Anand Devarakonda: ಒಂದೇ ರೆಸಾರ್ಟ್ ನಲ್ಲಿ ವಿಜಯ್, ರಶ್ಮಿಕಾ; ಪರೋಕ್ಷವಾಗಿ ಅದು ನಿಜ ಎಂದ್ರಾ ಆನಂದ್ ದೇವರಕೊಂಡ

Written by Soma Shekar

Published on:

---Join Our Channel---

Anand Devarakonda: ಟಾಲಿವುಡ್ ನಲ್ಲಿ (Tollywood) ವಿಜಯ ದೇವರಕೊಂಡ (Vijay Devarakonda) ಮತ್ತು ರಶ್ಮಿಕಾ (Rashmika) ಹೆಸರು ಕೇಳಿ ಬಂದಾಗಲೆಲ್ಲಾ ಅಲ್ಲೊಂದು ಪ್ರಶ್ನೆ, ಅನುಮಾನ ಮೂಡುತ್ತದೆ. ಇವರಿಬ್ಬರು ನಾವು ಜಸ್ಟ್ ಫ್ರೆಂಡ್ಸ್ ಅಂತ ಪ್ರತಿ ಬಾರಿ ಹೇಳಿಕೊಂಡು ಬರುತ್ತಿದ್ದರೂ ಕೂಡಾ ಅಭಿಮಾನಿಗಳು ಮತ್ತು ನೆಟ್ಟಿಗರು ಮಾತ್ರ ಸ್ನೇಹಕ್ಕಿಂತ ಹೆಚ್ಚಿನದೇನೋ ಇವರ ನಡುವೆ ಇದೆ ಅನ್ನೋ ಮಾತುಗಳನ್ನ ಆಡೋದು ಸಹಾ ಸಾಮಾನ್ಯವಾಗಿದೆ. ಆಗಾಗ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ.

ಈ ಹಿಂದೆ ಅವರು ಜೊತೆಯಾಗಿ ವಿದೇಶಗಳಿಗೆ ಸಹಾ ಹೋಗಿದ್ದಾರೆ ಎನ್ನುವುದು ಸುದ್ದಿಯಾಗಿತ್ತು. ಅಲ್ಲದೇ ಮಾಲ್ಡೀವ್ಸ್ ನಲ್ಲಿ ಇಬ್ಬರೂ ಒಂದೇ ರೆಸಾರ್ಟ್ ನಲ್ಲಿ ಇದ್ದರು ಎನ್ನುವುದಾಗಿ ಒಂದಷ್ಟು ಫೋಟೋಗಳು ಸಹಾ ವೈರಲ್ ಆಗುವ ಮೂಲಕ ಅಚ್ಚರಿಯನ್ನು ಮೂಡಿಸಿದ್ದವು. ಈಗ ಅದೇ ವಿಚಾರವಾಗಿ ವಿಜಯ ದೇವರಕೊಂಡ ಅವರ ಸಹೋದರ ಆನಂದ ದೇವರಕೊಂಡ (Anand Devarakonda) ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ‌.

ಆನಂದ್ ದೇವರಕೊಂಡ ಅಭಿನಯದ ಗಂ ಗಂ ಗಣೇಶ ಸಿನಿಮಾ ತೆರೆಗೆ ಬಂದಿದೆ. ಈ ಸಿನಿಮಾದ ಪ್ರಚಾರ ಕಾರ್ಯದ ಭಾಗವಾಗಿ ಯೂಟ್ಯೂಬ್ ಚಾನಲ್ ವೊಂದರ ಸಂದರ್ಶನದಲ್ಲಿ ಭಾಗಿಯಾಗಿದ್ದರು‌. ಈ ವೇಳೆ ನಿರೂಪಕನು, ನಿಮ್ಮ ಅಣ್ಣ ಮತ್ತು ಸ್ಟಾರ್ ನಟಿ ಒಂದೇ ರೆಸಾರ್ಟ್ ಗೆ ತೆರಳಿದ್ದರು. ನೋಡಿ ನಮ್ಮ ಬಳಿ ಫೋಟೋ ಇದೆ ಎಂದು ಆನಂದ್ ಗೆ ಫೋಟೋ ತೋರಿಸಿದ್ದಾರೆ. ಇದಕ್ಕೆ ಆನಂದ್ ನನ್ನ ಬಳಿ ಸಹಾ ಫೋಟೋ ಇದೆ ಎಂದು ಯಾವುದೋ ಒಂದು ಫೋಟೋ ತೋರಿಸಿದ್ದಾರೆ.

ಇದು ಕಾಕತಾಳೀಯ ಎಂದ ಆನಂದ್ ಗೆ ನಿರೂಪಕ ಒಂದೇ ರೆಸಾರ್ಟ್ ಗೆ ಇಬ್ಬರೂ ಹೋಗಿದ್ದು ಹೇಗೆ? ಎಂದು ಕೇಳಿದ್ದಕ್ಕೆ ಆನಂದ್, ದೂರವಲ್ಲವೇ ಅದಕ್ಕೆ ವಿಮಾನದಲ್ಲಿ ಹೋದರು ಅಂತ ಹಾಸ್ಯದ ಉತ್ತರವನ್ನು ಕೊಟ್ಟಿದ್ದಾರೆ. ಅವರಿಬ್ಬರ ಜೊತೆ ಏನು ನಡೀತಿದೆ ಎಂದು ನಿರೂಪಕ ಕೇಳಿದಾಗ ಆನಂದ್ ಮುಂದಿನ ಸಿನಿಮಾದ ಸ್ಕ್ರಿಪ್ಟ್ ಡಿಸ್ಕಷನ್ ನಡೀತಿದೆ ಅನ್ನೊ ಮಾತನ್ನು ಹೇಳಿದ್ದಾರೆ.

Leave a Comment