Darshan Brother: ಬಾಡಿಗೆ ಮನೆಯಲ್ಲಿ ದಿನಕರ್ ತೂಗುದೀಪ, 3 ಪ್ಲೋರ್ ನ ದೊಡ್ಡ ಮನೆಯಲ್ಲಿ ಪವಿತ್ರಾ ಗೌಡ

Written by Soma Shekar

Published on:

---Join Our Channel---

Darshan Brother: ನಟ ದರ್ಶನ್ (Darshan) ಮತ್ತು ಪವಿತ್ರ ಗೌಡ (Pavithra Gowda) ವಿರುದ್ಧ ಚಿತ್ರದುರ್ಗದ ರೇಣುಕಾ ಸ್ವಾಮಿ ಕೊ ಲೆ ಪ್ರಕರಣದ ಆರೋಪ ಇದ್ದು, ಪ್ರಸ್ತುತ ಇಬ್ಬರೂ ಪೊಲೀಸರ ಕಸ್ಟಡಿಯಲ್ಲಿದ್ದು ವಿಚಾರಣೆ ನಡೆಯುತ್ತಿದೆ. ಇವೆಲ್ಲವುಗಳ ನಡುವೆ ದರ್ಶನ್ ಗೆ ಸಂಬಂಧಪಟ್ಟಂತಹ ಒಂದಷ್ಟು ಹೊಸ ವಿಷಯಗಳು ಮಾಧ್ಯಮಗಳಲ್ಲಿ ಸುದ್ದಿಗಳ ರೂಪದಲ್ಲಿ ಹರಿದಾಡುತ್ತಿವೆ. ನಟ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ಮತ್ತು ತಾಯಿ ಮೀನಾ ಅವರ ನಡುವೆ ಮನಸ್ತಾಪ ಆಗಿದೆ ಎನ್ನುವ ವಿಷಯವೊಂದು ಈಗ ಮಾದ್ಯಮಗಳ ಸುದ್ದಿಗಳಲ್ಲಿ ಹರಿದಾಡುತ್ತಿದೆ.‌

ಸೋಶಿಯಲ್ ಮೀಡಿಯಾದಲ್ಲಿ ಪವಿತ್ರ ಗೌಡಗೆ ಕೋಟ್ಯಂತರ ರೂಪಾಯಿಗಳ ಮನೆ, ದಿನಕರ್ ತೂಗದೀಪ ಬಾಡಿಗೆ ಮನೆ ಎಂದು ಬಹಳಷ್ಟು ಜನ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ದರ್ಶನ್ ನಾಯಕನಾಗಿ ಯಶಸ್ಸನ್ನು ಪಡೆದಂತಹ ಸಾರಥಿ ಸಿನಿಮಾದ ಗೆಲುವು ಯಾರದ್ದು ಎನ್ನುವ ವಿಚಾರದಲ್ಲಿ ದರ್ಶನ್ ಮತ್ತು ದಿನಕರ್ ನಡುವೆ ಮನಸ್ತಾಪ ಆಗಿದೆ. ಸಾರಥಿ ಸಿನಿಮಾವನ್ನು ದಿನಕರ್ ತೂಗುದೀಪ ನಿರ್ದೇಶನ ಮಾಡಿದ್ದರು.

ಸಿನಿಮಾದ ಯಶಸ್ಸು ಯಾರಿಂದ ಎನ್ನುವ ವಿಚಾರಕ್ಕೆ ಆದ ಮನಸ್ತಾಪದಿಂದ ದರ್ಶನ್ ತಮ್ಮನ (Darshan Brother) ಮೇಲೆ ಹಲ್ಲೆ ಮಾಡಿದ್ದರಂತೆ.‌ ತಾಯಿಯ ಜೊತೆಗೂ ದರ್ಶನ್ ಅವರು ಮುನಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಮೀನಾ ತೂಗುದೀಪ ಅವರು ಮೈಸೂರಿನಲ್ಲಿ ಒಬ್ಬರೇ ವಾಸವಿದ್ದು, ದರ್ಶನ್ ಅವರು ಆ ಮನೆಗೆ ಭೇಟಿ ನೀಡಿ ವರ್ಷಗಳೇ ಕಳೆದಿವೆ ಎನ್ನಲಾಗಿದೆ. ದರ್ಶನ್ ಮೈಸೂರಿಗೆ ಹೋದರೂ ತಮ್ಮ ತೂಗುದೀಪ ಫಾರ್ಮ್ ಹೌಸ್ ಅಥವಾ ಹೋಟೆಲ್ ನಲ್ಲಿ ಉಳಿದುಕೊಳ್ತಾರೆ ಎನ್ನಲಾಗಿದೆ.

ಇನ್ನು ಅವರ ಸಹೋದರ ದಿನಕರ ತೂಗುದೀಪ (Dinakar Thoogudeepa) ಸಂದರ್ಶನ ಒಂದರಲ್ಲಿ ಮಾತನಾಡುತ್ತಾ, ತಾವು ಇನ್ನೂ ಬೆಂಗಳೂರಲ್ಲಿ 1BHK ಮನೆಯಲ್ಲಿ ಬಾಡಿಗೆ ಕೊಟ್ಟು ವಾಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಇನ್ನು ಪವಿತ್ರ ಗೌಡ ಬೆಂಗಳೂರಿನ ಆರ್ ಆರ್ ನಗರದಲ್ಲಿ ಮೂರು ಫ್ಲೋರ್ ಇರುವ ಮನೆಯಲ್ಲಿ ವಾಸವಿದ್ದಾರೆ. ಅವರು ಆ ಮನೆಗೆ ಕಾಲಿಟ್ಟು ಹತ್ತು ವರ್ಷಗಳಾಗಿದ್ದು ಅವರ ಮಗಳು ಹಾಸ್ಟೆಲ್ ನಲ್ಲಿ ಇದ್ದಾಳೆ.

ಪವಿತ್ರ ಗೌಡ ಅವರು ರೆಡ್ ಕಾರ್ಪೆಟ್ ಹೆಸರಿನ ಡಿಸೈನರ್ ಶಾಪ್ ಅನ್ನು ಹೊಂದಿದ್ದಾರೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಒಂದು ದುಬಾರಿ ಕಾರು ಖರೀದಿ ಮಾಡಿದ್ದರು. ಅದನ್ನ ನೋಡಿ ಪವಿತ್ರ ಅವರು ಅಂತದೊಂದು ಕಾರ್ ಬೇಕು ಅಂತ ಹಠ ಮಾಡಿದ್ದರಿಂದ ದರ್ಶನ್ ಒಂದು ಹೊಸ ಕಾರನ್ನು ಪವಿತ್ರಾಗೂ ಕೊಡಿಸಿದ್ದಾರೆ ಎನ್ನಲಾಗಿದೆ.

ಪವಿತ್ರ ಗೌಡ ಅವರ ತವರು ಮನೆ ಕಡೆಯವರು ಆರ್ಥಿಕವಾಗಿ ಚೆನ್ನಾಗಿದ್ದಾರೆ ಎಂದು ಹೇಳಲಾಗುತ್ತದೆ. ಏನೇ ಆದರೂ ಪವಿತ್ರ ಗೌಡ ಅವರಿಗೆ ಮೂರು ಫ್ಲೋರ್ ಮನೆ, ಕೋಟಿ ಬೆಲೆ ಬಾಳುವ ಕಾರು, ರೆಡ್ ಕಾರ್ಪೆಟ್ ಹೆಸರಿನ ದುಬಾರಿ ಶಾಪ್ ಎಲ್ಲಾ ಹೇಗೆ ಸಾಧ್ಯ ಅನ್ನೋದು ಕೆಲವರ ಪ್ರಶ್ನೆಯಾಗಿದ್ದು, ದರ್ಶನ್ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವ ಹಾಗೆ ಮಾಡಿದ್ದಾರೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

Leave a Comment