Sonakshi Sinha: ಮದ್ವೆ ಆಗಿ ವಾರ ಕೂಡಾ ಆಗಿಲ್ಲ ಆಗಲೇ ಸೋನಾಕ್ಷಿ ಗರ್ಭಿಣೀನಾ?? ಶುರುವಾಯ್ತು ಹೊಸ ಚರ್ಚೆ

Written by Soma Shekar

Published on:

---Join Our Channel---

Sonakshi Sinha: ಬಾಲಿವುಡ್ ಬೆಡಗಿ, ಜನಪ್ರಿಯ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಕೆಲವೇ ದಿನಗಳ ಹಿಂದೆಯಷ್ಟೇ ತಮ್ಮ ಬಾಯ್ ಫ್ರೆಂಡ್ ಜಹೀರ್ ಇಕ್ಬಾಲ್ (Zaheer Iqbal) ಜೊತೆಗೆ ದಾಂಪತ್ಯ ಜೀವನಕ್ಕೆ ಅಡಿಯಿರಿಸಿದ್ದಾರೆ.‌ ಇವರಿಬ್ಬರ ಮದುವೆ ವಿಚಾರವು ಸಾಕಷ್ಟು ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿತ್ತು. ಜಹೀರ್ ಮತ್ತು ಸೋನಾಕ್ಷಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡು ತಮ್ಮ ಪ್ರೇಮಕ್ಕೆ ವಿವಾಹದ ಮೊಹರನ್ನು ಹಾಕಿದ್ದಾರೆ. ಆದರೆ ಈಗ ಮದುವೆ ಆಗಿ ಒಂದು ವಾರ ಕಳೆಯುವ ಮೊದಲೇ ಹೊಸ ಸುದ್ದಿಯೊಂದು ವೈರಲ್ ಆಗಿದೆ.

ಹೌದು, ನಟಿ ಸೋನಾಕ್ಷಿ ಸಿನ್ಹಾ ಗರ್ಭಿಣಿ ಎನ್ನುವ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಲು ಆರಂಭಿಸಿದೆ. ಇಂತಹುದೊಂದು ಸುದ್ದಿ ಹರಡಲು ಕಾರಣವಾಗಿದ್ದು ಶುಕ್ರವಾರ ಈ ಜೋಡಿ ಮುಂಬೈನ ಆಸ್ಪತ್ರೆಯೊಂದರಲ್ಲಿ ಕಾಣಿಸಿಕೊಂಡಿದ್ದಾಗಿದೆ.‌ ಸೋನಾಕ್ಷಿ ಮತ್ತು ಜಹೀರ್ ಇದೇ ಜೂನ್ 23 ರಂದು ರಿಜಸ್ಟರ್ ಮದುವೆಯಾಗಿದ್ದಾರೆ.

ಇವರದ್ದು ಅಂತರ್ಧಮೀಯ ಮದುವೆಯಾಗಿದೆ.
ನಿನ್ನೆ ಅಂದರೆ ಶುಕ್ರವಾರ ಇವರು ಮುಂಬೈನ ಕೊಕಿಲಾಬೆನ್ ಆಸ್ಪತ್ರೆಯಿಂದ ಹೊರಡುವಾಗ ಮಾದ್ಯಮಗಳ ಕಣ್ಣಿಗೆ ಬಿದ್ದಿದ್ದಾರೆ. ಫೋಟೋಗ್ರಾಫರ್ ಗಳಿಗೆ ಈ ಜೋಡಿ ಪೋಸ್ ನೀಡದೇ ಹೋಗಿದ್ದರಿಂದ ಒಂದಷ್ಟು ಅನುಮಾನಗಳು ಹುಟ್ಟಿಕೊಂಡಿವೆ.‌

ಈ ಹಿಂದೆ ಬಾಲಿವುಡ್ ನ ಮತ್ತೊಂದು ಜೋಡಿಯಾದ ರಣಬೀರ್ (Ranbir Kapoor) ಮತ್ತು ಆಲಿಯಾ (Alia Bhat) ಮದುವೆಯ ನಂತರ ಅಲ್ಪ ಸಮಯದಲ್ಲೇ ಆಲಿಯಾ ತಾನು ಗರ್ಭಿಣಿ ಎನ್ನುವ ವಿಚಾರವನ್ನು ಶೇರ್ ಮಾಡಿಕೊಂಡಿದ್ದರು. ಈಗ ಸೋನಾಕ್ಷಿ ಸಹಾ ಹಾಗೇ ಮಾಡ್ತಾರೇನೋ ಎನ್ನುವ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ.

Leave a Comment