Vickeypedia: ನಾನು ನಂದಿನಿ ಖ್ಯಾತಿಯ ವಿಕಾಸ್ ಗೆ ಪೊಲೀಸ್ ಡ್ರಿಲ್; ವೀಡಿಯೋ ಡಿಲೀಟ್ ಮಾಡ್ಸಿದ್ದು ಯಾಕೆ?

Written by Soma Shekar

Published on:

---Join Our Channel---

Vickeypedia: ಸೋಶಿಯಲ್‌ ಮೀಡಿಯಾದಲ್ಲಿ ವಿಕ್ಕಿಪೀಡಿಯಾ (Vickeypedia) ವಿಕಾಸ್ ಹಾಗೂ ಅವರ ತಂಡ ಸಿಕ್ಕಾಪಟ್ಟೆ ಫೇಮಸ್. ಇವರು ತಮ್ಮದೇ ಆದ ವಿಭಿನ್ನವಾದ ಶೈಲಿಯಲ್ಲಿ ವೀಡಿಯೋ ಮಾಡುತ್ತಾರೆ. ನಾನು ನಂದಿನಿ ಹಾಡು ಇವರ ಜನಪ್ರಿಯತೆಯನ್ನು ಇನ್ನೊಂದು ಮಟ್ಟಕ್ಕೆ ತೆಗೆದುಕೊಂಡು ಹೋಯಿತು ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಈಗ ವಿಕ್ಕಿಪೀಡಿಯಾ ವಿಕಾಸ್‌ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರೆನ್ನುವ ಸುದ್ದಿಯೊಂದು ಶಾಕ್ ನೀಡಿದೆ.

ವಿಕ್ಕಿಪೀಡಿಯಾ ವಿಕಾಸ್ (Vikas) ಅವರ ಹೊಸ ವೀಡಿಯೋವೊಂದರ ಕಾರಣವಾಗಿ ಪೊಲೀಸರು ಅವರನ್ನು ಕರೆಸಿಕೊಂಡಿದ್ದರು ಎನ್ನಲಾಗಿದೆ. ಈ ವೀಡಿಯೋದಲ್ಲಿ ಅವರು ಮಾ ದ ಕ ವಸ್ತು ವ್ಯಸನದ ಬಗ್ಗೆ ಮಾತನಾಡಿದ್ದಾರೆನ್ನುವ ಆರೋಪದ ಮೇಲೆ ಬೈಯಪ್ಪನಹಳ್ಳಿ ಪೊಲೀಸರು ಅವರನ್ನು ಠಾಣೆಗೆ ಕರೆಸಿ, ವಿಚಾರಣೆ ನಡೆಸಿದ ನಂತರ ಎಚ್ಚರಿಕೆ ನೀಡಿ ವಾಪಸ್ ಕಳಿಸಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ವಿಕಾಸ್ ಮತ್ತು ತಂಡಕ್ಕೆ ವಿಡಿಯೋ ಮಾಡುವಾಗ ಅನುಸರಿಸಬೇಕಾದಂತಹ ಕೆಲವೊಂದು ಪ್ರಮುಖವಾದ ಸೂಚನೆಗಳನ್ನು ಪೊಲೀಸರು ನೀಡಿದ್ದಾರೆನ್ನಲಾಗಿದೆ. ಅಮಿತ್ ಜೊತೆಯಲ್ಲಿ ವಿಕಾಸ್ ಹೊಸ ವೀಡಿಯೋ ವೊಂದನ್ನು ಮಾಡಿ, ಅದನ್ನು ಎರಡು ಮೂರು ದಿನಗಳ ಹಿಂದೆಯಷ್ಟೇ ಅಪ್ಲೋಡ್‌ ಮಾಡಲಾಗಿತ್ತೆನ್ನಲಾಗಿದೆ.

ಇದೇ ವೀಡಿಯೋದಲ್ಲಿ ಖುಷಿಗಾಗಿ ಡ್ರ ಗ್ಸ್‌ ಎನ್ನುವ ವಾಕ್ಯವೊಂದನ್ನು ಬಳಸಿರುವುದು ಪೊಲೀಸರ ಗಮನಕ್ಕೂ ಬಂದಿದೆ. ಅದಕ್ಕೆ ಅವರನ್ನು ಕರೆಸಿ ಎಚ್ಚರಿಕೆ ನೀಡಿದ್ದಾರೆನ್ನಲಾಗಿದೆ. ಪ್ರಸ್ತುತ ಆ ವೀಡಿಯೋವನ್ನು ಸಹಾ ಡಿಲೀಟ್‌ ಮಾಡಲಾಗಿದೆ ಎನ್ನಲಾಗಿದೆ.‌ ಸಾಮಾಜಿಕ ಜಾಲತಾಣಗಳ‌ ಬಳಕೆದಾರರಿಗೆ ವಿಕ್ಕಿಪೀಡಿಯಾ ವಿಕಾಸ್ ಅವರ ಕಂಟೆಂಟ್ ಗಳು ಭರ್ಜರಿ ಮನರಂಜನೆಯ ಜೊತೆಗೆ ಕೆಲವೊಂದು ಸಂದೇಶಗಳನ್ನ ನೀಡುತ್ತದೆ.

Leave a Comment