Bulldozer Action: ಕೆಲವೇ ದಿನಗಳ ಹಿಂದೆಯಷ್ಟೇ ಮಧ್ಯಪ್ರದೇಶದ (Madhya Pradesh) ಗುನಾ ಜಿಲ್ಲೆಯಲ್ಲಿ ಯುವತಿಯೊಬ್ಬಳ ಮೇಲೆ ಅ ತ್ಯಾ ಚಾ ರ ಮಾಡಿದ್ದಲ್ಲದೇ ಯುವತಿಗೆ ತೀವ್ರವಾದ ದೈ ಹಿ ಕ ಹಿಂ ಸೆ ನೀಡಿದ ಘಟನೆಯೊಂದು (Crime News) ಬೆಳಕಿಗೆ ಬಂದಿದೆ. ಬಾಧಿತ ಯುವತಿಯ ತಾಯಿಯ ಹೆಸರಿನಲ್ಲಿ ಇದ್ದಂತಹ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಕೇಳಿದ್ದು, ಅದಕ್ಕೆ ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ಆರೋಪಿ ಅಯಾನ್ ಪಠಾಣ್ (Ayan Pathan) ಯುವತಿಯನ್ನು ಬಂಧಿಸಿ ಇಟ್ಟು, ಆಕೆಯ ಮೇಲೆ ಅ ಮಾ ನು ಷವಾಗಿ ಲೈಂ ಗಿ ಕ ದೌ ರ್ಜ ನ್ಯ ಎಸಗಿದ್ದಾನೆ.
ಯುವತಿಗೆ ಬೆಲ್ಟ್ ಹಾಗೂ ಪೈಪ್ ನಿಂದ ಹೊಡೆದಿದ್ದಾನೆ, ಆಕೆಯ ಮೈಮೇಲೆ ಆದ ಗಾಯಗಳಿಗೆ ಹಾಗೂ ಕಣ್ಣಿಗೆ ಮೆಣಸಿನ ಪುಡಿಯನ್ನು ಹಾಕಿದ್ದಾನೆ. ಯುವತಿಯು ಕಿರುಚಬಾರದೆಂದು ಆಕೆಯ ತುಟಿಗಳಿಗೆ ಫೆವಿಕ್ವಿಕ್ ಹಾಕಿ ಅಂಟುವಂತೆ ಮಾಡಿ ಕ್ರೌ ರ್ಯ ವನ್ನು ಮೆರೆದಿದ್ದಾನೆ. ಆದರೆ ಯುವತಿ ಹೇಗೋ ಕಷ್ಟಪಟ್ಟು ಆ ಕಿರಾತಕನ ಬಂಧನದಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಈ ಘಟನೆ ಹೊರ ಬಂದ ಮೇಲೆ ಇದನ್ನು ಮಧ್ಯಪ್ರದೇಶ ಸರ್ಕಾರವು ಗಂಭೀರವಾಗಿ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತಾಧಿಕಾರಿಗಳು ಬುಲ್ಡೋಜರ್ ನಿಂದ (Bulldozer Action) ತಪ್ಪಿತಸ್ಥನ ಮನೆಯನ್ನು ನೆಲಸಮ ಮಾಡಲು ನೋಟೀಸ್ ನೀಡಿದ್ದು, ಅವರ ವಿರುದ್ಧ ಬುಲ್ಡೋಜರ್ ಕ್ರಮ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಶಂಕಿತನನ್ನು ಪೊಲೀಸರು ಬಂಧಿಸಿ, ದೃಶ್ಯ ಮರುನಿರ್ಮಾಣಕ್ಕಾಗಿ ಅಪರಾಧ ಸ್ಥಳಕ್ಕೆ ಕರೆತಂದಿದ್ದಾರೆ.
ಅಪರಾಧಿಯು ಯುವತಿ ಮೇಲೆ ದಾಳಿಗೆ ಬಳಸಿದ ಬೆಲ್ಟ್ ಮತ್ತು ಫೆವಿಕ್ವಿಕ್ ಟ್ಯೂಬ್ ಅನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಡ್ರ ಗ್ಸ್ ಸೇವನೆ ಮಾಡಿದ್ದನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇವೆಲ್ಲವುಗಳ ನಡುವೆ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಗ್ವಾಲಿಯರ್ ಆಸ್ಪತ್ರೆಯಿಂದ ದೆಹಲಿಗೆ ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ. ಆಕೆಯ ದೇಹ ಪೂರ್ತಿ ಊದಿಕೊಂಡಿತ್ತು.
ಊತದಿಂದಾಗಿ ಆಕೆಯ ಕಣ್ಣುಗಳು ಮುಚ್ಚಿದ್ದವು, ಹೆಚ್ಚಿನ ಚಿಕಿತ್ಸೆಯನ್ನು ಕೊಡಿಸುವ ಸಲುವಾಗಿ ಅಧಿಕಾರಿಗಳು ಆಕೆಯೊಂದಿಗೆ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದ್ದು, ಅಕ್ರಮವಾಗಿ ನಿರ್ಮಿಸಿರುವ ಆರೋಪಿಯ ಮನೆಯನ್ನು ಈಗ ಅಧಿಕಾರಿಗಳು ಕೆಡವೋದಕ್ಕೆ ಮುಂದಾಗಿದ್ದಾರೆ. ಆರೋಪಿ ಜತೆಗೆ ಆತನ ಸಹೋದರ ದಿನಗೂಲಿ ಕೆಲಸ ಮಾಡುತ್ತಿದ್ದಾನೆಂದು ಸ್ಥಳೀಯರು ತಿಳಿಸಿದ್ದಾರೆ.