SSMB 29: ರಾಜಮೌಳಿ ಮಹೇಶ್ ಬಾಬು ಸಿನಿಮಾಕ್ಕೆ ಎಂಟ್ರಿ ಕೊಟ್ಟ ದಕ್ಷಿಣದ ಸ್ಟಾರ್ ನಟ, ಹೊಸ ಅಪ್ಡೇಟ್

Written by Soma Shekar

Published on:

---Join Our Channel---

SSMB 29 : ಟಾಲಿವುಡ್ ನಟ ಮಹೇಶ್ ಬಾಬು (Mahesh Babu) ಮತ್ತು ಎಸ್ ಎಸ್ ರಾಜಮೌಳಿ (S S Rajamouli) ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಈಗಾಗಲೇ ಒಂದಷ್ಟು ಕುತೂಹಲವನ್ನು ಕೆರಳಿಸಿದೆ. ಮಹೇಶ್ ಬಾಬು ಕೆರಿಯರ್ ನಲ್ಲೇ ದೊಡ್ಡ ಸಿನಿಮಾ ಇದು ಎನ್ನಲಾಗಿದೆ. ಸಿನಿಮಾ ಘೋಷಣೆಯಾದ ದಿನದಿಂದಲೇ ಸಾಕಷ್ಟು ಗಮನ ಸೆಳೆದಿದೆ. ರಾಜಮೌಳಿ ಈ ಬಾರಿ ಯಾವ ರೀತಿಯ ಸಿನಿಮಾವನ್ನು ತೆರೆಯ ಮೇಲೆ ತರಲಿದ್ದಾರೆ ಎನ್ನುವ ಆಸಕ್ತಿ ಸಹಜವಾಗಿಯೇ ಸಿನಿಮಾ ಪ್ರೇಮಿಗಳಲ್ಲಿ ಇದೆ.

SSMB 29 ಎನ್ನುವ ವರ್ಕಿಂಗ್ ಟೈಟಲ್ ಹೊಂದಿರುವ ಈ ಹೊಸ ಸಿನಿಮಾ ವಿಶ್ವ ಪರ್ಯಟನೆ ಯನ್ನು ಒಳಗೊಂಡ‌ ಸಾಹಸಮಯ ಸಿನಿಮಾ ಎನ್ನಲಾಗಿದ್ದು, ಜೇಮ್ಸ್ ಬಾಂಡ್, ಇಂಡಿಯಾನಾ ಜೋನ್ಸ್ ಗಳಂತಹ ಸಾಹಸ ಸಿನಿಮಾಗಳಂತೆ ಭಾರತೀಯ ಶೈಲಿಯಲ್ಲಿ ಮೂಡಿ ಬರಲಿರುವ ಸಾಹಸ ಸಿನಿಮಾ ಇದಾಗಲಿದೆ ಎನ್ನಲಾಗಿದೆ.

ಈ ಸಿನಿಮಾದಲ್ಲಿ ಮಹೇಶ್ ಬಾಬು ಸಹಾ ವಿವಿಧ ಲುಕ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಾಯಕನ ಪಾತ್ರವು ರಾಮಾಣಯದಲ್ಲಿನ ಹನುಮಂತನ ಪಾತ್ರದಿಂದ ಪ್ರೇರಿತವಾಗಿದೆ ಎಂದು ಸಹಾ ಹೇಳಲಾಗಿದ್ದು ಇದು ಇನ್ನಷ್ಟು ರೋಚಕತೆಯನ್ನು ಮೂಡಿಸಿದೆ ಎನ್ನುವುದು ಸಹಾ ನಿಜವಾಗಿದೆ.

ಈಗ ಸಿನಿಮಾದ ಮತ್ತೊಂದು ಅಪ್ಡೇಟ್ ಹೊರಗೆ ಬಂದಿದ್ದು, ಅದರ ಪ್ರಕಾರ ಈ ಸಿನಿಮಾದಲ್ಲಿ ಮಾಲಿವುಡ್ ನ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಮಹೇಶ್ ಬಾಬು ಎದುರು ವಿಲನ್ ಪಾತ್ರದಲ್ಲಿ ಮಿಂಚಲಿದ್ದಾರೆ ಎನ್ನಲಾಗಿದೆ. ರಾಜಮೌಳಿ ಮತ್ತು ಪೃಥ್ವಿರಾಜ್ ನಡುವೆ ಮಾತುಕತೆ ನಡೆದಿದ್ದು, ನಟ ಹಸಿರು ನಿಶಾನೆ ತೋರಿದ್ದಾರೆ ಎನ್ನಲಾಗಿದೆ.

Leave a Comment