆ.

Leave a Comment