Suchitra Krishnamoorthi: ಬಾಲಿವುಡ್ ಹಾಗೂ ಸೌತ್ ಸಿನಿಮಾಗಳ ಜನಪ್ರಿಯ ನಟಿ ಸುಚಿತ್ರಾ ಕೃಷ್ಣಮೂರ್ತಿ (Suchitra Krishnamoorthi) ಅವರು ಸಿನಿಮಾ ರಂಗದಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ. ಇತ್ತೀಚಿಗೆ ನಟಿ ಯೂರೋಪ್ ನ (Europe) ಪ್ರವಾಸವನ್ನು ಮಾಡಿದ್ದು, ಕೆಲವೊಂದು ಆಸಕ್ತಿಕರ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ನಟಿ ತಾವು ಭಾಗವಹಿಸಿದ್ದ ಬೆತ್ತಲೆ ಪಾರ್ಟಿ ಬಗ್ಗೆ ಮಾತನಾಡಿದ್ದಾರೆ.
ಜರ್ಮನಿಯ ಬರ್ಲಿನ್ ನಲ್ಲಿ (Berlin) ಬೆತ್ತಲೆ ಪಾರ್ಟಿಯನ್ನು ಆಯೋಜನೆ ಮಾಡಲಾಗುತ್ತದೆ. ಇದರಲ್ಲಿ ಬಹಳಷ್ಟು ಜನರು ಭಾಗಿಯಾಗುತ್ತಾರೆ. ಸೆಲೆಬ್ರಿಟಿಗಳು ಸೇರಿದಂತೆ ಬಹಳಷ್ಟು ಜನರು ಇದರಲ್ಲಿ ಭಾಗಿಯಾಗುವುದು ವಿಶೇಷವಾಗಿದೆ. ಈ ಬೆತ್ತಲೆ ಪಾರ್ಟಿಯನ್ನು ಪಾಸಿಟಿವಿಟಿ ಪಾರ್ಟಿ ಎಂದೂ ಸಹಾ ಕರೆಯಲಾಗುತ್ತೆ. ಇಂತಹದೊಂದು ಪಾರ್ಟಿಯಲ್ಲಿ ನಟಿ ಸುಚಿತ್ರಾ ಕೃಷ್ಣಮೂರ್ತಿ ಅವರು ಭಾಗಿಯಾಗಿದ್ದು, ಅದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.
ಈ ಪಾರ್ಟಿ ಹೇಗೆ ನಡೆಯುತ್ತದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲದಿಂದ ನಟಿ ಇದರಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ತಮ್ಮ ಪೋಸ್ಟ್ ನಲ್ಲಿ ನಟಿಯು, ಬರ್ಲಿನ್ ನಲ್ಲಿನ ಬಾಡಿ ಪಾಸಿಟಿವಿಟಿ. ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದೆ. ಇದರಲ್ಲಿ ಭಾಗಿಯಾದ ಬಳಿಕ ನನಗೊಂದು ಮಾತು ನೆನಪಾಯಿತು. ನಿಮ್ಮ ಮೆದುಳು ಕಾರ್ಯನಿರ್ವಹಿಸದಷ್ಟು ಒಪನ್ ಮೈಂಡೆಡ್ ಆಗಿರಬೇಡಿ.
ನಾನು ಎಂದೆಂದಿಗೂ ದೇಸಿ ಹುಡುಗಿ. ನನಗೆ ಸ್ನಾನ ಮತ್ತು ಗಾಯತ್ರಿ ಮಂತ್ರ ಪಠಣ ಬೇಕು ಎಂದು ಹೇಳಿದ್ದಾರೆ. ದೇಹದ ಸಕಾರಾತ್ಮಕತೆಯನ್ನು ಉತ್ತೇಜಿಸುವುದು ಈ ಪಾರ್ಟಿಯ ಉದ್ದೇಶವಾಗಿತ್ತು. ಹಾಗಾಗಿ ಇದೇನೆಂದು ನೋಡಲು ನಾನು ಹೋಗಿದ್ದೆ. ಸ್ನೇಹಿತರ ಬಾರ್ ನಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಅತಿಥಿಗಳ ಲಿಸ್ಟ್ ನಲ್ಲಿ ನನ್ನ ಹೆಸರು ಸೇರಿಸಲಾಗಿತ್ತು.
ಪಟ್ಟಿಯಲ್ಲಿ ಹೆಸರು ಇದ್ದುದ್ದರಿಂದ ನಾನು ಅಲ್ಲಿಗೆ ಹೋಗಿದ್ದೆ. ಆದರೆ ನಾನು ಸ್ವಲ್ಪ ಹೊತ್ತಿನಲ್ಲೇ ಅಲ್ಲಿಂದ ವಾಪಸ್ ಬಂದು ಬಿಟ್ಟೆ. ನಾನು ತುಂಬಾ ದೇಸಿ. ನಾನು ಇತರರ ಖಾಸಗಿ ಅಂಗ ನೋಡಬೇಕಾಗಿಲ್ಲ. ಅದಕ್ಕಾಗಿ ನಾನು ಅಲ್ಲಿಂದ ಬಂದು ಬಿಟ್ಟೆ. ಆದರೆ ಅಲ್ಲಿ ಅದನ್ನು ಅ ಶ್ಲೀ ಲ ವಾಗಿ ನೋಡೋದಿಲ್ಲ. ಅಲ್ಲಿನ ಪರಿಸರಕ್ಕೆ ಅದು ಉತ್ತಮ. ಭಾರತದಲ್ಲಿ ಹುಟ್ಟಿ ಬೆಳೆದ ನಮಗೆ ಅದು ಸೂಕ್ತವಾಗಲ್ಲ ಎಂದಿದ್ದಾರೆ ನಟಿ.