Kangana Ranaut: ಅಂದೇ ಏಕೆ ಭಾರತವನ್ನು ಹಿಂದೂ ರಾಷ್ಟ್ರ ಅಂತ ಘೋಷಣೆ ಮಾಡಲಿಲ್ಲ? ಕಂಗನಾ ಪ್ರಶ್ನೆ

Written by Soma Shekar

Published on:

---Join Our Channel---

Kangana Ranaut: ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಈ ಹಿಂದೆ ಒಂದು ಸಲ ಭಾರತಕ್ಕೆ (India) ನಿಜವಾದ ಸ್ವಾತಂತ್ರ 2014ರಲ್ಲಿ ಸಿಕ್ಕಿತ್ತು ಎನ್ನುವ ಮಾತನ್ನು ಹೇಳುವ ಮೂಲಕ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದು ಮಾತ್ರವೇ ಅಲ್ಲದೇ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದ್ದರು. ಈಗ ನಟಿಯು ತಮ್ಮ ಈ ಹಿಂದಿನ ಹೇಳಿಕೆಯನ್ನು ಮತ್ತೊಮ್ಮೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ನಟಿ ಕಂಗನಾ ರಣಾವತ್ ಹಿಮಾಚಲ ಪ್ರದೇಶದ ಮಂಡಿ (Mandi) ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣಾ ಕಣದಲ್ಲಿ ಸ್ಪರ್ಧಿಯಾಗಿದ್ದಾರೆ.

ಅವರು ಕುಲುವಿನಲ್ಲಿ (Kulu) ನಡೆದಂತಹ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆಯಲ್ಲಿ 1947ರಲ್ಲಿ ಪಾಕಿಸ್ತಾನವನ್ನು ಧರ್ಮದ ಆಧಾರದ ಮೇಲೆ ರಚನೆ ಮಾಡಲಾಯಿತು. ಹಾಗಾದರೆ ಆ ಸಮಯದಲ್ಲಿ ಭಾರತವನ್ನು ಹಿಂದೂ ರಾಷ್ಟ್ರ ಎಂದು ಏಕೆ ಘೋಷಣೆ ಮಾಡಲಿಲ್ಲ? ಎಂದು ಪ್ರಶ್ನೆಯನ್ನು ಮಾಡಿದ್ದಾರೆ. ಅಲ್ಲದೇ ಭಾರತ ಒಂದು ಹಿಂದೂ ರಾಷ್ಟ್ರವಾಗಬೇಕು, ಆ ನಿಟ್ಟಿನಲ್ಲಿ ನಾವು ಕೆಲಸವನ್ನು ಮಾಡುತ್ತೇವೆ ಎನ್ನುವ ಮಾತುಗಳನ್ನು ಹೇಳುವ ಮೂಲಕ ಈಗ ಮತ್ತೊಮ್ಮೆ ಹೊಸ ಚರ್ಚೆಗೆ ಕಾರಣವಾಗಿದ್ದಾರೆ.

1947ರ ನಂತರ ಏನು ಅನುಸರಿಸಿದರು. ಭಾರತವು ಬ್ರಿಟಿಷರ (Britishes) ಆಳ್ವಿಕೆಯಿಂದ ಮುಕ್ತವಾದ ನಂತರ ಹಲವರು ದಶಕಗಳ ಕಾಲ ಕಾಂಗ್ರೆಸ್‌ ನ ದುರಾಡಳಿತವನ್ನು ನೋಡಿದೆ. ನಮ್ಮ ಪೂರ್ವಜರು ಮೊಘಲರ ಗುಲಾಮಗಿರಿ, ನಂತರ ಬ್ರಿಟಿಷರ ಗುಲಾಮಗಿರಿ ಅದಾದ ನಂತರ ಕಾಂಗ್ರೆಸ್‌ ನ ದುರಾಡತವನ್ನು ನೋಡಿದೆ. ಆದರೆ ನಮಗೆ ನಿಜವಾಗಿಯೂ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ ಎಂದು ಕಂಗನಾ ರಣಾವತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರವು ಆಡಳಿತಾರೂಢ ಕಾಂಗ್ರೆಸ್‌ ನ ಭದ್ರಕೋಟೆಯಾಗಿದೆ. ಕಾಂಗ್ರೆಸ್‌ ನ ವಿಕ್ರಮಾದಿತ್ಯ ಸಿಂಗ್ ಅವರ ಎದುರು ಕಂಗನಾ ಚುನಾವಣೆಯ ಕಣಕ್ಕೆ ಇಳಿದಿದ್ದಾರೆ. ಮಂಡಿ ಕ್ಷೇತ್ರದಲ್ಲಿ ಬರುವ ಜೂನ್ ಒಂದರಂದು ಮತದಾನಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಕಂಗನಾ ಚುನಾವಣೆಯಲ್ಲಿ ಗೆದ್ದು ವಿಜಯಪತಾಕೆಯನ್ನು ಹಾರಿಸುತ್ತಾರಾ? ಎನ್ನುವುದನ್ನು ಕಾದು ನೋಡಬೇಕಾಗಿದೆ.

Leave a Comment