Rajanikanth: ಬಾಲಿವುಡ್ ಬಾದ್ಷಾ ಶಾರೂಖ್ ನ ಹಿಂದಿಕ್ಕಿದ ರಜನೀಕಾಂತ್; ಇಡೀ ಏಷ್ಯಾದಲ್ಲೇ ಮೊದಲು, ಥ್ರಿಲ್ ಆದ ಫ್ಯಾನ್ಸ್

Written by Soma Shekar

Published on:

---Join Our Channel---

Rajanikanth: ದಕ್ಷಿಣ ಸಿನಿಮಾ ರಂಗದ ಹಿರಿಯ ನಟ, ತಮಿಳು ಸಿನಿಮಾ ರಂಗದಲ್ಲಿ ಸೂಪರ್ ಸ್ಟಾರ್ ಎನ್ನುವ ಹೆಸರನ್ನು ಪಡೆದುಕೊಂಡಿರುವ ನಟ ರಜನೀಕಾಂತ್ (Rajanikanth) ವಯಸ್ಸು ಏರುತ್ತಿದ್ದರೂ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾ, ತಮ್ಮದೇ ಆದ ಸ್ಟೈಲ್ ಮತ್ತು ನಟನೆಯಿಂದ ತಮ್ಮ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುತ್ತಾ ಬರುತ್ತಿದ್ದಾರೆ. ಅವರು ನಾಯಕನಾಗಿ ಕಾಣಿಸಿಕೊಂಡಿದ್ದ ಜೈಲರ್ ಸಿನಿಮಾ ದೊಡ್ಡ ಸಕ್ಸಸ್ ಅನ್ನು ಪಡೆದುಕೊಂಡಿತ್ತು.

ಜೈಲರ್ ನಂತರ ರಜನೀಕಾಂತ್ ಮಗಳು ಐಶ್ವರ್ಯ ಅವರ ನಿರ್ದೇಶನದ ಲಾಲ್ ಸಲಾಂ (Lal Salaam) ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಸಿನಿಮಾ ಹೀನಾಯ ಸೋಲನ್ನು ಕಂಡಿತ್ತು. ಜೈಲರ್ ನ ಗೆಲುವಿನ ನಂತರ ರಜನೀಕಾಂತ್ ಅವರು ನಾಯಕನಾಗಿ ಯಾವ ಹೊಸ ಸಿನಿಮಾದಲ್ಲಿ ನಟಿಸುತ್ತಾರೆಂದು ಕಾಯುತ್ತಿದ್ದ ಅವರ ಅಭಿಮಾನಿಗಳಿಗೆ ಈಗಾಗಲೇ ಉತ್ತರ ಸಿಕ್ಕಿದೆ.

ಲೋಕೇಶ್ ಕನಗರಾಜ್ (Lokesh Kanagaraj) ನಿರ್ದೇಶನದಲ್ಲಿ ಮೂಡಿ ಬರಲಿರುವ ಹೊಸ ಸಿನಿಮಾದಲ್ಲಿ ರಜನೀಕಾಂತ್ ನಾಯಕನಾಗಿದ್ದಾರೆ. ಈ ಸಿನಿಮಾಕ್ಕೆ ಕೂಲಿ (Coolie) ಎನ್ನುವ ಟೈಟಲ್ ಅನ್ನು ನೀಡಲಾಗಿದ್ದು, ಸಿನಿಮಾ ಘೋಷಣೆಯಾದ ದಿನದಿಂದಲೂ ಸಹಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಿದ್ದು, ಈಗ ಈ ಸಿನಿಮಾಕ್ಕಾಗಿ ನಟ ರಜನೀಕಾಂತ್ ಪಡೆಯುತ್ತಿರುವ ಸಂಭಾವನೆ ವಿಚಾರ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಹೌದು, ರಜನೀಕಾಂತ್ ಅವರು ಕೂಲಿ ಸಿನಿಮಾಕ್ಕೆ ಬರೋಬ್ಬರಿ 280 ಕೋಟಿ ರೂ.ಗಳ ಸಂಭಾವನೆಯನ್ನು ಪಡೆಯುತ್ತಿದ್ದು, ಈ ಮೂಲಕ ಏಷ್ಯಾದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಬಾಲಿವುಡ್ ನ ಬಾದ್ಷಾ ಖ್ಯಾತಿಯ ನಟ ಶಾರೂಖ್ ಖಾನ್ ಅವರನ್ನು ಸಹಾ ಹಿಂದಿಕ್ಕುವ ಮೂಲಕ ರಜನೀಕಾಂತ್ ಈಗ ಸದ್ದು ಮಾಡಿದ್ದಾರೆ.

Leave a Comment