Aishwarya Rai: ಮುಂಬೈ ಮಹಾನಗರದಲ್ಲಿ ಬಹಳ ವೈಭವದಿಂದ ಅದ್ದೂರಿಯಾಗಿ ನಡೆಯುತ್ತಿದೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ (Anant Ambani Radhika Merchant Wedding) ಮಹೋತ್ಸವ. ಈ ಮದುವೆಗಾಗಿ ದೇಶ ಮಾತ್ರವೇ ಅಲ್ಲದೇ ವಿದೇಶಗಳಿಂದಲೂ ಸಹಾ ವಿಶ್ವವಿಖ್ಯಾತ ಸೆಲೆಬ್ರಿಟಿಗಳು ಭಾರತಕ್ಕೆ ಆಗಮಿಸಿ ಖುಷಿಯಿಂದ ಮದುವೆಯಲ್ಲಿ ಭಾಗವಹಿಸಿದ್ದಾರೆ. ಈ ಅದ್ದೂರಿ ಮದುವೆಯ ಸಂಭ್ರಮದಲ್ಲಿ ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಕುಟುಂಬ ಸಮೇತ ಹಾಜರಾಗಿದ್ದಾರೆ.
ಆದರೆ ಈಗ ಬಚ್ಚನ್ ಫ್ಯಾಮಿಲಿ (Bachchan Family) ಆಗಮನವನ್ನು ನೋಡಿದ ನಂತರ ಒಂದು ವಿಷಯ ಸೋಶಿಯಲ್ ಮೀಡಿಯಾಗಳಲ್ಲಿ ಹೊಸ ಚರ್ಚೆಯೊಂದಕ್ಕೆ ಕಾರಣವಾಗಿದೆ. ಆದರೆ ಈ ವಿಷಯದಲ್ಲಿ ನಿಜವೆಷ್ಟು ಹಾಗೂ ಸುಳ್ಳೆಷ್ಟು ಎನ್ನುವುದರ ಬಗ್ಗೆ ನೆಟ್ಟಿಗರಿಗೆ ಗೊಂದಲ ಏರ್ಪಟ್ಟಿದೆ. ಹಾಗಾದರೆ ಏನಿದು ವಿಷಯ, ಯಾಕೆ ಇಷ್ಟೆಲ್ಲಾ ಗೊಂದಲ ಎನ್ನುವುದನ್ನ ತಿಳಿಯೋಣ ಬನ್ನಿ.
ಕಳೆದ ಕೆಲವು ದಿನಗಳಿಂದಲೂ ಐಶ್ವರ್ಯ (Aishwarya Rai) ಮತ್ತು ಅಭಿಷೇಕ್ (Abhishek Bachchan) ವಿಚ್ಚೇದನದ ವಿಷಯ ಆಗಾಗ ಸದ್ದು ಮಾಡುತ್ತಿದೆ. ಐಶ್ವರ್ಯ ಈಗಾಗಲೇ ಬಚ್ಚನ್ ಫ್ಯಾಮಿಲಿ ಜೊತೆಯಲ್ಲಿ ಇಲ್ಲ, ತಾಯಿ ಮಗಳು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿವೆ. ಅಲ್ಲದೇ ಐಶ್ವರ್ಯ ಮತ್ತು ಅಭಿಷೇಕ್ ದಾಂಪತ್ಯದಲ್ಲಿ ಬಿರುಕು ಮೂಡಿದೆಯಾ? ಎನ್ನುವ ಆತಂಕ ಕೂಡಾ ಅಭಿಮಾನಿಗಳಲ್ಲಿ ಮೂಡಿದೆ.
ಈಗ ಇದಕ್ಕೆ ಇನ್ನಷ್ಟು ಪುಷ್ಟಿ ನೀಡುವಂತೆ ಬೆಳವಣಿಗೆ ಅನಂತ್ ಮತ್ತು ರಾಧಿಕಾ ಮದುವೆಯಲ್ಲಿ ಕಂಡಿದೆ. ಅಮಿತಾಬ್ ಬಚ್ಚನ್ ತಮ್ಮ ಪತ್ನಿ, ಮಗಳು, ಅಳಿಯ, ಅವರ ಮಕ್ಕಳ ಜೊತೆಗೆ ಸಮಾರಂಭಕ್ಕೆ ಆಗಮಿಸಿದ್ದು, ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಇವರ ಜೊತೆಯಲ್ಲಿ ಮಗ ಅಭಿಷೇಕ್ ಬಚ್ಚನ್ ಸಹಾ ಇದ್ದಾರೆ. ಆದರೆ ಐಶ್ವರ್ಯ ಮತ್ತು ಆರಾಧ್ಯ ಅವರ ಜೊತೆಗೆ ಕಾಣಿಸಿಕೊಂಡಿಲ್ಲ. ಇದನ್ನ ನೋಡಿದ ನೆಟ್ಟಿಗರು ಸೊಸೆ ಮತ್ತು ಮೊಮ್ಮಗಳು ಎಲ್ಲಿ ಎಂದಿದ್ದಾರೆ.
ನಂತರ ಐಶ್ವರ್ಯ ಮತ್ತು ಆರಾಧ್ಯ ಇಬ್ಬರೂ ಮದುವೆಗೆ ಆಗಮಿಸಿದ್ದು, ಕ್ಯಾಮರಾ ಮುಂದೆ ಸಹಾ ಇಬ್ಬರೂ ಒಟ್ಟಿಗೆ ಪೋಸ್ ನೀಡಿದ್ದಾರೆಯೇ ಹೊರತು ಅವರ ಜೊತೆಗೆ ಬಚ್ಚನ್ ಕುಟುಂಬದ ಬೇರೆ ಯಾವ ಸದಸ್ಯನೂ ಕಾಣಿಸಿಕೊಂಡಿಲ್ಲ. ಕನಿಷ್ಠ ಪತಿ ಅಭಿಷೇಕ್ ಬಚ್ಚನ್ ಪತ್ನಿ, ಮಗಳ ಜೊತೆಗೆ ನಿಂತುಕೊಂಡಿಲ್ಲ. ಇದನ್ನ ನೋಡಿದ ಮೇಲೆ ಇವರ ಮಧ್ಯೆ ಎಲ್ಲವೂ ಖಂಡಿತ ಸರಿಯಾಗಿಲ್ಲ ಎನ್ನುವ ಚರ್ಚೆ ಶುರುವಾಗಿದೆ.
ಈ ಹಿಂದೆ ಮಗಳ ಶಾಲಾ ಕಾರ್ಯಕ್ರಮಕ್ಕೂ ಅಭಿಷೇಕ್ ಮತ್ತು ಐಶ್ವರ್ಯ ಬೇರೆ ಬೇರೆ ಕಾರುಗಳಲ್ಲಿ ಬಂದಿದ್ದರು. ಈಗ ಅನಂತ್ ರಾಧಿಕಾ ಮದುವೆಯಲ್ಲೂ ಐಶ್ ಕುಟುಂಬದ ಜೊತೆಗೆ ಕಾಣಿಸಿಕೊಂಡಿಲ್ಲ, ಈ ವೀಡಿಯೋಗಳು ಭರ್ಜರಿ ವೈರಲ್ ಆಗಿದ್ದು, ಅಭಿಷೇಕ್ ಮತ್ತು ಐಶ್ವರ್ಯ ಡಿವೋರ್ಸ್ ಮಾತುಕತೆ ನಡೆದಿದ್ಯಾ ಎನ್ನುವ ಅನುಮಾನ ಮೂಡಿಸಿದೆ.