Crime News: ಭ್ರಷ್ಟಾಚಾರ ಮಾಡುವಂತಹ ಅಧಿಕಾರಿಗಳಿಗೆ ಇಂದು ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತದ (Lokayukta) ಬಿಸಿ ತಟ್ಟಿದೆ. ತಮ್ಮ ಮನೆಗೆ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆಗಾಗಿ ಬರುತ್ತಿದ್ದ ಹಾಗೆಯೇ ಅಧಿಕಾರಿಯೊಬ್ಬರು ಮಾಡಿರುವ ಕೆಲಸ ಈಗ ಶಾಕ್ ಎನಿಸಿದೆ. ಹೌದು, ಲೋಕಾಯುಕ್ತ ಅಧಿಕಾರಿಗಳು ಬರುತ್ತಿದ್ದಂತೆ ಅಧಿಕಾರಿಯೊಬ್ಬರು ತಮ್ಮ ಮನೆಯಲ್ಲಿದ್ದಂತಹ ಚಿನ್ನ ಮತ್ತು ಹಣ ಇದ್ದ ಬ್ಯಾಗ್ ಅನ್ನು ಕಿಟಕಿಯಿಂದ ಪಕ್ಕದ ಮನೆಗೆ ಎಸೆದಿರುವ ಘಟನೆಯೊಂದು ನಡೆದಿದೆ.
ಕಾನೂನು ಮಾಪನ ಇಲಾಖೆಯಲ್ಲಿ ಡೆಪ್ಯುಟಿ ಕಂಟ್ರೋಲರ್ ಆಗಿರುವಂತಹ ಅತ್ಹರ್ ಆಲಿ (Attar Ali) ಎನ್ನುವವರ ಮನೆ ಹಾಗೂ ಕಚೇರಿ ಮೇಲೆ ಇಂದು ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿಯನ್ನು ನಡೆಸಿದ್ದಾರೆ. ಇಂದು ಮುಂಜಾನೆ 5:30 ರ ಹೊತ್ತಿಗೆ ಕಲ್ಯಾಣ ನಗರದಲ್ಲಿರುವ (Kalyan Nagar) ಅತ್ಥರ್ ಆಲಿ ಅವರ ಮನೆಗೆ ಅಧಿಕಾರಿಗಳು ಪರಿಶೀಲನೆಗಾಗಿ ತೆರೆಳಿದ್ದು, ಸುಮಾರು ಐದು ಗಂಟೆಗಳಿಗೂ ಅಧಿಕ ಸಮಯ ಪರಿಶೀಲನೆಯನ್ನು ನಡೆಸಿದ್ದಾರೆ.
ಅಧಿಕಾರಿಗಳು ನಡೆಸಿದ ಪರಿಶೀಲನೆ ವೇಳೆಯಲ್ಲಿ ಅತ್ಹರ್ ಆಲಿ ಅವರ ಮನೆಯಲ್ಲಿ ಚಿನ್ನ, ಹಣ, ಪತ್ತೆಯಾಗಿದೆ. ಆದರೆ ಅಧಿಕಾರಿಗಳು ಮನೆಗೆ ಎಂಟ್ರಿ ನೀಡುತ್ತಿದ್ದ ಹಾಗೆ ಅತ್ಹರ್ ಆಲಿ ಅವರು ತಮ್ಮ ಪಕ್ಕದ ಮನೆಯ ಕಿಟಕಿಯೊಳಕ್ಕೆ ಚಿನ್ನ ಇದ್ದ ಬ್ಯಾಗ್ ಅನ್ನ ಎಸೆದಿದ್ದಾರೆ. ಪಕ್ಕದ ಮನೆಯ ಕಿಟಕಿಗೆ ಹತ್ತಿರದಲ್ಲೇ ಇವರ ಮೊದಲ ಅಂತಸ್ತು ಇದೆ. ಅದಕ್ಕೆ ಅವರು ಚಿನ್ನ ತುಂಬಿದ್ದ ಬ್ಯಾಗ್ ಅನ್ನು ಪಕ್ಕದ ಮನೆಯ ಕಿಟಕಿ ಒಳಗೆ ಎಸೆದಿದ್ದರು.
ಬ್ಯಾಗ್ ಎಸೆದಿದ್ದನ್ನ ನೋಡಿದ ನೆರೆಮನೆ ನಿವಾಸಿ ತಾವೇ ಸ್ವತಃ ಅಧಿಕಾರಿಗಳನ್ನ ಕರೆದಿದ್ದು, ತಕ್ಷಣ ಅಲ್ಲಿಗೆ ಹೋದ ಅಧಿಕಾರಿಗಳು ಬ್ಯಾಗ್ ಅನ್ನು ಪರಿಶೀಲನೆ ಮಾಡಿದಾಗ ಬ್ಯಾಗ್ ನಲ್ಲಿ ಚಿನ್ನ ಇರುವುದು ಕಂಡಿದ್ದು, ಅಧಿಕಾರಿಗಳು ಆ ಬ್ಯಾಗ್ ಅನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಬ್ಯಾಗ್ ತುಂಬಾ ಚಿನ್ನ ಇತ್ತು ಎನ್ನಲಾಗಿದ್ದು, ಅಧಿಕಾರಿಗಳು ನೆರೆ ಮನೆಯಲ್ಲೂ ಸಹಾ ಒಮ್ಮೆ ತಲಾಶ್ ನಡೆಸಿತ್ತು ಎನ್ನಲಾಗಿದೆ.