Kalki 2898 AD: ಕಲ್ಕಿ ಸೀಕ್ವೆಲ್ ನಲ್ಲಿ ಶ್ರೀಕೃಷ್ಣನಾಗಿ ಮಹೇಶ್ ಬಾಬು; ನಾಗ್ ಅಶ್ವಿನ್ ಮಾತಿಗೆ ಬೆಚ್ಚಿ ಬಿದ್ದ ಫ್ಯಾನ್ಸ್

Written by Soma Shekar

Published on:

---Join Our Channel---

Kalki 2898 AD: ಕಲ್ಕಿ 2898AD (Kalki 2898 AD) ಸಿನಿಮಾ ಬಿಡುಗಡೆ ಆದಾಗಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇದೆ. ಕಲೆಕ್ಷನ್ ವಿಚಾರದಲ್ಲಿ ಸಿನಿಮಾ ಈಗಾಗಲೇ ಅಬ್ಬರಿಸಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸಹಾ ಥ್ರಿಲ್ ಆಗಿದ್ದಾರೆ. ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡ ಸ್ಟಾರ್ ಗಳನ್ನು ನೋಡಿ ಅಚ್ಚರಿಪಟ್ಟಿದ್ದಾರೆ. ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಅವರ ಪಾತ್ರವನ್ನು ಹಾಡಿಹೊಗಳಿದ್ದಾರೆ.

ಕಲ್ಕಿ ಸಿನಿಮಾದಲ್ಲಿ ಮತ್ತೊಂದು ಆಕರ್ಷಣೆ ಆಗಿದ್ದು ಶ್ರೀಕೃಷ್ಣನ ಪಾತ್ರ. ನಾಗ್ ಅಶ್ವಿನ್ (Nag Ashwin) ಶ್ರೀಕೃಷ್ಣನ ಪಾತ್ರಕ್ಕೆ ಯಾವುದೋ ದೊಡ್ಡ ಸ್ಟಾರ್ ನಟನನ್ನ ಕರೆತಂದಿಲ್ಲ. ಬದಲಾಗಿ ಶ್ರೀಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಂಡ ನಟ ಈಗ ಎಲ್ಲರ ಮನಸ್ಸನ್ನ ಗೆದ್ದಿದ್ದಾರೆ.

ಈಗ ಇದರ ಬೆನ್ನಲ್ಲೇ ಕಲ್ಕಿಯ ಸೀಕ್ವೆಲ್ ನಲ್ಲಿ ಕೃಷ್ಣನ ಪಾತ್ರವನ್ನು ಯಾರು ಮಾಡುತ್ತಾರೆನ್ನುವ ಚರ್ಚೆ ಶುರುವಾಗಿದೆ. ಈ ವೇಳೆ ಕಲ್ಕಿಯ ಸೀಕ್ವೆಲ್ ನಲ್ಲಿ ಮಹೇಶ್ ಬಾಬು (Mahesh Babu) ಕೃಷ್ಣನಾಗಿ ಕಾಣಿಸಿಕೊಳ್ಳಲಿದ್ದಾರೆನ್ನುವ ಒಂದು ಸುದ್ದಿ ಹಾರಿದಾಡಿದ್ದು, ಇದಕ್ಕೆ ನಿರ್ದೇಶಕ ನಾಗ್ ಅಶ್ವಿನ್ ತಮ್ಮ ಕಡೆಯಿಂದ ಸ್ಪಷ್ಟನೆಯನ್ನು ನೀಡಿದ್ದಾರೆ.

ತಮ್ಮ ಮುಂದಿನ ಸಿನಿಮಾದಲ್ಲಿ ಕೃಷ್ಣನ ಕಲ್ಪನೆ ಹೇಗಿರಲಿದೆ ಎನ್ನುವುದನ್ನು ಅವರು ವಿವರವಾಗಿ ಹೇಳಿದ್ದಾರೆ. ಕೃಷ್ಣನ ಪಾತ್ರವನ್ನು ಒಬ್ಬರ ಗುರುತಿಲ್ಲದೇ ಇಟ್ಟಕೊಳ್ಳುವುದು ಕಲ್ಪನೆಯಾಗಿತ್ತು. ಕೃಷ್ಣನ ಗಾಢ ಬಣ್ಣಗಳಲ್ಲಿ, ಗಾಢ ರೂಪದಲ್ಲಿ ತೋರಿಸಬೇಕಾಗಿತ್ತು.

ಅಲ್ಲದೇ ನಿಗೂಢ ಆಕೃತಿಯಲ್ಲಿ ಕೃಷ್ಣನನ್ನು ಇರಿಸುವುದು ಸಹಾ ಕಲ್ಪನೆಯಾಗಿತ್ತು. ಸೀಕ್ವೆಲ್ ನಲ್ಲೂ ಕೂಡಾ ಕೃಷ್ಣನನ್ನು ತೋರಿಸುವ ಆಲೋಚನೆಯಿಲ್ಲ‌. ಕಲ್ಕಿಯಲ್ಲಿ ಹೇಗೆ ಕೃಷ್ಣನನ್ನು ತೋರಿಸಲಾಗಿದೆಯೋ ಮುಂದಿನ ಭಾಗದಲ್ಲೂ ಸಹಾ ಅದೇ ರೀತಿ ತೋರಿಸಲಾಗುವುದು ಎಂದಿದ್ದಾರೆ.

ಹೀಗೆ ಕಲ್ಕಿ ಸೀಕ್ವೆಲ್ ಸಿನಿಮಾದಲ್ಲಿ ಶ್ರೀಕೃಷ್ಣನ ಪಾತ್ರದ ಕುರಿತಾಗಿ ಹರಿದಾಡುತ್ತಿರುವ ಸುದ್ದಿಗಳಿಗೆ ನಿರ್ದೇಶಕ ನಾಗ್ ಅಶ್ವಿನ್ ಅವರು ಸ್ಪಷ್ಟನೆ ನೀಡುತ್ತಾ ಮಹೇಶ್ ಬಾಬು ಕೃಷ್ಣನ ಪಾತ್ರ ಮಾಡುವರು ಎನ್ನುವ ವಿಚಾರಕ್ಕೆ ಬ್ರೇಕ್ ಹಾಕಿದ್ದಾರೆ.

Leave a Comment