Shravani Subramanya: ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಸೀರಿಯಲ್ ನಲ್ಲಿ ಮತ್ತೊಂದು ಹೊಸ ತಿರುವಿನ ಸುಳಿವು ಸಿಕ್ಕಿದೆ. ಅಪ್ಪನಿಗೆ ಪ್ರೀತಿ ತೋರಿಸಲು ಹೋಗಿ ಅದರಿಂದ ನೋವನ್ನ ಅನುಭವಿಸಿದ ಶ್ರಾವಣಿಗೆ ಸುಬ್ಬು ಹೇಗೋ ಸಮಾಧಾನ ಮಾಡಿ ಊಟ ಮಾಡಿಸಿದ್ದಾನೆ. ಇವೆಲ್ಲವುಗಳ ನಂತರ ಶ್ರಾವಣಿ ತಾನು ಅಪ್ಪನ ಮುಂದೆ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ ಅಂತ ಶಪಥ ಮಾಡಿದ್ದಾಳೆ. ಟಿವಿ ನೋಡೋಕಂತ ಹಾಲ್ ಗೆ ಬಂದ ಶ್ರಾವಣಿ ಅಪ್ಪ ಇದ್ದುದ್ದನ್ನು ನೋಡಿ ಅಲ್ಲಿಂದ ಅಡುಗೆ ಮನೆಗೆ ಬರ್ತಾಳೆ. ಆಗ ಚಿಕ್ಕಮ್ಮ ಅಡುಗೆ ಮಾಡೋಕೆ ಬಂದ ಅಂತ ರೇಗಿಸುತ್ತಾರೆ.
ಆಗ ಶ್ರಾವಣಿ, ಒಂದು ದಿನ ಅಡುಗೆ ಮಾಡಿ ಕೊಟ್ಟಿದ್ದಕ್ಕೆ ಅದು ವಿಷ ಆಯ್ತು. ಇನ್ನೊಂದ್ ಸಲ ಮಾಡಿ ಇನ್ನೇನು ಆಗೋದು ಬೇಡ ಅಂತ ಹೇಳಿ ಮಾತನಾಡುವಾಗಲೇ ಡೋರ್ ಬೆಲ್ ಸದ್ದಾಗುತ್ತೆ. ಬಂದಿರೋದು ಯಾರಂತ ನೋಡಲು ಹೋದ ಶ್ರಾವಣಿ ಮುಂದೆ ಒಬ್ಬ ಅಪರಿಚಿತ ಹಿರಿಯ ವ್ಯಕ್ತಿ ಒಂದಿಬ್ಬರು ಕೆಲಸದವರ ಜೊತೆ ನಿಂತಿರೋದು ಕಾಣಿಸುತ್ತೆ. ಶ್ರಾವಣಿ ಅಚ್ಚರಿಯಿಂದ ಯಾರು ಬೇಕು ಅಂತ ಕೇಳಿದಾಗ ಆ ಹಿರಿಯ ವ್ಯಕ್ತಿ ವೀರೇಂದ್ರನ ನೋಡಬೇಕು ಅಂತ ಹೆಸರು ಹಿಡಿದು ಕರೆಯುವುದನ್ನು ನೋಡಿ ಅವಳಿಗೆ ಶಾಕ್ ಆಗುತ್ತೆ.
ಬಹುಶಃ ಅಪ್ಪನಿಗೆ ತುಂಬಾ ಪರಿಚಯ ಇದ್ದವರು ಇರಬೇಕಂತ ಹಾಲ್ ಗೆ ಬಂದು ಚಿಕ್ಕಪ್ಪ ಯಾರೋ ಬಂದಿದ್ದಾರೆ, ಅಪ್ಪನನ್ನ ನೋಡೋದಕ್ಕೆ ಅಂತ ಹೇಳ್ತಾಳೆ. ಆಗ ಚಿಕ್ಕಪ್ಪ ಒಳಗೆ ಕರ್ಕೊಂಡು ಬಾ ಹೇಳಿದಾಗ ಬಂದವರನ್ನು ಶ್ರಾವಣಿ ಆಹ್ವಾನ ಮಾಡ್ತಾಳೆ. ಅವರು ಮನೆಯೊಳಗೆ ಬಂದಿದ್ದೆ ತಡ ವೀರೇಂದ್ರ ಮತ್ತು ಸುರೇಂದ್ರ ಇಬ್ಬರು ಎದ್ದು ನಿಂತು ಆ ವ್ಯಕ್ತಿಗೆ ಗೌರವ ಸಲ್ಲಿಸುತ್ತಾರೆ. ಒಂದಷ್ಟು ಮಾತುಕತೆ ನಡೆಸುತ್ತಾರೆ. ಇದೆಲ್ಲಾ ನೋಡಿ ಶ್ರಾವಣಿಗೂ ಆಶ್ಚರ್ಯ ಆಗುತ್ತೆ. ಆ ಹಿರಿಯ ವ್ಯಕ್ತಿ ಹತ್ರ ವೀರೇಂದ್ರ (Veerendra) ಅತ್ತೆ ಅವರು ಹೇಗಿದ್ದಾರೆ ಅಂತ ವಿಚಾರಿಸುತ್ತಾರೆ.
ಆ ವ್ಯಕ್ತಿ ಅವರೇ ನಮ್ಮನ್ನು ಇಲ್ಲಿ ಕಳಿಸಿದ್ದು ಸಾಲಿಗ್ರಾಮದಲ್ಲಿ ಪುಷ್ಕರಣಿ ಉತ್ಸವ ನಡೆಯುತ್ತೆ. ಹಲವು ವರ್ಷಗಳ ನಂತರ ಮೊದಲ ಬಾರಿಗೆ ಉತ್ಸವ ನಡೆಯುತ್ತಿದ್ದು, ನಿಮ್ಮನ್ನ ಆಹ್ವಾನಿಸುವ ಸಲುವಾಗಿ ಬಂದಿದ್ದೇನೆ. ಪುಷ್ಕರಣಿ ಉತ್ಸವದಲ್ಲಿ ಪಲ್ಲಕ್ಕಿ ಹೊರೋದಕ್ಕೆ ಆ ಕುಟುಂಬದ ಒಂದೇ ಒಂದು ಕುಡಿ ಈಗ ಇರೋದು, ಅದು ನಮ್ಮ ಶ್ರಾವಣಿಗೆ 24 ವರ್ಷ ಆಗೋವರೆಗೂ ಉತ್ಸವ ಮಾಡಬಾರದು ಅಂತ ಪುರೋಹಿತರು ಹೇಳಿದ್ದು ನಿಮಗೆ ಗೊತ್ತಿದೆ.
ಈಗ ಅದಕ್ಕೆ ಸಕಾಲ ಕೂಡಿ ಬಂದಿದೆ ಅಂತ ಹೇಳಿದಾಗ ಶ್ರಾವಣಿಗೆ ಇವರು ತಮ್ಮ ಅಜ್ಜಿ ಊರಿನವರು ಅಂತಹ ಅರ್ಥವಾಗುತ್ತೆ. ತನಗೊಬ್ಬರು ಅಜ್ಜಿ ಇದ್ದಾರೆ ಅನ್ನೋದನ್ನ ಕೇಳಿ ಸಿಕ್ಕಾಪಟ್ಟೆ ಖುಷಿ ಪಡ್ತಾಳೆ. ಆದರೆ ಇನ್ನೊಂದು ಕಡೆ ವೀರೇಂದ್ರನ ಚಡಪಡಿಕೆ ಕಾಣುತ್ತೆ. ಇದೇ ವೇಳೆ ಬಂದಿರುವ ವ್ಯಕ್ತಿ ಉತ್ಸವಕ್ಕೆ ಪದ್ಮನಾಭ ಅವರ ಕುಟುಂಬದವರನ್ನು ಕೂಡಾ ಕರ್ಕೊಂಡು ಬರೋದಕ್ಕೆ ಅಮ್ಮ ಅವರು ಹೇಳಿದ್ದಾರೆ ಅನ್ನೋ ಮಾತನ್ನು ಹೇಳುತ್ತಾನೆ. ಇನ್ನು ಬಂದವರಿಗೆ ಶ್ರಾವಣಿನ ವೀರೇಂದ್ರ ಪರಿಚಯ ಮಾಡ್ಕೊಡ್ತಾನಾ?
ಅಜ್ಜಿ ಊರಿಗೆ ಹೋಗುವಂತಹ ಶ್ರಾವಣಿಯ ಅದೃಷ್ಟ ಬದಲಾಗುತ್ತಾ? ಸಾಲಿಗ್ರಾಮದ ಹೆಸರನ್ನು ಕೇಳಿ ಬೆಚ್ಚಿಬಿದ್ದಿರುವ ವಿಜಯಾಂಬಿಕ ಕೆಟ್ಟ ಸಮಯ ಶುರುವಾಗುತ್ತಾ, ಅಲ್ಲದೇ ಸುಬ್ಬು ಕುಟುಂಬವನ್ನ ಕೂಡಾ ವಿಶೇಷವಾಗಿ ಆಹ್ವಾನಿಸಿದ್ದಾರೆ ಅಂದಮೇಲೆ ಸುಬ್ಬು ಕುಟುಂಬಕ್ಕೂ, ವೀರೇಂದ್ರನ ಕುಟುಂಬಕ್ಕೂ ಏನಾದರೂ ಸಂಬಂಧ ಇದೆಯಾ? ಅನ್ನುವಂತಹ ಹಲವು ಪ್ರಶ್ನೆಗಳಿಗೆ ಉತ್ತರಕ್ಕಾಗಿ ಕಾಯಬೇಕಾಗಿದೆ.