Mahanati show: ಸ್ವಾಭಿಮಾನಿ ಅಜ್ಜಿಯ ಕಥೆಗೆ ಕಣ್ಣೀರಾದ ಅನುಶ್ರೀ ಕೊಟ್ರು ಜೀವನ ಪೂರ್ತಿ ನೆರವಿನ ಭರವಸೆ

Written by Soma Shekar

Published on:

---Join Our Channel---

Mahanati Show: ಜೀ ಕನ್ನಡ (Zee Kannada) ವಾಹಿನಿಯಲ್ಲಿ ಕಿರುತೆರೆಯಲ್ಲೇ ಮೊದಲ ಪ್ರಯತ್ನ ಎನ್ನುವಂತೆ ಮಹಾನಟಿ ಹೆಸರಿನ ಹೊಚ್ಚ ಹೊಸ ರಿಯಾಲಿಟಿ ಶೋ ಆರಂಭವಾಗಿದ್ದು, ಈಗಾಗಲೇ ಅಪಾರ ಜನಪ್ರಿಯತೆಯನ್ನು ಪಡೆದುಕೊಂಡು ಈ ಶೋ ಮುನ್ನಗ್ಗುತ್ತಿದ್ದು, ಎಲ್ಲೆಲ್ಲೂ ಶೋ ನ ವಿಚಾರವಾಗಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಲೇ ಇವೆ. ಹದಿನಾರು ಜನ ಯುವತಿಯರು ಒಂದೇ ವೇದಿಕೆಯ ಮೇಲೆ ತಮ್ಮ ನಟನಾ ಕೌಶಲ್ಯ ಮತ್ತು ಪ್ರತಿಭೆಯನ್ನು ಪ್ರದರ್ಶಿಸುತ್ತಾ ಮಹಾನಟಿಯ ಬಿರುದನ್ನ ಪಡೆಯಲು ಶ್ರಮ ಪಡುತ್ತಿದ್ದಾರೆ. ಶನಿವಾರದ ಎಪಿಸೋಡ್ ಖಂಡಿತ ಬಹಳ ವಿಶೇಶವಾಗಿತ್ತು.‌

ವಾಸ್ತವ ಬದುಕಿನಲ್ಲಿ ಏರಿಳಿತಗಳನ್ನು, ದುಃಖ ಮತ್ತು ನೋವನ್ನು ಗೆದ್ದು ಜೀವನವನ್ನು ಎದುರಿಸುತ್ತಿರುವ ಮಹಿಳೆಯರ ಪಾತ್ರವನ್ನು ವೇದಿಕೆಯ ಮೇಲೆ ಪ್ರದರ್ಶಿಸುವ ಟಾಸ್ಕ್ ಅನ್ನು ಸ್ಪರ್ಧಿಗಳಿಗೆ ನೀಡಲಾಗಿತ್ತು. ಈ ವೇಳೆ ಸ್ಪರ್ಧಿ ರಿಯಾ ಬಗರೆ (Riya Bagare) ರಸ್ತೆಗಳಲ್ಲಿ ಹತ್ತಿಯ ಬತ್ತಿಗಳನ್ನು ಮಾರಾಟ ಮಾಡುತ್ತಾ ಸ್ವಾಭಿಮಾನದ ಬದುಕನ್ನು ನಡೆಸುತ್ತಿರುವ 85 ವರ್ಷ ವಯಸ್ಸಿನ ಭಾಗ್ಯ ಲಕ್ಷ್ಮೀ (Bhagya Lakshmi) ಅವರ ಜೀವನದ ಚಿತ್ರಣವನ್ನು ನಟಿಸಿದರು. ಭಾಗ್ಯ ಲಕ್ಷ್ಮೀ ಅವರ ಜೀವನದ ಕಥೆಯನ್ನು ನೋಡಿ ಅಲ್ಲಿದ್ದ ಪ್ರತಿಯೊಬ್ಬರ ಕಣ್ಣಲ್ಲೂ ನೀರು ತುಂಬಿತ್ತು.

ಅಜ್ಜಿ ಭಾಗ್ಯ ಲಕ್ಷ್ಮಿ ಅವರು ವೇದಿಕೆಗೆ ಬಂದ ಸಮಯದಲ್ಲಿ ನಿರೂಪಕಿ ಅನುಶ್ರೀ (Anushree) ಅವರು ಅಮ್ಮ ಈ ಸ್ವಾಭಿಮಾನದ ಬದುಕನ್ನು ನೀವು ಅದ್ಹೇಗೆ ಗೆಲ್ಲುತ್ತಿದ್ದೀರಿ? ಅನ್ನೋ ಪ್ರಶ್ನೆಯನ್ನು ಕೇಳಿದಾಗ ಅಜ್ಜಿ, “ಮನುಷ್ಯನಾಗಿ ಹುಟ್ಟಿದ ಮೇಲೆ ಸ್ವಾಭಿಮಾನದಿಂದಲೇ ಗೆಲ್ಲಬೇಕು. ಇನ್ನೊಬ್ಬರ ಹಂಗಿನಲ್ಲಿ ಬದುಕಬಾರದು ಎಂದು ಹೇಳಿದ್ದಾರೆ. ತನ್ನ ಜೊತೆಗೆ ಮಗಳು ಇದ್ದು, ನನ್ನನ್ನ ಚೆನ್ನಾಗಿ ನೋಡಿಕೊಳ್ತಾಳೆ. ಅವಳು ಬತ್ತಿಯನ್ನು ಮಾಡಿಕೊಡ್ತಾಳೆ, ನಾನು ಮಾರಿಕೊಂಡು ಬರ್ತೀನಿ ಅಂತ ಹೇಳಿದ್ದಾರೆ.

ಅವುಗಳನ್ನ ಮಾರಿ ಬರೋ ದುಡ್ಡಿಂದ ಜೀವನ ನಡೆಸಬೇಕು, ಮನೆ ಬಾಡಿಗೆ ಕಟ್ಟಬೇಕು, ಸುಮ್ಮನೆ ಕೂತರೆ ಯಾರೂ ದುಡ್ಡು ಕೊಡೋದಿಲ್ಲ ಎಂದೆಲ್ಲಾ ವಿಚಾರಗಳನ್ನು ಅಜ್ಜಿ ಹಂಚಿಕೊಂಡಿದ್ದಾರೆ. ತನಗೆ ತಿಂಗಳಿಗೆ 1500 ರೂ. ವೃದ್ಧಾಪ್ಯ ವೇತನ ಸಿಗುತ್ತೆ. ಮನೆ ಬಾಡಿಗೆ ಐದು ಸಾವಿರ ಕಟ್ಟಬೇಕು. ಮನೆ ಖರ್ಚು ನೋಡಬೇಕು. ಇದನ್ನೆಲ್ಲಾ ಯಾರಿಗೆ ಕೇಳೋಣ, ಆಗಲ್ಲ ಅಲ್ವ? ಸ್ವಾಭಿಮಾನ ಅಡ್ಡಬರುತ್ತೆ. ಕಷ್ಟಪಟ್ಟರೆ ಭಗವಂತ ದಾರಿ ತೋರಿಸ್ತಾನೆ” ಎಂದು ಅಜ್ಜಿ ಬಹಳ ಅರ್ಥಪೂರ್ಣ ಮಾತುಗಳನ್ನ ಹೇಳಿದ್ದಾರೆ.

ಅಜ್ಜಿಯ ಮಾತಿಗೆ ಭಾವುಕರಾದ ನಿರೂಪಕಿ ಅನುಶ್ರೀ ಅವರು, “ನಾನು ನಿಮ್ಮನ್ನ ಅಜ್ಜಿ ಅಂತ ಕರೆದೆ ಅಲ್ವಾ? ನಾನು ನಿಮ್ಮ ಮೊಮ್ಮಗಳು ಇದ್ದಂಗೆ ಅಲ್ವಾ? ನೀವು ಏನೂ ಅಂದುಕೊಳ್ಳಲ್ಲ ಅಂದರೆ, ಇನ್ಮೇಲೇ ನಾನು ಸಾಯೋವರೆಗೂ ನಿಮ್ಮ ಮನೆ ಬಾಡಿಗೆ ನಾನೇ ಕಟ್ತೀನಿ. ಈ ಒಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದು, ನೀವು ಯಾವ ಮನೆಯಲ್ಲಾದ್ರು ಇರಿ, ಆ ಮನೆ ಬಾಡಿಗೆ ನಾನೇ ಕಟ್ತೀನಿ” ಅಂತ ಆಶ್ವಾಸನೆ ನೀಡಿದ್ದಾರೆ.

ಇದೇ ವೇಳೆ ವೇದಿಕೆಗೆ ಆಗಮಿಸಿದ ಕಾರ್ಯಕ್ರಮದ ತೀರ್ಪುಗಾರರಲ್ಲಿ ಒಬ್ಬರಾಗಿರುವ ನಿರ್ದೇಶಕ ತರುಣ್ ಸುಧೀರ್ (Tarun Sudheer) ಅವರು ಎಲ್ಲರ ಮುಂದೆ ಹೇಳಲಿಲ್ಲವಾದರೂ, ಮೈಕ್ ಆಫ್ ಮಾಡಿ ಭಾಗ್ಯ ಲಕ್ಷ್ಮಿ ಅವರಿಗೆ ಇನ್ಮುಂದೆ ದಿನಸಿ ಕಳುಹಿಸುವ ಭರವಸೆ ನೀಡಿದ್ದಾರೆ. ಅನಂತರ ಅನುಶ್ರೀ ಅವರು ಅದನ್ನು ಎಲ್ಲರಿಗೂ ತಿಳಿಸಿದ್ದಾರೆ. ತರುಣ್ ಸುಧೀರ್ ಅವರು ಅಜ್ಜಿಯ ಬಳಿ ಬತ್ತಿಯನ್ನು ಖರೀದಿಸಿ ಅದಕ್ಕೆ ಹಣವನ್ನು ನೀಡಿದರು. ಈ ಇಡೀ ದೃಶ್ಯ ಪ್ರೇಕ್ಷಕರನ್ನು ಸಹಾ ಭಾವುಕರನ್ನಾಗಿ ಮಾಡಿದ್ದು ಸುಳ್ಳಲ್ಲ.

Leave a Comment