Deepika Das: ಕನ್ನಡ ಕಿರುತೆರೆಯ ನಾಗಿಣಿ ಸೀರಿಯಲ್ ಖ್ಯಾತಿಯ ನಟಿ ದೀಪಿಕಾ ದಾಸ್ (Deepika Das) ಬಿಗ್ ಬಾಸ್ ಶೋ ಮೂಲಕವೂ ಸಾಕಷ್ಟು ಜನಪ್ರಿಯತೆಯನ್ನು ಪಡೆದವರು. ಸದ್ಯಕ್ಕೆ ನಟನೆಯಿಂದ ದೂರ ಉಳಿದಿರುವ ಅವರು ಮದುವೆಯ ನಂತರ ತಮ್ಮ ಪತಿಯೊಡನೆ ಪ್ರವಾಸಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರವಾಸದ ಸುಂದರ ಫೋಟೋಗಳನ್ನ ಶೇರ್ ಮಾಡಿಕೊಂಡು ಎಲ್ಲರ ಗಮನವನ್ನು ಸೆಳೆಯುತ್ತಾರೆ.
ರೀಲ್ಸ್ ವೀಡಿಯೋಗಳ (Reels Video) ಮೂಲಕ ಅಭಿಮಾನಿಳ ಕಣ್ಮನವನ್ನು ಸೆಳೆಯುವ ದೀಪಿಕಾ ದಾಸ್ ಅವರು ಶೇರ್ ಮಾಡಿದ ಹೊಸ ವೀಡಿಯೋವನ್ನು ನೋಡಿದ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ ಮತ್ತು ಅವರಲ್ಲಿ ಇದೊಂದು ಆತಂಕವನ್ನು ಸಹಾ ಉಂಟು ಮಾಡಿದೆ ಎಂದರೆ ಅದು ಸುಳ್ಳಲ್ಲ.
ಹೌದು, ವಾಟರ್ ಫಾಲ್ಸ್ ಒಂದರ ಬಳಿ ದೀಪಿಕಾ ದಾಸ್ ಅವರು ವೀಡಿಯೋ ಮಾಡುವ ಸಂದರ್ಭದಲ್ಲಿ ಮುಗ್ಗರಿಸಿ ಬಿದ್ದಿದ್ದಾರೆ. ಈ ದೃಶ್ಯದ ವೀಡಿಯೋವನ್ನು ಸ್ವತಃ ನಟಿಯೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದು, ಇದನ್ನು ನೋಡಿದ ಅಭಿಮಾನಿಗಳು ಒಂದು ಕ್ಷಣ ಕಂಗಲಾಗಿದ್ದಾರೆ.
ಈ ವೀಡಿಯೋ ನೋಡಿದರೆ ಎಂತವರಿಗೇ ಆದರೂ ಒಂದು ಕ್ಷಣ ಹೃದಯ ಬಾಯಿಗೆ ಬಂದ ಹಾಗೆ ಅನಿಸುತ್ತದೆ. ವೀಡಿಯೋದಲ್ಲಿ, ನಡೆದುಕೊಂಡು ಬರುತ್ತಿದ್ದ ದೀಪಿಕಾ ದಾಸ್ ಅವರು ಆಯತಪ್ಪಿ ಮುಖ ನೆಲಕ್ಕೆ ಹೊಡೆದುಕೊಂಡು ಕೆಳಗೆ ಬಿದ್ದಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ದೀಪಿಕಾ ದಾಸ್ ಅವರ ಈ ವೀಡಿಯೋ ವೈರಲ್ ಆಗಿದೆ.