Sanjana Galrani: ದರ್ಶನ್ ಗಾಗಿ ಪ್ರಾರ್ಥನೆ ಮಾಡ್ತೀನಿ, ಮಾತೇ ಬರ್ತಿಲ್ಲ; ವಿ ಷಾದದಿಂದ ಮಾತನಾಡಿದ ಸಂಜನಾ ಗಲ್ರಾನಿ

Written by Soma Shekar

Updated on:

---Join Our Channel---

Sanjana Galrani: ಇಂದು ಬೆಳಗ್ಗೆಯಿಂದ ಸೋಶಿಯಲ್ ಮೀಡಿಯಾಗಳಲ್ಲಿ ಮತ್ತು ಮಾದ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿರುವುದು ನಟ ದರ್ಶನ್ (Actort Darshan Arrest) ಅವರನ್ನು ಪೋಲಿಸರು ಬಂಧಿಸಿರುವ ವಿಚಾರವೇ ಆಗಿದೆ. ಎಲ್ಲೆಲ್ಲೂ ಈ ಸುದ್ದಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಒಂದು ದೊಡ್ಡ ಚರ್ಚೆಯೇ ನಡೆಯುತ್ತಿದೆ. ಹೊಸ ಹೊಸ ಅಪ್ಡೇಟ್ ಗಳು ಹೊರಗೆ ಬರುತ್ತಿದ್ದು ಅಭಿಮಾನಿಗಳು ಮಾತ್ರ ನಟನ ಪರವಾಗಿ ಮಾತನಾಡುತ್ತಿದ್ದಾರೆ.

ನಟ ದರ್ಶನ್ ಅವರನ್ನು ರೇಣುಕಾಸ್ವಾಮಿ ಎನ್ನುವವರ ಕೊ ಲೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಈಗ ಇದೇ ವಿಚಾರವಾಗಿ ನಟಿ ಸಂಜನಾ ಗಲ್ರಾನಿ ಅವರು ವೀಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಸಂಜನಾ ಗಲ್ರಾನಿ ಅವರು ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಕುಟುಂಬದ ಕಡೆಗೆ ಅವರು ತಮ್ಮ ಹೆಚ್ಚಿನ ಆದ್ಯತೆಯನ್ನು ನೀಡಿದ್ದಾರೆ.

ಸಂಜನಾ ಗಲ್ರಾನಿ (Sanjana Galrani) ಅವರು ವೀಡಿಯೋ ದಲ್ಲಿ, ಈ ಸುದ್ದಿ ನೋಡಿ ಶಾ ಕ್ ಆಗಿದೆ. ಚಿಂತೆ ಕಾಡಿದೆ. ದೇವರ ಬಳಿ ಪ್ರಾರ್ಥನೆಯನ್ನು ಮಾಡಿದ್ದೇನೆ. ಅವರು ಅರೆಸ್ಟ್ ಆಗಬಾರದು. ಇದು ಶಾ ಕಿಂ ಗ್ ನ್ಯೂಸ್. ಅವರು ಬಿಡುಗಡೆ ಆಗಲಿ ಎಂದು ಕೇಳಿಕೊಳ್ಳುತ್ತೇನೆ. ಅವರ ಹೆಸರು ಎಫ್ಐಆರ್ ನಲ್ಲಿಇರಬಾರದು ಎಂದು ಕೇಳಿಕೊಳ್ಳುತ್ತೇನೆ‌. ನನಗೆ ಮಾತೇ ಬರುತ್ತಿಲ್ಲ ಎಂದಿದ್ದಾರೆ.

ನಟ ದರ್ಶನ್ ಅವರ ಆತ್ಮೀಯರಾದ ಪವಿತ್ರ ಗೌಡ ಅವರಿಗೆ ರೇಣುಕಾಸ್ವಾಮಿ ಎನ್ನುವವರು ಅ ಸ ಭ್ಯವಾದ ರೀತಿಯಲ್ಲೇ ಸಂದೇಶಗಳನ್ನು ನೀಡಿದ್ದರು ಎನ್ನುವ ಕಾರಣದಿಂದ ಅವರ ಕೊ ಲೆ ಯಾಗಿದೆ ಎನ್ನಲಾಗಿದ್ದು, ಇದರಲ್ಲಿ ನಟ ದರ್ಶನ್ ಅವರ ಕೈವಾಡ ಇದೆ ಎನ್ನುವುದು ಸದ್ಯಕ್ಕೆ ಪ್ರಮುಖ ಮಾದ್ಯಮಗಳು ಹೇಳುತ್ತಿರುವಂತಹ ಸುದ್ದಿಗಳಾಗಿದೆ..

Leave a Comment