Toxic Movie: ಕರೀನಾ ಜಾಗಕ್ಕೆ ಲೇಡಿ ಸೂಪರ್ ಸ್ಟಾರ್ ಎಂಟ್ರಿ; ಯಶ್ ಟಾಕ್ಸಿಕ್ ನಲ್ಲಾದ ಬದಲಾವಣೆಗೆ ಫ್ಯಾನ್ಸ್ ಥ್ರಿಲ್

Written by Soma Shekar

Published on:

---Join Our Channel---

Toxic Movie: ರಾಕಿಂಗ್ ಸ್ಟಾರ್ ಯಶ್ (Yash) ಅವರ ಮುಂದಿನ ಸಿನಿಮಾ ಟಾಕ್ಸಿಕ್ (Toxic Movie) ಸಾಕಷ್ಟು ಸುದ್ದಿಯಲ್ಲಿದೆ. ಸಿನಿಮಾದಲ್ಲಿ ನಟಿಸುವ ಕಲಾವಿದರ ವಿಷಯವಾಗಿ ಆಗಾಗ ಸುದ್ದಿಗಳಾಗ್ತಾನೇ ಇದೆ. ಈ ಸಿನಿಮಾದಲ್ಲಿ ಬಾಲಿವುಡ್ ನ ಬೇಬೋ ಕರೀನಾ ಕಪೂರ್ (Kareena Kapoor) ಪ್ರಮುಖ ಪಾತ್ರವೊಂದರಲ್ಲಿ ನಟಿಸ್ತಾರೆ ಅಂತ ಹೇಳಲಾಗಿತ್ತು. ಆದರೆ ಈಗ ಡೇಟ್ಸ್ ಗಳು ಹೊಂದಾಣಿಕೆಯಾಗದ ಕಾರಣದಿಂದ ಬೇಬೋ ಈ ಸಿನಿಮಾದಿಂದ ಹೊರಗೆ ಬಂದಿದ್ದಾರೆ ಅನ್ನೋ ಹೊಸ ಸುದ್ದಿ ವೈರಲ್ ಆಗಿದೆ. ಕರೀನಾ ಟಾಕ್ಸಿಕ್ ನಿಂದ ಹೊರ ಬಂದ ಸುದ್ದಿಯ ಬೆನ್ನಲ್ಲೇ ಮತ್ತೊಂದು ಹೊಸ ಸುದ್ದಿಯಾಗಿದ್ದು ಇದನ್ನ ಕೇಳಿ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ.

ಹೌದು, ಕರೀನಾ ಟಾಕ್ಸಿಕ್ ಸಿನಿಮಾದಲ್ಲಿ ಒಂದು ಪವರ್ ಫುಲ್ ಪಾತ್ರದಲ್ಲಿ ನಟಿಸ್ತಾರೆ ಅನ್ನೋ ಸುದ್ದಿಯಾಗಿತ್ತು. ಕರೀನಾ ಸಹಾ ತಾನೊಂದು ಸೌತ್ ಸಿನಿಮಾದಲ್ಲಿ ನಟಿಸೋದಾಗಿ ಹೇಳಿದ್ರು. ಅದು ಯಶ್ ಅವರ ಟಾಕ್ಸಿಕ್ ಅಂತ ಗೊತ್ತಾದಾಗ ಅನೇಕರು ಕರೀನಾ ಬೇಕಾಗಿಲ್ಲ, ಕರೀನಾ ಸೂಟ್ ಆಗೋದಿಲ್ಲ ಎಂದೆಲ್ಲಾ ತಮ್ಮ ತಮ್ಮ ಅಭಿಪ್ರಾಯಗಳನ್ನು ಸೋಶಿಯಲ್ ಮೀಡಿಯಗಳ ಮೂಲಕ ಹಂಚಿಕೊಂಡಿದ್ದರು.

ಈಗ ಕರೀನಾ ಸಿನಿಮಾ ಹೊರ ಬಂದಿದ್ದಾರೆ ಅನ್ನೋದು ಕೇಳಿ ಒಂದಷ್ಟು ಜನ ಖುಷಿಯಾಗಿರೋವಾಗ್ಲೇ ಅವರು ಮತ್ತಷ್ಟು ಎಕ್ಸೈಟ್ ಆಗೋ ಸುದ್ದಿ ಸದ್ದು ಮಾಡಿದೆ. ಕೆಲವು ಮಾಹಿತಿಗಳ ಪ್ರಕಾರ ಕರೀನಾ ಮಾಡಬೇಕಿದ್ದ ಪಾತ್ರಕ್ಕೆ ಈಗ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಟಿ ನಯನತಾರಾ ಎಂಟ್ರಿಯನ್ನು ನೀಡ್ತಿದ್ದಾರೆ ಅನ್ನೋ ವಿಷಯ ಎಲ್ಲೆಡೆ ಹರಿದಾಡಿದ್ದು, ಸಿನಿ ಪ್ರೇಮಿಗಳ ಗಮನವನ್ನ ಸೆಳೆದಿದೆ.

ಶಾರೂಖ್ ಖಾನ್ ನ ಜವಾನ್ (Jawan Movie) ಸಿನಿಮಾದಲ್ಲಿ ನಟಿಸುವ ಮೂಲಕ ಬಾಲಿವುಡ್ ನ ಗಮನ ಸೆಳೆದಿರುವ ನಯನತಾರಾ ಜವಾನ್ ನಂತರ ಹೊಸ ಬಾಲಿವುಡ್ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಆದರೆ ಈಗ ಬಾಲಿವುಡ್ ನಟಿ ಮಾಡಬೇಕಿದ್ದ ಪಾತ್ರಕ್ಕೆ ನಯನತಾರಾ ಬರ್ತಾರೆ ಅಂತ ತಿಳಿದ ಮೇಲೆ ಸಿನಿ ಪ್ರೇಮಿಗಳಂತೂ ಇದು ಸರಿಯಾದ ಆಯ್ಕೆ ಅಂತ ಮೆಚ್ಚುಗೆಗಳನ್ನು ನೀಡೋದಕ್ಕೆ ಪ್ರಾರಂಭ ಮಾಡಿದ್ದಾರೆ.

ಚಿತ್ರತಂಡ ಮತ್ತು ನಿರ್ದೇಶಕಿ ಗೀತು ಮೋಹನ್ ದಾಸ್ (Geethu Mohan Das) ಅವರು ನಯನತಾರ ಜೊತೆಗೆ ಮಾತುಕತೆಯನ್ನು ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೇ ನಟಿ ನಯನತಾರಾ (Nayanthara) ಕೂಡಾ ತನಗಾಗಿ ಬರೆದಿರುವ ಪಾತ್ರದ ಕುರಿತಾಗಿ ಕೇಳಿ ಅದರಿಂದ ಪ್ರಭಾವಿತರಾಗಿದ್ದಾರೆ ಎನ್ನಲಾಗಿದ್ದು, ಒಂದು ವೇಳೆ ಮಾತುಕತೆ ಫಲಪ್ರದವಾದಲ್ಲಿ ನಯನತಾರಾ ಟಾಕ್ಸಿಕ್ ಸಿನಿಮಾದಲ್ಲಿ ನಟಿಸುವುದು ಖಚಿತವಾಗುತ್ತದೆ.‌

ಟಾಕ್ಸಿಕ್ ಸಿನಿಮಾದಲ್ಲಿ ಈ ಪಾತ್ರವು ನಾಯಕ ನಟ ಯಶ್ ಅವರ ಸಹೋದರಿಯ ಪಾತ್ರ ಎನ್ನಲಾಗಿದ್ದು, ಇದೊಂದು ಪವರ್ ಫುಲ್ ಪಾತ್ರವಾಗಿದೆ. ಕರೀನಾ ಕಪೂರ್ ಮತ್ತು ಯಶ್ ಅವರ ಡೇಟ್ಸ್ ಮತ್ತು ಶೆಡ್ಯೂಲ್ ಹೊಂದಾಣಿಕೆಯಾಗದ ಕಾರಣದಿಂದಾಗಿ ಕರೀನಾ ಟಾಕ್ಸಿಕ್ ಸಿನಿಮಾದಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ.

Leave a Comment