Entertainment

Namratha Gowda: ಬಿಗ್ ಬಾಸ್ ಸ್ನೇಹಿತರ ಜೊತೆಗೆ ಬರ್ತಡೇ ಸಂಭ್ರಮಿಸಿದ ನಮ್ರತಾ ಗೌಡ ಫೋಟೋಗಳು

Namratha Gowda: ನಾಗಿಣಿ ಸೀರಿಯಲ್ ಖ್ಯಾತಿಯ ನಟಿ ನಮ್ರತಾ ಗೌಡ (Namratha Gowda), ಬಿಗ್ ಬಾಸ್ ನಂತರ ಇನ್ನಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರೋ ನಮ್ರತಾ ಅವ್ರನ್ನ ಫಾಲೋ ಮಾಡೋರ ಸಂಖ್ಯೆ ಮಿಲಿಯನ್ ನಲ್ಲಿ ಇದೆ ಅಂದ್ರೆ ಸುಳ್ಳಲ್ಲ. ತಮ್ಮ ಡ್ಯಾನ್ಸ್ ವೀಡಿಯೋಗಳ ಮೂಲಕ ನಟಿ ಧೂಳೆಬ್ಬಿಸಿ, ಡ್ಯಾನ್ಸ್ ಪ್ರಿಯರಿಗೆ ಭರ್ಜರಿ ಮನರಂಜನೆ ನೀಡ್ತಾ, ಅವರ ಮನಸ್ಸುಗಳನ್ನು ಗೆದ್ಧಿದ್ದಾರೆ.

ನಿನ್ನೆಯಷ್ಟೇ ನಟಿ ತಮ್ಮ ಜನ್ಮದಿನವನ್ನು (Birthday) ಸಂಭ್ರಮದಿಂದ ಸೆಲೆಬ್ರೇಟ್ ಮಾಡಿದ್ದಾರೆ. ಜನ್ಮದಿನದಂದು ನಟಿ ಹೊಸ ಎಲೆಕ್ಟ್ರಿಕ್ ಕಾರನ್ನು ಖರೀದಿ ಮಾಡಿ ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಈಗ ನಟಿಯ ಹುಟ್ಟು ಹಬ್ಬದ ಸೆಲೆಬ್ರೇಷನ್ ನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಮ್ರತಾ ತಮ್ಮ ಜನ್ಮದಿನವನ್ನು ತಮ್ಮ ಆಪ್ತರು, ಬಿಗ್ ಬಾಸ್ ಸ್ನೇಹಿತರ ಜೊತೆಗೆ ಖುಷಿಯಿಂದ ಸಂಭ್ರಮಿಸಿದ್ದಾರೆ. ಜನ್ಮದಿನದ ಸಂಭ್ರಮದಲ್ಲಿ ವಿನಯ್ ಗೌಡ, ಇಶಾನಿ, ಕಾರ್ತಿಕ್, ಮೈಕಲ್, ಕಿಶನ್ ಬಿಳಗಲಿ, ಅನುಪಮಾ, ನಿರಂಜನ್ ದೇಶಪಾಂಡೆ, ಕವಿತಾ ಗೌಡ, ಪವಿ ಪೂವಪ್ಪ, ನೇಹಾ ಗೌಡ ಇನ್ನೂ ಮುಂತಾದವರು ಭಾಗಿಯಾಗಿ ನಮ್ರತಾಗೆ ವಿಶ್ ಮಾಡಿದ್ದಾರೆ.

ನಮ್ರತಾ ಅವರ ಜನ್ಮದಿನದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ನೋಡಿದ ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿ ಶುಭಾಶಯವನ್ನು ತಿಳಿಸಿದ್ದಾರೆ. ನಟಿಯ ಇನ್ಸ್ಟಾಗ್ರಾಂ ನಲ್ಲೂ ಅನೇಕರು ಕಾಮೆಂಟ್ ಗಳನ್ನು ಮಾಡಿ ನಟಿ ಜನ್ಮದಿನಕ್ಕೆ ಶುಭ ಹಾರೈಸಿದ್ದಾರೆ.

ಬಿಗ್ ಬಾಸ್ (Bigg Boss) ನಂತರ ನಟಿ ಆಭರಣ ಜಾಹೀರಾತೊಂದರಲ್ಲಿ ಕಾರ್ತಿಕ್ ಮಹೇಶ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ಮುಂದೆ ನಟಿ ಸಿನಿಮಾ ಅಥವಾ ಸೀರಿಯಲ್ ಯಾವ ಹೊಸ ಪ್ರಾಜೆಕ್ಟ್ ಮೂಲಕ ಪ್ರೇಕ್ಷಕರ ಮುಂದೆ ಬರ್ತಾರೆ ಅನ್ನೋ ನಿರೀಕ್ಷೆಯಲ್ಲಿ ಇದ್ದಾರೆ ಅವರ ಅಭಿಮಾನಿಗಳು.

Soma Shekar

Recent Posts

Amruthadhaare: ಗೌತಮ್ ಹೇಳದ ಸತ್ಯ ಭೂಮಿಕಾಗೆ ಗೊತ್ತಾಗೋ ಸಮಯ ಬಂದಾಯ್ತು; ಗೌತಮ್ ಮೌನ ಮುರಿಲೇಬೇಕು

Amruthadhaare Serial : ಅಮೃತಧಾರೆ ಸೀರಿಯಲ್ ನ (Amruthadhaare Serial) ಇತ್ತೀಚಿನ ಎಪಿಸೋಡ್ ಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡಿದೆ.…

3 mins ago

Kasturi Shankar: ಐಶ್ವರ್ಯ ಅಂದ ಹಾಳಾಗಿದ್ದೇ ಅದರಿಂದ, ಕಾಲ ಯಾರನ್ನೂ ಬಿಡಲ್ಲ, ಕಸ್ತೂರಿ ಶಂಕರ್ ಶಾಕಿಂಗ್ ಹೇಳಿಕೆ

Kasturi Shankar: ಗ್ಲೋಬಲ್ ಸ್ಟಾರ್, ಮಾಜಿ ಮಿಸ್ ವರ್ಲ್ಡ್ ಮತ್ತು ಬಾಲಿವುಡ್ ನ ಒಂದು ಕಾಲದ ನಂಬರ್ ಒನ್ ನಟಿ…

13 hours ago

Hema Rave Party: ಬೆಂಗಳೂರು ರೇವ್ ಪಾರ್ಟಿ, ತೆಲುಗು ನಟಿ ಹೇಮಾ ಸಂಚಲನ ಹೇಳಿಕೆ; ನೆಟ್ಟಿಗರಿಂದ ಟೀಕೆ

Hema Rave Party: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿನ (Bengaluru Electronic City) ಜಿ ಆರ್ ಫಾರ್ಮ್ ಹೌಸ್ ನಲ್ಲಿ ನಡೆಯುತ್ತಿದ್ದ…

15 hours ago

Actress Sithara: ಅವರ ನೆನಪೇ ಕಾಡುತ್ತದೆ; ವಯಸ್ಸು 50 ಆದ್ರು ನಟಿ ಸಿತಾರ ಒಂಟಿ, ಮದುವೆ ಆಲೋಚನೆ ಯಾಕಿಲ್ಲ?

Actress Sithara: ದಕ್ಷಿಣ ಸಿನಿಮಾ ರಂಗದಲ್ಲಿ ಪ್ರಸ್ತುತ ಪೋಷಕ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ನಟಿ ಸಿತಾರಾ (Actress Sithara)…

19 hours ago

Lakshmi Nivasa: ಜಾನುಗಾಗಿ ಜಯಂತ್ ಮನೆಗೆ ಬಂದ ಅಪ್ಪ ಅಮ್ಮ; ಮತ್ತೆ ಯಾವ ಹೊಸ ಪ್ಲಾನ್ ಮಾಡ್ತಾನೇ ಜಯಂತ್

Lakshmi Nivasa Serial: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಲಕ್ಷ್ಮೀ ನಿವಾಸದಲ್ಲಿ (Lakshmi Nivasa Serial) ಇತ್ತೀಚಿನ ದಿನಗಳಲ್ಲಿ ಜಯಂತ್…

21 hours ago

Tirupati: ತಿರುಮಲಕ್ಕೆ ಹರಿದು ಬರ್ತಿದೆ ಭಕ್ತ ಸಾಗರ: ತಿರುಪತಿಗೆ ಹೋಗೋ ಪ್ಲಾನ್ ಇದ್ರೆ ಮೊದಲು ಈ ಸುದ್ದಿ ನೋಡಿ

Tirupati: ಬೇಸಿಗೆ ರಜೆ ಇನ್ನೇನು ಮುಗಿಯುವ ಹೊತ್ತಲ್ಲೇ ತಿರುಪತಿ (Tirupati) ತಿರುಮಲದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ. ತೆಲುಗು…

22 hours ago

This website uses cookies.