ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್: ಮಹತ್ವದ ನಿರ್ಣಯ ತಿಳಿಸಿದ ಮಿಸ್ಟರ್ ಕೂಲ್ ಧೋನಿ: ಅಭಿಮಾನಿಗಳು ಥ್ರಿಲ್

ಕ್ರಿಕೆಟ್ ಲೋಕದಲ್ಲಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಸ್ಟೈಲ್ಲೇ ಬೇರೆ. ಧೋನಿ ಮೈದಾನಕ್ಕೆ ಕಾಲಿಟ್ಟರೆ ಸಾಕು, ಅವರ ಕ್ಯಾಪ್ಟನ್ಸಿ ಮತ್ತು ಆಟಕ್ಕೆ ಫಿದಾ ಆಗುತ್ತಾರೆ ಕ್ರಿಕೆಟ್ ಅಭಿಮಾನಿಗಳು. ಧೋನಿ ತೆಗೆದುಕೊಳ್ಳುವ ನಿರ್ಣಯಗಳು ಎಲ್ಲರಿಗೂ ಆಶ್ಚರ್ಯವನ್ನು ಉಂಟು ಮಾಡುತ್ತದೆ.‌ ಆದ್ದರಿಂದಲೇ ಧೋನಿ ಯಶಸ್ವೀ ಕ್ಯಾಪ್ಟನ್ ಗಳಲ್ಲಿ ಒಬ್ಬರಾಗಿ ತಮ್ಮದೇ ಆದ ಛಾಪನ್ನು ಮೂಡಿಸುವಲ್ಲಿ ಯಶಸ್ಸನ್ನು ಪಡೆದುಕೊಂಡಿದ್ದಾರೆ. ಕ್ರಿಕೆಟ್ ನ ಎಲ್ಲಾ ಫಾರ್ಮ್ಯಾಟ್ ಗಳಿಗೂ ನಿವೃತ್ತಿಯನ್ನು ಘೋಷಣೆ ಮಾಡಿರುವ ಧೋನಿ ಪ್ರಸ್ತುತ ಐಪಿಎಲ್ ನಲ್ಲಿ ಮಾತ್ರ ಧೋನಿ ಆಡುತ್ತಿದ್ದಾರೆ. […]

Continue Reading

ಉತ್ತಮ ಉದ್ದೇಶಕ್ಕಾಗಿ ಹಸಿರು ಬಣ್ಣದ ಜೆರ್ಸಿ ತೊಟ್ಟು RCB, ಹೈದ್ರಾಬಾದ್ ತಂಡದ ವಿರುದ್ಧ ಮೈದಾನಕ್ಕೆ ಇಳಿಯಲಿದೆ!

ಭಾನುವಾರ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಡೆಯಲಿರುವ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಸಿರು ಬಣ್ಣದ ಜರ್ಸಿ ಧರಿಸಿ ಅಭಿಮಾನಿಗಳ ಮುಂದೆ ಬರಲಿದೆ. ಆರ್ ಸಿ ಬಿ ತಂಡದ ಅಭಿಮಾನಿಗಳಿಗೆ ಆರ್ ಸಿ ಬಿ ಕ್ರೀಡಾಕಾರರು ಹಸಿರು ಜರ್ಸಿಯನ್ನು ತೊಟ್ಟು ಬರುವುದರ ಹಿಂದಿನ ಕಾರಣ ಏನೆಂದು ಈಗಾಗಲೇ ತಿಳಿದಿರುತ್ತದೆ. ಈ ವಿಷಯ ತಿಳಿಯದೆ ಇರುವವರಿಗೆ ಅದನ್ನು ತಿಳಿಸಲು ಹೊರಟಿದ್ದೇವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಸಿರು ಬಣ್ಣದ ಜರ್ಸಿ ತೊಟ್ಟು ಬರುವುದರ ಹಿಂದೆ ಒಂದು ಬಹಳ […]

Continue Reading

IPL 2022: ತಂದೆ ಕೊಲ್ಲ ಬಯಸಿದ, ತಾಯಿ ಹೋರಾಡಿದಳು: IPL ಸ್ಟಾರ್ ಆಟಗಾರನ ಹೋರಾಟದ ಕಥೆ!!

ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ರೋವ್ಮನ್ ಪಾವೆಲ್ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ತನ್ನ ಬ್ಯಾಟಿಂಗ್ ಅಬ್ಬರವನ್ನು ಮೆರೆಯುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ನ ಪರವಾಗಿ ಆಡುತ್ತಿರುವ ಪಾವೆಲ್ ಗುರುವಾರ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ವಿರುದ್ಧ 21 ಓಟಗಳಿಂದ ಅದ್ಭುತವಾದ ವಿಜಯವನ್ನು ತಂದುಕೊಡುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡದಸ್ಟಾರ್ ಪ್ಲೇಯರ್ ಆಗಿ ರೋವ್ಮನ್ ಪಾವೆಲ್ ತನ್ನ ಸಾಮರ್ಥ್ಯವನ್ನು ಪ್ರದರ್ಶನವನ್ನು ಮಾಡಿ, ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. 35 ಬಾಲ್ […]

Continue Reading

RCB v/s CSK ಪಂದ್ಯದ ವೇಳೆ ಯುವಕನಿಗೆ ಲವ್ ಪ್ರಪೋಸ್ ಮಾಡಿದ ಯುವತಿ: ವೈರಲ್ ಆಯ್ತು ವೀಡಿಯೋ

ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆದ ಬುಧವಾರ ನಡೆದ RCB v/s CSK ಪಂದ್ಯ ವಿಶೇಷವಾಗಿತ್ತು. ‌ಒಂದೆಡೆ ಈ ಮ್ಯಾಚ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಖುಷಿಯನ್ನು ನೀಡುವ ಪಂದ್ಯವಾಗಿತ್ತು. ‌ಏಕೆಂದರೆ ಆರ್ ಸಿ ಬಿ ಹದಿಮೂರು ರನ್ ಗಳಿಂದ ಸಿ ಎಸ್ ಕೆ ತಂಡಕ್ಕೆ ಸೋಲಿನ ರುಚಿಯನ್ನು ನೋಡುವಂತೆ ಮಾಡಿದೆ. ತಮ್ಮ ಅಭಿಮಾನ ತಂಡದ ಗೆಲುವು ಆರ್ ಸಿ ಬಿ ಅಭಿಮಾನಿಗಳಿಗೆ ಖುಷಿಯನ್ನು ‌ನೀಡುವಾಗಲೇ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಘಟನೆ ಕೂಡಾ ಆರ್ ಸಿ ಬಿ […]

Continue Reading

ಚಮಚದಲ್ಲಿ ತಿನ್ನಿಸೋದು ಸಾಧ್ಯ ಇಲ್ಲ: ಜಡೇಜಾ ನಾಯಕತ್ವ ಬಿಟ್ಟ ಮೇಲೆ ಧೋನಿ ಮುಕ್ತ ಮಾತು!!

ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಜಯವನ್ನು ಪಡೆದುಕೊಂಡ ನಂತರ ಮಹೇಂದ್ರ ಸಿಂಗ್ ಧೋನಿ ಯವರು ರವೀಂದ್ರ ಜಡೇಜಾ ತಂಡದ ಕ್ಯಾಪ್ಟನ್ ಶಿಪ್ ತೊರೆದ ವಿಚಾರವಾಗಿ ಮುಕ್ತವಾಗಿ ಮಾತನಾಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅವರು ಮಾತನಾಡುತ್ತಾ ಜಡ್ಡು ಗೆ ನಾನು ಮಾತಿನಲ್ಲಿ ಹೇಳಬಲ್ಲೇ, ಆದರೆ ಚಮಚವನ್ನು ಹಿಡಿದುಕೊಂಡು ತಿನ್ನಿಸಲಾಗದು ಎನ್ನುವ ಮಾತನ್ನು ಹೇಳಿದ್ದಾರೆ. ಅವರಿಗೆ ತಮ್ಮ ನಿರ್ಣಯದ ಬಗ್ಗೆ ಸ್ವಂತ ಜವಾಬ್ದಾರಿ ಇರಬೇಕಿತ್ತು ಎಂದಿದ್ದಾರೆ. ನಾಯಕತ್ವದ ಜೊತೆಗೆ ಅವರ […]

Continue Reading

IPL 2022: ಸತತ ಸೋಲಿನಿಂದ ಕಂಗೆಟ್ಟ KKR: ಗರಂ ಆದ ಶ್ರೇಯಸ್ ಅಯ್ಯರ್ ಹೇಳಿದ್ದೇನು?

ಐಪಿಎಲ್ 2022 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸೋಲಿನ ಸರಣಿಯು ಮುಂದುವರೆದಿದೆ. ತಂಡವು ಈಗಾಗಲೇ ಒಂಬತ್ತು ಪಂದ್ಯಗಳನ್ನು ಆಡಿದೆ. ಆದರೆ ಈ ಒಂಬತ್ತು ತಿಂಗಳ ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿರುವುದು ಮೂರು ಪಂದ್ಯಗಳಲ್ಲಿ ಮಾತ್ರ. ಆರು ಪಂದ್ಯಗಳಲ್ಲಿ ಸೋಲಿನ ರುಚಿ ನೋಡಿರುವ ತಂಡವು ಪಾಯಿಂಟ್ ಟೇಬಲ್ ನಲ್ಲಿ ಎಂಟನೇ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಗುರುವಾರ ವಾಂಖಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೆಕೆಆರ್ ಅನ್ನು ನಾಲ್ಕು ವಿಕೆಟ್ ಗಳಿಂದ ಮಣಿಸಲು ಸಫಲವಾಗಿದ್ದು, ಜಯಭೇರಿಯನ್ನು ಬಾರಿಸಿದೆ. ಡೆಲ್ಲಿ […]

Continue Reading

66 ರ ಹರೆಯದಲ್ಲಿ 38 ರ ಶಿಕ್ಷಕಿಯೊಡನೆ 2ನೇ ಮದುವೆಗೆ ಸಜ್ಜಾದ ಭಾರತದ ಮಾಜಿ ಕ್ರಿಕೆಟ್ ಆಟಗಾರ

ಭಾರತದ ಮಾಜಿ ಕ್ರಿಕೆಟ್ ಆಟಗಾರ ಅರುಣ್ ಲಾಲ್ ಅವರು ತಮ್ಮ ಬಹುಕಾಲದ ಗೆಳತಿ ಬುಲ್ ಬುಲ್ ಸಹಾ ಅವರೊಡನೆ ಮದುವೆಯಾಗಲು ಸಿದ್ಧವಾಗಿದ್ದಾರೆ. ಅರುಣ್ ಲಾಲ್ ಅವರಿಗೀಗ 66 ವರ್ಷ ವಯಸ್ಸಾಗಿದ್ದು, ಅವರು ಪ್ರಸ್ತುತ ಪಶ್ಚಿಮ ಬಂಗಾಳದ ಮುಖ್ಯ ಕೋಚ್ ಆಗಿ ಕಾರ್ಯವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಬರುವ ಮೇ 2 ರಂದು ಅವರು ತಮ್ಮ ಗೆಳತಿ 38 ವರ್ಷ ವಯಸ್ಸಿನ ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಬುಲ್ ಬುಲ್ ಸಹಾ ಅವರನ್ನು ವಿವಾಹವಾಗುವ ಮೂಲಕ ಮತ್ತೊಮ್ಮೆ ಹೊಸ ವೈವಾಹಿಕ ಜೀವನಕ್ಕೆ ಅಡಿಯಿಡಲು […]

Continue Reading

IPL 2022: ನಡೆಯದ ಧೋನಿ ಮ್ಯಾಜಿಕ್: ಅಂತ್ಯವಾಯ್ತಾ ಚೆನ್ನೈ ಸೂಪರ್ ಕಿಂಗ್ಸ್ ಹಾದಿ??

ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ರವೀಂದ್ರ ಜಡೇಜಾ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುನ್ನಡೆಯುವ ಹಾದಿಯು ಬಹುತೇಕ ಕೊನೆಯ ಹಂತಕ್ಕೆ ಬಂದಂತೆ ಕಾಣುತ್ತಿದೆ. ಸೋಮವಾರದಂದು ಪಂಜಾಬ್ ಕಿಂಗ್ಸ್ ವಿರುದ್ಧ ನಡೆದಂತಹ ಪಂದ್ಯದಲ್ಲಿ ಕೂಡಾ ಚೆನ್ನೈ ಸೂಪರ್ ಕಿಂಗ್ಸ್ ಸೋಲಿಗೆ ಶರಣಾಗಿದೆ. ಇದುವರೆಗೂ ಆಡಿರುವ 8 ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರವೇ ಗೆಲುವನ್ನು ಕಂಡಿದ್ದು, ಆರು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ. ಇನ್ನು ಇದೀಗ ಪ್ಲೇ ಆಫ್ ಸುತ್ತಿಗೆ ಪ್ರವೇಶ ನೀಡಬೇಕು […]

Continue Reading

IPL 2022: RCB ಇಂತದೊಂದು ದಾಖಲೆ ಬರೆಯುತ್ತೆ ಅಂತ ನಿರೀಕ್ಷೆ ಕೂಡಾ ಮಾಡಿರಲಿಲ್ಲ, ಅಭಿಮಾನಿಗಳು ಶಾಕ್

ಐಪಿಎಲ್ 36 ನೇ ಪಂದ್ಯದಲ್ಲಿ ಆರ್ ಸಿ ಬಿ v/s ಎಸ್ ಆರ್ ಹೆಚ್ ಪಂದ್ಯದಲ್ಲಿ ಆರ್ ಸಿ ಬಿ ಒಂದು ಕೆಟ್ಟ ದಾಖಲೆಯನ್ನು ಬರೆಯುವ ಮೂಲಕ ಸುದ್ದಿಯಾಗಿದೆ. ಈ ಪಂದ್ಯದಲ್ಲಿ ಎಸ್ ಆರ್ ಹೆಚ್ ತಂಡವು ಟಾಸ್ ಗೆದ್ದು, ಎಸ್ ಆರ್ ಹೆಚ್ ತಂಡದ ನಾಯಕ ಕೇನ್ ವಿಲಿಯಮ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಇನ್ನಿಂಗ್ಸ್ ಆರಂಭಿಸಿದ ಆರ್ ಸಿ ಬಿ ಫಾಫ್ ಡು ಫ್ಲೆಸಿಸ್ ಕೇವಲ ನಾಲ್ಕು ರನ್ ಗಳನ್ನು ಗಳಿಸಿ ಔಟಾದರೆ, ವಿರಾಟ್ ಕೊಹ್ಲಿ […]

Continue Reading

ಸಾಕಿನ್ನು ವಿರಾಟ್ ಕೊಹ್ಲಿಗೆ ವಿಶ್ರಾಂತಿಯನ್ನು ನೀಡಿ: ಮಾಜಿ ಆಟಗಾರರು ಕೊಟ್ಟ ಸಲಹೆ

ವಿರಾಟ್ ಕೊಹ್ಲಿ ಶತಕ ಬಾರಿಸುವುದು ಯಾವಾಗ?? ಖಂಡಿತ ಇಂತಹುದೊಂದು ಪ್ರಶ್ನೆಯನ್ನು ಸೋಶಿಯಲ್ ಮೀಡಿಯಾಗಳಲ್ಲಿ ಆರ್ ಸಿ ಬಿ ಅಭಿಮಾನಿಗಳು ಕೇಳುತ್ತಿದ್ದಾರೆ ಹಾಗೂ ವಿರಾಟ್ ಕೊಹ್ಲಿ ಅವರ ಭರ್ಜರಿ ಬ್ಯಾಟಿಂಗ್ ಅನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ವಿರಾಟ್ ಕೊಹ್ಲಿ ಅವರು ಟೀಂ ಇಂಡಿಯಾ ಮತ್ತು ಐಪಿಎಲ್ ನಲ್ಲೂ ಸಹಾ ಆರ್ ಸಿ ಬಿ ಯ ನಾಯಕತ್ವ ತೊರೆದಿದ್ದಾರೆ. ಆದರೆ ಅನಂತರ ಅವರು ಬ್ಯಾಟ್ಸ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದರೂ ಅಭಿಮಾನಿಗಳ ಮನಸ್ಸಿಗೆ ಮುದ ನೀಡುವಂತಹ ಭರ್ಜರಿ ಪ್ರದರ್ಶನ ಇನ್ನೂ ನೀಡಿಲ್ಲ. […]

Continue Reading