IPL 2024: ತನ್ನನ್ನು ಔಟ್ ಮಾಡಿದ ಬೌಲರ್ ಗೆ ಭರ್ಜರಿ ಗಿಫ್ಟ್ ಕೊಟ್ಟ ಕಿಂಗ್ ಕೊಹ್ಲಿ; ಫೋಟೋ ಶೇರ್ ಮಾಡಿ ಖುಷಿಪಟ್ಟ ಯುವ ಕ್ರಿಕೆಟಿಗ

Written by Soma Shekar

Published on:

---Join Our Channel---

IPL 2024: ಐಪಿಎಲ್​ ನಲ್ಲಿ (IPL 2024) ಶನಿವಾರ ನಡೆದಂತಹ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಆರ್ ಸಿ ಬಿ ತಂಡ ಗೆಲುವನ್ನು ಸಾಧಿಸಿದ್ದು ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಯನ್ನು ನೀಡಿದೆ. ಆರ್ ಸಿ ಬಿ (RCB) ಅಭಿಮಾನಿಗಳ ಸಂತೋಷ ಸೋಶಿಯಲ್ ಮೀಡಿಯಾ ಪೋಸ್ಟ್ ಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿ ಬಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಬ್ಯಾಟಿಂಗ್ ಗೆ ಆಹ್ವಾನವನ್ನು ನೀಡಿತು.

ಮೊದಲ ಬ್ಯಾಟಿಂಗ್ ಪಡೆದುಕೊಂಡ ಗುಜರಾತ್ ಟೈಟಾನ್ಸ್ ತಂಡ ತನ್ನ ಬ್ಯಾಟಿಂಗ್ ನಲ್ಲಿ ಗಳಿಸಿದ್ದು ಮಾತ್ರ ಕೇವಲ 147 ರನ್​ ಗಳು. ಗೆಲುವಿಗಾಗಿ 148 ರನ್ ಗಳ ಗುರಿಯನ್ನು ಪಡೆದುಕೊಂಡ ಆರ್ ಸಿ ಬಿ ತಂಡಕ್ಕೆ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಬಹಳ ಉತ್ತಮವಾದ ಆರಂಭವನ್ನು ನೀಡಿದರು. ವಿರಾಟ್ ಕೊಹ್ಲಿ ಅವರು ಅರ್ಧಶತಕದತ್ತ ಮುನ್ನುಗ್ಗುವಾಗಲೇ ಸ್ಪಿನ್ನರ್ ನೂರ್ ಅಹ್ಮದ್ (Noor Ahmed) ಕೊಹ್ಲಿಯನ್ನು ಔಟ್ ಮಾಡುವಲ್ಲಿ ಯಶಸ್ಸನ್ನು ಪಡೆದುಕೊಂಡರು.

ಹನ್ನೊಂದನೇ ಓವರ್ ನಲ್ಲಿ ನೂರ್ ಅಹ್ಮದ್ ಎಸೆದಂತಹ 4ನೇ ಎಸೆತವನ್ನು ಕೊಹ್ಲಿ ಕವರ್ಸ್​ನ ಕಡೆಗೆ ಬಾರಿಸುವ ಪ್ರಯತ್ನಕ್ಕೆ ಮುಂದಾದರು. ಆದರೆ ಚೆಂಡು ಬ್ಯಾಟ್​ ಅನ್ನು ಸವರಿಕೊಂಡು ವಿಕೆಟ್ ಕೀಪರ್ ಕೈಯನ್ನ ಸೇರಿತು. ಆಗ ವಿರಾಟ್ ಕೊಹ್ಲಿಯ ವಿಕೆಟ್ ಸಿಕ್ತಿದ್ದನ್ನು ನೋಡಿದ ನೂರ್ ಅಹ್ಮದ್ ಭರ್ಜರಿ ಖುಷಿಯಿಂದ ಕುಣಿದ ಕುಪ್ಪಳಿಸಿದರು.

ನೂರ್ ಅಹ್ಮದ್ ಅವರ ನೆಚ್ಚಿನ ಕ್ರಿಕೆಟ್ ಆಟಗಾರರಲ್ಲಿ ವಿರಾಟ್ ಕೊಹ್ಲಿ (Virat Kohli) ಸಹಾ ಒಬ್ಬರಾಗಿದ್ದು, ಮೊಟ್ಟ ಮೊದಲ ಬಾರಿಗೆ ತಮ್ಮ ಅಚ್ಚುಮೆಚ್ಚಿನ ಆಟಗಾರನ ವಿಕೆಟ್ ಅನ್ನು ಪಡೆದಿದ್ದು ನೂರ್ ಅಹ್ಮದ್ ಗೆ ದೊಡ್ಡ ಸಂಭ್ರಮದ ಲಕ್ಷಣವಾಗಿತ್ತು. ಈಗ ವಿರಾಟ್ ಕೊಹ್ಲಿ ನೂರ್ ಅವರ ಖುಷಿಯನ್ನು ದುಪ್ಪಟ್ಟು ಮಾಡುವ ಕೆಲಸವನ್ನು ಮಾಡಿದ್ದಾರೆ.

ಪಂದ್ಯದ ನಂತರ ವಿರಾಟ್ ಕೊಹ್ಲಿ ಅವರು ತಮ್ಮ‌ ಜರ್ಸಿಯನ್ನು ನೂರ್ ಅಹ್ಮದ್ ಗೆ ನೀಡಿದ್ದಾರೆ. ಅಲ್ಲದೇ ಅದ್ಭುತವಾಗಿ ಬೌಲಿಂಗ್ ಮಾಡಿರುವೆ, ನಿನಗೆ ಒಳ್ಳೆಯದಾಗಲಿ ಎಂದು ತಮ್ಮ ಆಟೋಗ್ರಾಪ್ ಇರುವ ಜೆರ್ಸಿಯನ್ನು ಕೊಹ್ಲಿ ನೂರ್ ಅಹ್ಮದ್ ಗೆ ಉಡುಗೊರೆಯಾಗಿ ನೀಡುವ ಮೂಲಕ ಮತ್ತೊಮ್ಮೆ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.

ಗುಜರಾತ್ ಟೈಟಾನ್ಸ್ ನ ಸ್ಪಿನ್ನರ್ ನೂರ್ ಅಹ್ಮದ್ ಅವರು ವಿರಾಟ್ ಕೊಹ್ಲಿ ಕಡೆಯಿಂದ ತನಗೆ ಸಿಕ್ಕ ಉಡುಗೊರೆಯ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಇದಕ್ಕೆ ಕ್ರಿಕೆಟ್ ಅಭಿಮಾನಿಗಳು ಮತ್ತು ವಿರಾಟ್ ಕೊಹ್ಲಿ ಅವರ ಅಭಿಮಾನಿಗಳಿಂದ ಮೆಚ್ಚುಗೆ ಗಳು ಹರಿದು ಬರುತ್ತಿದೆ.

Leave a Comment