Tollywood : ಜೂ.NTR, ಪ್ರಶಾಂತ್ ನೀಲ್ ಸಿನಿಮಾಕ್ಕೆ ಯುವ ಸ್ಟಾರ್ ನಟನ ಎಂಟ್ರಿ; ಸುದ್ದಿ ಕೇಳಿ ಶಾಕ್, ಥ್ರಿಲ್ ಆದ ಫ್ಯಾನ್ಸ್

Written by Soma Shekar

Published on:

---Join Our Channel---

Tollywood : ದಕ್ಷಿಣದ ಸ್ಟಾರ್ ನಿರ್ದೇಶಕರ ಸಾಲಿನಲ್ಲಿ ಸ್ಥಾನವನ್ನು ಪಡೆದಿರುವ ಪ್ರಶಾಂತ್ ನೀಲ್ (Prashant Neel) ತಮ್ಮ ಸಿನಿಮಾವೊಂದಕ್ಕೆ ತೆಲುಗಿನ ಸ್ಟಾರ್ ನಟ ಜೂ. ಎನ್ ಟಿ ಆರ್ (Jr NTR) ಜೊತೆಗೆ ಕೈಜೋಡಿಸಿರುವ ವಿಚಾರವು ಎಲ್ಲರಿಗೂ ಗೊತ್ತೇ ಇದೆ. ಸಲಾರ್ 2 ಸಿನಿಮಾದ ನಂತರ ಜೂ. ಎನ್ ಟಿ ಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾದ ಕೆಲಸಗಳು ಆರಂಭವಾಗಲಿದೆ ಎನ್ನುವ ವಿಚಾರವು ಸಹಾ ಈಗಾಗಲೇ ಸುದ್ದಿಯಾಗಿದ್ದು, ಈಗ ಸಿನಿಮಾದ ಕುರಿತಾಗಿ ಹೊಸದೊಂದು ಅಪ್ಡೇಟ್ ಹೊರಗೆ ಬಂದಿದೆ.

ಹೊಸ ಸುದ್ದಿಯ ಪ್ರಕಾರ ತೆಲುಗಿನ (Bollywood) ನವ ಯುವ ನಟರಲ್ಲಿ ಒಬ್ಬರಾಗಿ ಗುರ್ತಿಸಿಕೊಂಡಿರುವ ವಿಶ್ವಕ್ ಸೇನ್ (Vishwak Sen) ಈಗ ಜೂ. ಎನ್ ಟಿ ಆರ್ ಸಿ‌ನಿಮಾಕ್ಕೆ ಎಂಟ್ರಿ ನೀಡಿದ್ದಾರೆ. ಸದ್ಯಕ್ಕೆ ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾದ ಮೂಲಕ ಸಿನಿ ಪ್ರಿಯರನ್ನು ರಂಜಿಸುತ್ತಿರುವ ವಿಶ್ವಕ್ ಸೇನ್ ಈಗ ಪ್ರಶಾಂತ್ ನೀಲ್ ಮತ್ತು ಜೂ. ಎನ್ ಟಿ ಆರ್ ಸಿನಿಮಾಕ್ಕೆ ಸಾಥ್ ನೀಡಿದ್ದಾರೆ.

ತೆಲುಗಿನಲ್ಲಿ ಈಗಾಗಲೇ ವಿನೂತನ ಕಥೆಗಳು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿ ಜನ ಮೆಚ್ಚುಗೆಯನ್ನು ಪಡೆದುಕೊಂಡಿರುವ ವಿಶ್ವಕ್ ಸೇನ್ ಈಗ ಜೂ. ಎನ್ ಟಿ ಆರ್ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆನ್ನುವ ವಿಷಯವನ್ನು ಕೇಳಿ ಈ ನಟನ ಅಭಿಮಾನಿಹಳು ಖುಷಿಯಾಗಿದ್ದಾರೆ.

ಈ ಸಿನಿಮಾದಲ್ಲಿ ನಾಯಕ ನಟನಷ್ಟೇ ಗಟ್ಟಿ ಪಾತ್ರವನ್ನು ವಿಶ್ವಕ್ ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಜೂ. ಎನ್ ಟಿ ಆರ್ ಮತ್ತು ವಿಶ್ವಕ್ ಸೇನ್ ನಡುವೆ ಒಂದು ಉತ್ತಮವಾದ ಸ್ನೇಹವಿದೆ ಎನ್ನುವುದು ವಿಶೇಷ. ಇನ್ನು ಪ್ರಶಾಂತ್ ನೀಲ್ ಜೂ. ಎನ್ ಟಿ ಆರ್ ಗಾಗಿ ಒಂದು ಉತ್ತಮ ಕಥೆಯನ್ನು ಸಿದ್ಧಪಡಿಸಿದ್ದು, ಸಲಾರ್ ನಂತರ ಈ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.‌

Leave a Comment