Delhi Bus : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೆಟ್ರೋ ದಲ್ಲಿ (Delhi Metro) ಆಗಾಗ ನಡೆಯುವ ವಿಚಿತ್ರ ಸನ್ನಿವೇಶಗಳ ಕುರಿತಾಗಿ ಸುದ್ದಿಗಳಾಗುತ್ತಲೇ ಇರುತ್ತದೆ. ಮೆಟ್ರೋ ದಲ್ಲಿ ಯುವತಿಯರ ಅಸಭ್ಯ ವರ್ತನೆ, ಅಸಭ್ಯ ವಸ್ತ್ರ ಧರಿಸಿ ಬಂದಂತಹ ಘಟನೆಗಳು ಈಗಾಗಲೇ ಸುದ್ದಿಗಳಾಗಿವೆ. ಆದರೆ ಈಗ ದೆಹಲಿಯಲ್ಲಿ ಬಸ್ ಹತ್ತಿದ ಮಹಿಳೆಯೊಬ್ಬರ ವೀಡಿಯೋ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಮಹಿಳೆ ಬಸ್ ಹತ್ತಿದರೇ ಅದೇನು ದೊಡ್ಡ ವಿಚಾರ ಇದು ಸಾಮಾನ್ಯ ಅಲ್ವೇ? ಅನ್ನೋದಾದ್ರೆ ಇಲ್ಲಿದೆ ಅದಕ್ಕೆ ಅಸಲಿ ಕಾರಣ. ಈ ಮಹಿಳೆ ಬಿಕಿನಿಯನ್ನು ಧರಿಸಿ ಬಸ್ ಹತ್ತಿದ್ದು, ಈ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral Video) ಆಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯೊಬ್ಬರು ಜನರಿದ್ದ ಬಸ್ ವೊಂದನ್ನು ಏರಿದ್ದು ಆಕೆ ಬಿಕಿನಿಯಷ್ಟೇ ಧರಿಸಿ ಬಂದಿರುವುದನ್ನ ನೋಡಿ ಜನರು ಶಾಕ್ ಆಗಿದ್ದಾರೆ. ಈ ದೃಶ್ಯದ ವೀಡಿಯೋ ವೈರಲ್ ಆದ ಮೇಲೆ ಜನರು ಇದನ್ನು ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಹಾಗೂ ತೀವ್ರ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.
ಟ್ವಿಟರ್ ನಲ್ಲಿ ದೆಹಲಿ ಬಸ್ (Delhi Bus) ಎನ್ನುವ ಹೆಸರಿನ ಖಾತೆಯಲ್ಲಿ ಈ ವೀಡಿಯೋ ವನ್ನು ಶೇರ್ ಮಾಡಲಾಗಿದೆ. ಬಸ್ ಏರಿದ ಮಹಿಳೆ ಪುರುಷರ ಕಡೆ ನೋಡಿ ಅಸಭ್ಯ ರೀತಿಯಲ್ಲಿ ಸನ್ನೆ ಮಾಡಿದ್ದು, ಆಕೆಯ ವರ್ತನೆಯನ್ನು ನೋಡಿದ ಪುರುಷರು ತಮ್ಮ ಸೀಟ್ ನಿಂದ ಎದ್ದು ಮುಂದೆ ಬಂದು ನಿಂತಿದ್ದಾರೆ. ದೆಹಲಿ ಸಾರಿಗೆ ಕಾರ್ಪೋರೇಷನ್ ಗೆ ಸೇರಿದಂತಹ ಬಸ್ ನಲ್ಲಿ ಈ ಘಟನೆ ನಡೆದಿದೆ.
ಈ ಮಹಿಳೆ ಯಾರು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಅಧಿಕಾರಿಗಳು ಕೆಲವು ಕಾರಣಗಳಿಂದ ಮಹಿಳೆಯ ಪರಿಚಯವನ್ನು ಬಹಿರಂಗ ಪಡಿಸಿಲ್ಲ ಎನ್ನಲಾಗಿದೆ. ವೀಡಿಯೋ ವೈರಲ್ ಆದ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಇಂತಹವರನ್ನು ತಡೆಯಲು, ದಂಡಿಸಲು ಕಾನೂನುಗಳಿಲ್ಲವೇ ? ಎಂದು ಪ್ರಶ್ನೆ ಮಾಡಿದ್ದಾರೆ.