Shravani Subramanya: ವೀರೇಂದ್ರನ ಸಿಟ್ಟಿಗೆ ಗುರಿಯಾದ ಮದನ್, ವಿಜಯಾಂಬಿಕಾಗೆ ತೀವ್ರ ಮುಖಭಂಗ

Written by Soma Shekar

Published on:

---Join Our Channel---

Shravani Subramanya: ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಸಿರಿಯಲ್ ನ ನಿನ್ನೆಯ ಸಂಚಿಕೆಯಲ್ಲಿ ಸುಬ್ಬು ಮೇಲೆ ಹೊಟ್ಟೆ ಕಿಚ್ಚಿನ‌ ಕತ್ತಿ ಮಸಿಯುತ್ತಿರುವ ಮದನ್ ಹಾಗೂ ವಿಜಯಾಂಬಿಕ ಇಬ್ಬರಿಗೂ ವೀರೇಂದ್ರನಿಂದ ತಕ್ಕ ಶಾಸ್ತಿಯಾಗಿದೆ. ಕಾನ್ಫರೆನ್ಸ್ ನಲ್ಲಿ ನಡೆದಂತಹ ವಿಚಾರಗಳಿಂದ ಅಸಮಾಧಾನಗೊಂಡಿರುವ ವೀರೇಂದ್ರ ತಾನು ಯಾರ ಜೊತೆಯೂ ಮಾತನಾಡೋದಕ್ಕೆ ಇಷ್ಟ ಇಲ್ಲ ಅಂತ ಹೇಳ್ತಾರೆ. ಅದನ್ನೇ ಅವಕಾಶವನ್ನಾಗಿ ಮಾಡಿಕೊಂಡ ಮದನ್ ಹಾಗೂ ವಿಜಯಾಂಬಿಕ ಮನೆಗೆ ಬಂದಂತಹ ಸುಬ್ಬುನ ಅವನ ಕಾಲರ್ ಹಿಡಿದು ಮನೆಯಿಂದ ಹೊರಗಡೆ ಹಾಕಿದ್ದಾರೆ.

ಅಲ್ಲದೇ ಸುಬ್ಬು (Subbu) ತಾನು ಯಜಮಾನ್ರ ಹತ್ರ ಮಾತಾಡಿಕೊಂಡು ಹೋಗ್ತೀನಿ ಅಂದ್ರೂ ಕೇಳದೇ ಅವನಿಗೆ ಬಾಯಿಗೆ ಬಂದ ಹಾಗೆ ಬೈತಾರೆ ಮತ್ತು ಮದನ್ ಸುಬ್ಬುನ ನಾಯಿಗೆ ಹೋಲಿಕೆ ಮಾಡ್ತಾನೆ. ಸುಬ್ಬು ಮತ್ತೆ ರಿಕ್ವೆಸ್ಟ್ ಮಾಡಿಕೊಂಡಾಗ ವಿಜಯಾಂಬಿಕೆ ಸುಬ್ಬುನ ಎಳೆದುಕೊಂಡು ಹೋಗಿ ಗೇಟಿಂದ ಆಚೆ ಹಾಕು ಅಂತ ಹೇಳ್ತಾಳೆ. ಮದನ್ ಅದೇ ಕೆಲಸವನ್ನು ಮಾಡ್ತಾನೆ. ಆದರೆ ಮನೆಯೊಳಗಿದ್ದ ವೀರೇಂದ್ರನಿಗೆ ಸುಬ್ಬು ಬಂದಿರೋ ವಿಷಯ ಗೊತ್ತಿರುವುದಿಲ್ಲ. ಅವರಿಗೆ ಸುಬ್ಬು ಜೊತೆ ಮಾತನಾಡಬೇಕು ಅನ್ಸುತ್ತೆ.

ಸುಬ್ಬು ಮಾತಾಡಿದ ಹಾಗಾಯ್ತಲ್ಲ ಅಂತ ಅಂದುಕೊಳ್ಳುತ್ತಾರೆ ನಂತರ ಸುಬ್ಬು ಜೊತೆ ಮಾತನಾಡೋದಕ್ಕೆ ಫೋನ್ ಮಾಡಿದಾಗ ಸುಬ್ಬು ತಾನು ಮನೆ ಗೇಟ್ ಬಳಿ ಇರೋ ವಿಚಾರವನ್ನು ಹೇಳ್ತಾನೆ.‌ ಆ ಮಾತು ಕೇಳಿದ ವೀರೇಂದ್ರ (Veerendra) ಹೊರಗಡೆ ಬಂದು ನೋಡಿದಾಗ ಸುಬ್ಬು ಗೇಟ್ ಆಚೆ ಇರೋದು ಕಾಣುತ್ತೆ, ಸುಬ್ಬುನ ಮದನ್ ಗೇಟ್ ನಿಂದ ಆಚೆ ಹಾಕಿರೋ ವಿಷಯ ಗೊತ್ತಾಗುತ್ತೆ. ಅವನು ಮಾವ ನಿಮಗೆ ಇನ್ನು ಅವನಿಂದ ತೊಂದರೆ ಆಗಲ್ಲ, ನಾನು ಅವನನ್ನ ಹೊರಗೆ ಹಾಕಿದ್ದೀನಿ ಅಂತ ಹೇಳ್ತಾನೆ. ಇದನ್ನು ಕೇಳಿ ವೀರೇಂದ್ರ ಸಿಕ್ಕಾಪಟ್ಟೆ ಕೋಪಗೊಳ್ಳುತ್ತಾರೆ.

ಹಾಗಾದ್ರೆ ನೀನು ಈ ಮನೆಯಿಂದ ಹೊರಗೆ ಹೋಗ್ತೀಯಾ, ಆಗ ನಿನ್ನಿಂದಲೂ ನನಗೆ ಯಾವುದೇ ತೊಂದರೆ ಇರೋದಿಲ್ಲ. ನೀನು ಹೇಗೆ ಈ ಮನೆಯವನೋ ಹಾಗೆ ಸುಬ್ಬು ಕೂಡಾ ಈ ಮನೆಯವನು. ಅವನು ಯಾವತ್ತೂ ಕೂಡಾ ಹೊರಗಿನವನಾಗೋದಕ್ಕೆ ಸಾಧ್ಯವೇ ಇಲ್ಲ ಅಂತ ಸುಬ್ಬುನ ಕರೆದು ಮನೆ ಒಳಗೆ ಕರ್ಕೊಂಡು ಹೋಗಿ ತನ್ನ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳುತ್ತಾನೆ. ಸುಬ್ಬುನ ಹೊರ ಹಾಕಿದ್ದ ವಿಜಯಾಂಬಿಕ ಮತ್ತು ಮದನ್ ಗೆ ತೀವ್ರ ಮುಖಭಂಗ ಎದುರಾಗಿದೆ.

Leave a Comment