Zomato: ದಯವಿಟ್ಟು ಈ ಸಮಯದಲ್ಲಿ ಫುಡ್ ಆರ್ಡರ್ ಮಾಡಬೇಡಿ; ಗ್ರಾಹಕರ ಮುಂದೆ Zomato ಮನವಿ

Written by Soma Shekar

Published on:

---Join Our Channel---

Zomato : ಆನ್ ಲೈನ್ (Online) ಯುಗದಲ್ಲಿ ಮನೆಗೆ ಬೇಕಾಗುವ ವಸ್ತುಗಳಿಂದ ಹಿಡಿದು ತಿನ್ನುವ ಆಹಾರದವರೆಗೂ ಎಲ್ಲವನ್ನೂ ಆರ್ಡರ್ ಮಾಡಿದರೆ ಸಾಕು. ಅದರಲ್ಲೂ ದೊಡ್ಡ ದೊಡ್ಡ ನಗರಗಳಲ್ಲಿ ಆನ್ಲೈನ್ ನಲ್ಲಿ ಫುಡ್ ಆರ್ಡರ್ ಮಾಡಿ ತರಿಸಿಕೊಳ್ಳುವುದು ಒಂದು ಟ್ರೆಂಡ್ ಆಗಿದೆ ಅಂದ್ರೆ ತಪ್ಪಾಗೋದಿಲ್ಲ. ಆದರೆ ಈಗ ದೇಶದ ಹಲವು ಕಡೆಗಳಲ್ಲಿ ತಾಪಮಾನ ಏರಿಕೆಯಾಗಿದೆ. ಬಿಸಿಲ ಬೇಗೆಗೆ ಕೆಲವು ಕಡೆಗಳಲ್ಲಿ ಜನರು ಮನೆಯಿಂದ ಹೊರಗೆ ಬರುವುದಕ್ಕೂ ಹೆದರುವ, ಹಿಂದೇಟು ಹಾಕುವ ಪರಿಸ್ಥಿತಿ ಉಂಟಾಗಿದೆ.

ಉತ್ತರ ಭಾರತದಲ್ಲಂತೂ (North India) ಬಿಸಿಲಿನ ಝಳ ತೀವ್ರವಾಗಿದ್ದು, ಕಳೆದ ಕೆಲವು ದಿನಗಳಲ್ಲೇ ಬಿಸಿಲಿನಿಂದ ಸತ್ತವರ ಸಂಖ್ಯೆ 87 ಕ್ಕೆ ಏರಿಕೆಯಾಗಿದೆ. ಇಂತಹ ಬೆಳವಣಿಗೆಯನ್ನು ನೋಡಿದ ಹವಾಮಾನ ಇಲಾಖೆ ಸಹಾ ಕಂಗಾಲಾಗಿದೆ. ಏರುತ್ತಿರುವ ತಾಪಮಾನ ಮತ್ತು ಬಿಸಿ ಗಾಳಿಯಿಂದ ಎಚ್ಚರವಾಗಿರುವಂತೆ ಜನರಿಗೆ ಸೂಚನೆಗಳನ್ನು ನೀಡಲಾಗಿದೆ.

ತಾಪಮಾನ ಇಂತಹ ಏರಿಕೆಯನ್ನು ಗಮನಿಸಿರುವ ಫುಡ್ ಡಿಲೆವರಿ ಸಂಸ್ಥೆ ಝೊಮ್ಯಾಟೋ (Zomato) ಗ್ರಾಹಕರಲ್ಲಿ ಒಂದು ವಿಶೇಷವಾದ ಮನವಿಯನ್ನು ಮಾಡಿಕೊಂಡಿದೆ. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದಾಗ ಬಿಸಿಲಿನ ತಾಪಮಾನದಲ್ಲಿ ಈ ಬಾರಿ ಇನ್ನಷ್ಟು ಏರಿಕೆಯಾಗಿದ್ದು, ಹಾಗಾಗಿ ಇದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಆದ ಕಾರ್‌ ಮಧ್ಯಾಹ್ನದ ವೇಳೆಯಲ್ಲಿ ಹೆಚ್ಚು ಪುಡ್ ಆರ್ಡರ್ ಮಾಡುವವರು ಅದನ್ನು ತಪ್ಪಿಸಿ ಎಂದು ಹೇಳಿದೆ.

ಸಾಮಾನ್ಯವಾಗಿ ಮಧ್ಯಾಹ್ನದ ಸಮಯವೇ ಫುಡ್ ಆರ್ಡರ್ ನ ಪೀಕ್ ಅವರ್ಸ್​ ಆಗಿರೋದ್ರಿಂದ, ಈ ಸಮಯದಲ್ಲಿ ಹೆಚ್ಚಿನ ಗ್ರಾಹಕರು ಫುಡ್ ಆರ್ಡರ್ ಮಾಡ್ತಾರೆ. ಸರಿಯಾದ ಸಮಯಕ್ಕೆ ಆಹಾರವನ್ನು ತಲುಪಿಸಲು ಬಿಸಿಲ ಬೇಗೆಯಲ್ಲಿ ನಮ್ಮ ಡಿಲೆವರಿ ಬಾಯ್ ಗಳು ಹೋರಾಡಬೇಕಾಗಿದೆ. ಆದ್ದರಿಂದ ಮಧ್ಯಾಹ್ನ ಫುಡ್ ಆರ್ಡರ್ ಮಾಡೋದನ್ನ ಕೈ ಬಿಡಿ, ಅನಿವಾರ್ಯವಿದ್ದರೆ ಮಾತ್ರ ಮಾಡಿ ಎಂದು ಝೋಮ್ಯಟೋ ತನ್ನ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಮನವಿ ಮಾಡಿದೆ.

Leave a Comment