Kannada Serial TRP: ಟಾಪ್ 5 ರಲ್ಲಿ ಇರುವ ಸೀರಿಯಲ್ ಗಳಾವುವು? ಹೊರ ಬಿತ್ತು ಈ ವಾರದ TRP ಲಿಸ್ಟ್

Written by Soma Shekar

Published on:

---Join Our Channel---

Kannada Serial TRP: ಕಿರುತೆರೆಯ ಲೋಕದಲ್ಲಿ ಸೀರಿಯಲ್ ಗಳದ್ದೇ ಕಾರುಬಾರು, ಪ್ರತಿವಾರ ಸಹಾ ಟಾಪ್ ಸೀರಿಯಲ್ ಗಳಲ್ಲಿ ಸ್ಥಾನವನ್ನು ಪಡೆದುಕೊಳ್ಳಲು ಸೀರಿಯಲ್ ಗಳ ನಡುವೆ ಟಿ ಆರ್ ಪಿ (Kannada Serial TRP) ವಿಚಾರದಲ್ಲಿ ದೊಡ್ಡ ಪೈಪೋಟಿ ನಡೆಯುತ್ತಲೇ ಇರುತ್ತದೆ. ಹೊಸ ಹೊಸ ಟ್ವಿಸ್ಟ್ ಗಳ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಸೀರಿಯಲ್ ಗಳು ಪಡುವ ಪ್ರಯತ್ನ ಅಷ್ಟಿಷ್ಟಲ್ಲ. ಇನ್ನು ಈ ವಾರ ಟಾಪ್ ಐದರಲ್ಲಿ ಯಾವೆಲ್ಲಾ ಸೀರಿಯಲ್ ಗಳಿವೆ ತಿಳಿಯೋಣ ಬನ್ನಿ.

ಪುಟ್ಟಕ್ಕನ ಮಕ್ಕಳು (Puttakkana Makkalu) ಎಂದಿನಂತೆ ತನ್ನ ಮೊದಲ ಸ್ಥಾನದಲ್ಲೇ ಮುಂದುವರೆದಿದೆ. ಸೀರಿಯಲ್ ನಲ್ಲಿ ಹೊಸ ಮಹತ್ವದ ಟ್ವಿಸ್ಟ್ ಎನ್ನುವಂತೆ ಬಂಗಾರಮ್ಮನ ಸೋದರಿ ಸಿಂಗಾರಮ್ಮನ ಭರ್ಜರಿ ಎಂಟ್ರಿಯಾಗಿದ್ದು, ಕಥೆಯಲ್ಲಿ ಮುಂದೆ ಏನಲ್ಲಾ ಆಗುತ್ತೆ ಅನ್ನೋ ಕುತೂಹಲ ಮೂಡಿಸಿದೆ.

ಎರಡನೇ ಸ್ಥಾನದಲ್ಲಿ ಈ ವಾರವೂ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ಇದ್ದು, ಭಾವನಾ ಕೊರಳಲ್ಲಿ ಇರುವ ತಾಳಿ ಕಟ್ಟಿದವರಾರು ಅಂತ ಗೊತ್ತಿಲ್ಲದ ಭಾವನಾ, ತಾಳಿ ಕಟ್ಟಿ ತಪ್ಪು ಮಾಡಿದೆ ಎಂದು ವೇದನೆ ಪಡ್ತಾ ಇರೋ ಸಿದ್ಧೇಗೌಡ್ರು, ಜಾಹ್ನವಿ ಮನೆಗೆ ಬಂದ ವಿಶ್ವ ಹೀಗೆ ಸಾಕಷ್ಟು ಆಸಕ್ತಿಕರ ವಿಷಯಗಳು ನಡೆದಿದೆ.

ಮೂರನೇ ಸ್ಥಾನದಲ್ಲಿ ಹೊಸ ಸೀರಿಯಲ್ ಆಗಿರುವ ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಇದ್ದು, ಶ್ರಾವಣಿ ಮತ್ತು ಸುಬ್ಬು ಕುಟುಂಬ ಸಾಲಿಗ್ರಾಮಕ್ಕೆ ಹೋಗೋ ತಯಾರಿ ನಡೆಸಿದ್ದು, ಸಾಲಿಗ್ರಾಮವು ಕಥೆಯಲ್ಲಿ ಯಾವ ಟ್ವಿಸ್ಟ್ ಕೊಡುತ್ತೆ ಅನ್ನೋದನ್ನ ನೋಡಲು ಪ್ರೇಕ್ಷಕರು ಕಾಯ್ತಿದ್ದಾರೆ.

ನಾಲ್ಕನೇ ಸ್ಥಾನದಲ್ಲಿ ಸೀತಾ ರಾಮ ಸೀರಿಯಲ್ ಇದ್ದು, ಸದ್ಯಕ್ಕಂತೂ ಸೀರಿಯಲ್ ನಲ್ಲಿ ರಾಮ್ ಮತ್ತು ಸೀತಾ ಮದುವೆಯ ಎಪಿಸೋಡ್ ಗಳು ಪ್ರಸಾರವಾಗುತ್ತಾ, ಅದ್ದೂರಿ ಮದುವೆಯ ಎಪಿಸೋಡ್ ಗಳು ಮನರಂಜನೆಯನ್ನು ನೀಡುತ್ತಿದೆ.

ಕಳೆದ ವಾರ ಆರನೇ ಸ್ಥಾನಕ್ಕೆ ಇಳಿದಿದ್ದ ಅಮೃತಧಾರೆ ಈಗ ಮತ್ತೊಮ್ಮೆ ಐದನೇ ಸ್ಥಾನಕ್ಕೆ ಏರಿಕೆಯಾಗಿದೆ. ಅಮೃತಧಾರೆಯಲ್ಲಿ ಈ ವಾರ ಭೂಮಿಕಾ ತನ್ನ ಸಂಬಳದಲ್ಲಿ ಗೌತಮ್ ಗೆ ಟ್ರೀಟ್ ಕೊಡಿಸಿದ್ದು, ಇಬ್ಬರೂ ಒಂದಷ್ಟು ಸಂತೋಷದ ಕ್ಷಣಗಳನ್ನು ಜೊತೆಯಾಗಿ ಕಳೆದಿದ್ದಾರೆ.‌

Leave a Comment