Bhagyalakshmi: ಇದ್ದಕ್ಕಿದ್ದ ಹಾಗೆ ಭಾಗ್ಯಲಕ್ಷ್ಮೀ ಸೀರಿಯಲ್ ತೊರೆದ ಪ್ರಮುಖ ನಟಿ; ಇದಕ್ಕೆ ಕಾರಣ ಏನು ಗೊತ್ತಾ?

Written by Soma Shekar

Published on:

---Join Our Channel---

Bhagyalakshmi: ಕನ್ನಡದ ಅತ್ಯಂತ ಜನಪ್ರಿಯ ಸೀರಿಯಲ್ ಗಳಲ್ಲಿ ಒಂದಾಗಿರುವ ಕಲರ್ಸ್ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮೀ (Bhagyalakshmi) ಸೀರಿಯಲ್ ಅಪಾರವಾದ ಪ್ರೇಕ್ಷಕರ ಬಳಗವನ್ನು ಹೊಂದಿದೆ. ದೊಡ್ಡ ತಾರಾಬಳಗವನ್ನು ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರಿಂದ ವ್ಯಾಪಕವಾದ ಮೆಚ್ಚುಗೆಗಳನ್ನು ಪಡೆದುಕೊಳ್ಳುತ್ತಿದೆ. ಮತ್ತೊಂದು ಕಡೆ ಟೀಕೆಗಳು ಸಹಾ ಸಾಕಷ್ಟು ಹರಿದು ಬರುತ್ತಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ.

ಈಗ ಇವೆಲ್ಲವುಗಳ ನಡುವೆಯೇ ಭಾಗ್ಯಲಕ್ಷ್ಮೀ ಸೀರಿಯಲ್ ನಲ್ಲಿ ಭಾಗ್ಯ ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದ ಸುನೀತಾ ಶೆಟ್ಟಿ (Sunitha Shetty) ಅವರು ಸೀರಿಯಲ್ ನ ತಮ್ಮ ಪಾತ್ರದಿಂದ ಹೊರಗೆ ಬಂದಿದ್ದಾರೆ ಎನ್ನುವ ಸುದ್ದಿ ಎಲ್ಲರ ಗಮನವನ್ನು ಸೆಳೆದಿದೆ. ಇದಕ್ಕಿದ್ದ ಹಾಗೆ ಸುನೀತಾ ಅವರು ಸೀರಿಯಲ್ ಬಿಟ್ಟಿದಾದ್ರು ಏಕೆ ??

ಮಗಳು ಭಾಗ್ಯಾಳ ಒಳಿತನ್ನು ಬಯಸುವ ತಾಯಿಯಾಗಿ ಸುನೀತಾ ಶೆಟ್ಟಿ ಅವರು ತಾಯಿಯ ಪಾತ್ರಕ್ಕೆ ಜೀವ ತುಂಬಿದ್ದರು. ಆದರೆ ಈಗ ಸುನೀತಾ ಶೆಟ್ಟಿ ಅವರು ಭಾಗ್ಯಲಕ್ಷ್ಮೀ ಸೀರಿಯಲ್ ಗೆ ಗುಡ್ ಬೈ ಹೇಳಿದ್ದಾರೆ. ಸುನೀತಾ ಶೆಟ್ಟಿ ಅವರು ಅಮೆರಿಕಾ ಪ್ರವಾಸವನ್ನು ಕೈಗೊಂಡಿದ್ದು ಮುಂದಿನ ಕೆಲವು ತಿಂಗಳುಗಳ ಕಾಲ ಅಲ್ಲೇ ಇರಲಿದ್ದಾರೆ ಎನ್ನಲಾಗಿದೆ.

ಸುನೀತಾ ಶೆಟ್ಟಿ ಅವರ ಮಗಳು ಮದುವೆ ನಂತರ ಅಮೆರಿಕಾದಲ್ಲಿ (America) ನೆಲೆಸಿದ್ದು, ಮಗಳ ಜೊತೆಗೆ ಒಂದಷ್ಟು ದಿನ ಸಮಯವನ್ನು ಕಳೆಯಲು ಸುನೀತಾ ಅವರು ಅಮೆರಿಕಾಕ್ಕೆ ಹೋಗುತ್ತಿದ್ದಾರೆ. ಭಾಗ್ಯಲಕ್ಷ್ಮೀ ಸೀರಿಯಲ್ ಸೆಟ್ ನಲ್ಲಿ ತಮ್ಮ ಕೊನೆಯ ದಿನದಂದು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ ಮತ್ತು ಎಲ್ಲರೊಡನೆ ಬೆರೆತು ಭಾವುಕರಾಗಿದ್ದಾರೆ.

ಭಾಗ್ಯಲಕ್ಷ್ಮೀ ಯಾವತ್ತಿಗೂ ಮನಸ್ಸಿನಲ್ಲಿ ಉಳಿಯುವ ಸಿಹಿಯಾದ ಜೇನು. ತಂಡದ ಎಲ್ಲಾ ಸ್ನೇಹಿತರಿಗೆ ಪ್ರೀತಿಯ ಅಪ್ಪುಗೆ ಎಂದು ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಮೂರು ತಿಂಗಳ ನಂತರ ಮರಳಿ ಬರುವ ಅವರು ಮತ್ತೆ ಸೀರಿಯಲ್ ತಂಡಕ್ಕೆ ಸೇರ್ತಾರ ಅಥವಾ ಇಲ್ವಾ ಅನ್ನೋದನ್ನ ಕಾದು ನೋಡಬೇಕಾಗಿದೆ.

Leave a Comment