Bigg Boss Kannada: ಬಿಗ್ ಬಾಸ್ ಕನ್ನಡ ಸೀಸನ್ 11 ಯಾವಾಗ? ಸ್ಪರ್ಧಿಗಳು ಇವರೇನಾ? ಇಲ್ಲಿದೆ ಮಾಹಿತಿ

Written by Soma Shekar

Published on:

---Join Our Channel---

Bigg Boss Kannada: ಕನ್ನಡ ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯ ಹಾಗೂ ಅತಿ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿದೆ ಬಿಗ್ ಬಾಸ್ ಶೋ. ಬಿಗ್ ಬಾಸ್ ಕನ್ನಡ ಸೀಸನ್ 10 ಉಳಿದೆಲ್ಲಾ ಸೀಸನ್ ಗಳಿಗಿಂತ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡು ಯಶಸ್ವಿಯಾಗಿ ಮುಗಿದಾಗಿದೆ. ಈಗ ಬಿಗ್ ಬಾಸ್ ಪ್ರಿಯರು ಸೀಸನ್ 11 (Bigg Boss Kannada 11) ಯಾವಾಗ ಅಂತ ಕಾಯುವಾಗಲೇ ಹೊಸ ಸೀಸನ್ ಆರಂಭವಾಗುವ ಸಮಯ ಹತ್ತಿರವಾಗಿದೆ. ಹೌದು, ಈ ಬಾರಿ ಬಿಗ್ ಬಾಸ್ ಸೀಸನ್ 11 ಅಕ್ಟೋಬರ್ ಮೂರನೇ ವಾರದಿಂದ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.‌

ಬಿಗ್ ಬಾಸ್ ಕನ್ನಡ ಸೀಸನ್ 11ರ ಆರಂಭದ ಕುರಿತಾಗಿ ಯಾವುದೇ ಮಾಹಿತಿಯನ್ನು ವಾಹಿನಿ ಇನ್ನೂ ಅಧಿಕೃತವಾಗಿ ಹಂಚಿಕೊಂಡಿಲ್ಲವಾದರೂ ಹೊಸ ಸೀಸನ್ ಆರಂಭದ ತಯಾರಿ ಮಾತ್ರ ತೆರೆಮರೆಯಲ್ಲಿ ಬಹಳ ಜೋರಾಗಿಯೇ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಅದೇ ವೇಳೆ ಈ ಬಾರಿ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳಾಗಿ ಎಂಟ್ರಿ ನೀಡುವವರು ಯಾರು ಎನ್ನುವುದರ ಕುರಿತಾಗಿ ಒಂದಷ್ಟು ಜನರ ಹೆಸರು ಈಗ ವೈರಲ್ ಆಗಿ ಗಮನ ಸೆಳೀತಿದೆ.

ಬಿಗ್ ಬಾಸ್ ಮನೆ ಆಟ ಆರಂಭ ಆಗೋದಕ್ಕೆ ಮೊದಲು ಆ ಮನೆಗೆ ಸ್ಪರ್ಧಿಗಳಾಗಿ ಹೋಗುವವರಿಗೆ ಅಗತ್ಯವಿರುವಂತಹ ಸೌಲಭ್ಯಗಳು, ಮಾಡಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳ ತಯಾರಿಯನ್ನ ನಡೆಸೋದಕ್ಕೆ ಒಂದಷ್ಟು ತಿಂಗಳುಗಳ ಸಮಯ ಬೇಕಾಗುತ್ತದೆ. ಆದ್ದರಿಂದಲೇ ಸೀಸನ್ ಆರಂಭವಾಗುವ ಕೆಲವು ತಿಂಗಳುಗಳ ಮೊದಲೇ ಹೊಸ ಸೀಸನ್ ಆರಂಭದ ತಯಾರಿ ಪ್ರಾರಂಭವಾಗುತ್ತದೆ.

ಅದರಲ್ಲೂ ಬಿಗ್ ಬಾಸ್ ಮನೆಗೆ ಬರುವ ಸ್ಪರ್ಧಿಗಳ ಆಯ್ಕೆ ಬಹಳ ಕ್ಲಿಷ್ಟಕರವಾದ ಕೆಲಸವಾಗಿರುತ್ತದೆ. ದೊಡ್ಮನೆಗೆ ವಿವಿಧ ಕ್ಷೇತ್ರಗಳಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವವರು, ವಿಭಿನ್ನ ಮನಸ್ಥಿತಿಯುಳ್ಳವರು ಬರುವುದು ಎಲ್ಲರಿಗೂ ಗೊತ್ತದೆ. ಹಾಗಾದ್ರೆ ಈ ಬಾರಿ ಯಾರಿಲ್ಲ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡ್ತಾರೆ? ವೈರಲ್ ಆಗ್ತಿರೋ ಒಂದಷ್ಟು ಹೆಸರುಗಳು ಇಲ್ಲಿವೆ.

ಬೃಂದಾವನ ಸೀರಿಯಲ್ ಖ್ಯಾತಿಯ ನಟ ವರುಣ್ ಆರಾಧ್ಯ (Varun Aradhya), ಯೂಟ್ಯೂಬರ್ ವರ್ಷಾ ಕಾವೇರಿ, ತುಕಾಲಿ ಸ್ಟಾರ್ ಸಂತು ಅವರ ಹೆಂಡತಿ ಮಾನಸ (Manasa), ಮಜಾಭಾರತ ಖ್ಯಾತಿಯ ರಾಘವೇಂದ್ರ, ನಟ ತ್ರಿವಿಕ್ರಂ, ಸುನಿಲ್ ರಾವ್, ಮೋಕ್ಷಿತಾ ಪೈ (Mokshita Pai), ಭವ್ಯ ಗೌಡ, ರೀಲ್ಸ್ ರೇಶ್ಮಾ ಅವರ ಹೆಸರುಗಳು ಈ ಬಾರಿಯ ಸ್ಪರ್ಧಿಗಳಾಗ್ತಾರೆ ಎಂದು ಸುದ್ದಿಯಾಗಿದೆ

ಬಿಗ್ ಬಾಸ್ ಗೆ ಆಯ್ಕೆಯಾದ ಯಾವ ಸ್ಪರ್ದಿಗಳು ಕೂಡ ತಾವು ಬಿಗ್ ಬಾಸ್ ಮನೆಗೆ ಹೋಗುವ ವಿಚಾರವನ್ನು ಹಂಚಿಕೊಳ್ಳುವುದಿಲ್ಲ. ಆದರೆ ಸಾಮಾನ್ಯವಾಗಿ ಸೀಸನ್ ಆರಂಭಕ್ಕೆ ಮೊದಲು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುವ ಹೆಸರುಗಳ ಜನಪ್ರಿಯ ಸೆಲೆಬ್ರಿಟಿಗಳೇ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾರೆ. ಇನ್ನೂ ಈ ಸಲ ಯಾರೆಲ್ಲ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾರೆ ಅನ್ನೋದಕ್ಕೆ ಒಂದಷ್ಟು ತಿಂಗಳು ಕಾದು ನೋಡಬೇಕಾಗಿದೆ.

Leave a Comment