Shreyanka Patil: RCB ಆಟಗಾರ್ತಿ, ಕನ್ನಡತಿ ಶ್ರೇಯಾಂಕ ಪಾಟೀಲ್ ಗೆ ಸಿಕ್ತು ತವರಲ್ಲಿ ವೈಭವದ ಸ್ವಾಗತ

Written by Soma Shekar

Updated on:

---Join Our Channel---

Shreyanka Patil : ಭಾರತ ಕ್ರಿಕೆಟ್ ತಂಡದ ಆಟಗಾರ್ತಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡದ ಆಟಗಾರ್ತಿಯೂ ಆಗಿರುವ ಶ್ರೇಯಂಕಾ ಪಾಟೀಲ್ ಆರ್ ಸಿ ಬಿ ಮಹಿಳಾ ತಂಡದ ಗೆಲುವಿನ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಅವರನ್ನು ಹಿಂಬಾಲಿಸುವವರ ಸಂಖ್ಯೆ ಸಹಾ ಏರಿಕೆಯಾಗುತ್ತಿದೆ. ಶ್ರೇಯಾಂಕ ಪಾಟೀಲ್ ಅವರು ತಮ್ಮ ಸ್ವಂತ ಊರಿಗೆ ಭೇಟಿಯನ್ನ ನೀಡಿದ್ದು, ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗಿದೆ.

RCB ತಂಡದ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ (Shreyanka Patil) ಅವರ ಸ್ವಂತ ಊರು ಜೇವರ್ಗಿ ತಾಲೂಕಿನ ಕೋಳಕೂರು ಗ್ರಾಮವಾಗಿದೆ. ಹುಟ್ಟೂರಿಗೆ ಬಂದಂತಹ ಶ್ರೇಯಾಂಕ ಅವರನ್ನು ಅಲ್ಲಿನ ಜನರು ಬಹಳ ಸಂಭ್ರಮದಿಂದ ಬರ ಮಾಡಿಕೊಂಡಿದ್ದಾರೆ. ಶ್ರೇಯಾಂಕ ಪಾಟೀಲ್ ಅವರ ಮೇಲೆ ಹೂಮಳೆಯನ್ನ ಸುರಿಸಿರುವ ಗ್ರಾಮಸ್ಥರು ಶ್ರೀ ಸಿದ್ದಬಸವೇಶ್ವರ ದೇವಸ್ಥಾನದವರೆಗೂ ಅದ್ದೂರಿಯಾಗಿ ಮೆರವಣಿಗೆ ಮಾಡಿದ್ದಾರೆ.

ಇದಾದ ನಂತರ ಸಿದ್ದ ಬಸವೇಶ್ವರ ದೇವರಿಗೆ ವಿಶೇಷ ಪೂಜೆಯನ್ನ ಸಲ್ಲಿಸಿದ ಶ್ರೇಯಾಂಕ ಪಾಟೀಲ್ ಅವರನ್ನು ಮತ್ತು ಅವರ ಕುಟುಂಬಸ್ಥರನ್ನು ಗ್ರಾಮದ ಜನರು ಸನ್ಮಾನ ಮಾಡಿದ್ದು, ಶ್ರೇಯಾಂಕ ಅವರು ತಮ್ಮ ವೃತ್ತಿ ಜೀವನದಲ್ಲಿ ಇನ್ನು ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಳ್ಳಲಿ ಎಂದು ಶುಭವನ್ನ ಹಾರೈಸಿದ್ದಾರೆ. ನಡೆದ ಸಮಾರಂಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು, ಶ್ರೇಯಾಂಕ ಅವರಿಗೆ ಶುಭ ಕೋರಿದ್ದಾರೆ.

ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಶ್ರೇಯಾಂಕ ಚಿಕ್ಕ ವಯಸ್ಸಿನಿಂದಲೂ ಏನಾದ್ರೂ ಸಾಧನೆ ಮಾಡಬೇಕು, ನಮ್ಮೂರಿಗೆ ಕೀರ್ತಿಯನ್ನು ತರಬೇಕು ಅನ್ನೋ ಆಸೆಯೊಂದಿತ್ತು. ಆ ಕನಸು ನಿಮ್ಮೆಲ್ಲರ ಆಶೀರ್ವಾದದಿಂದ ನೆರವೇರಿದೆ ಎಂದು ಹೇಳಿದ್ದು, ಇದೇ ವೇಳೆ ಅವರು ಕಾಲೇಜು ವಿದ್ಯಾರ್ಥಿಗಳಿಗೆ ಸ್ಪೂರ್ತಿಯನ್ನು ತುಂಬುವಂತಹ ಒಂದಷ್ಟು ಮಾತುಗಳನ್ನು ಆಡಿದ್ದಾರೆ.

Leave a Comment