Mahesh Babu: ಅನಂತ್ ಅಂಬಾನಿ ಮದ್ವೆ ಮುಂದೆ ರಾಜಮೌಳಿ ಮಾತಿಗೆ ಬೆಲೇನೇ ಇಲ್ವಾ? ಮಹೇಶ್ ಬಾಬು ಮಾಡಿದ್ದೇನು

Written by Soma Shekar

Published on:

---Join Our Channel---

Mahesh Babu: ಉದ್ಯಮಿ ಹಾಗೂ ವಿಶ್ವದ ಅತಿ ಎತ್ತರ ಶ್ರೀಮಂತರಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ (Anant Ambani Wedding) ವೈಭವದಿಂದ ನಡೆದಿದೆ. ಕಳೆದ ಕೆಲವು ದಿನಗಳಿಂದಲೂ ಕೂಡಾ ಸುದ್ದಿ ಮಾದ್ಯಮಗಳಲ್ಲಿ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಅನಂತ್ ಮತ್ತು ರಾಧಿಕಾ ಮದುವೆಯ ಫೋಟೋಗಳು, ವಿಡಿಯೋಗಳು ಮತ್ತು ಅದಕ್ಕೆ ಸಂಬಂಧಿಸಿದ ಒಂದಷ್ಟು ಸುದ್ದಿಗಳು ಹರಿದಾಡುತ್ತಿವೆ.

ಈ ಮದುವೆಗೆ ಬಾಲಿವುಡ್ ಮಾತ್ರವೇ ಅಲ್ಲದೇ ದಕ್ಷಿಣ ಸಿನಿಮಾ ರಂಗದಿಂದ ಹಾಗೂ ಹಾಲಿವುಡ್ ನಿಂದಲೂ ಬಹಳಷ್ಟು ಜನ ದೊಡ್ಡ ದೊಡ್ಡ ಸ್ಟಾರ್ ಗಳು ಆಗಮಿಸಿ ವಧು ವರನಿಗೆ ಶುಭ ಹಾರೈಸಿದ್ದಾರೆ. ಈ ಮದುವೆಯಲ್ಲಿ ಭಾಗವಹಿಸುವುದಕ್ಕಾಗಿ ದೊಡ್ಡ ದೊಡ್ಡ ಸ್ಟಾರ್ ಗಳು ತಮ್ಮ ಸಿನಿಮಾ ಚಿತ್ರೀಕರಣಗಳಿಂದ ಬ್ರೇಕ್ ಪಡೆದುಕೊಂಡು ಮದುವೆಯಲ್ಲಿ ಭಾಗಿಯಾಗಿದ್ದರು.

ರಾಕಿಂಗ್ ಸ್ಟಾರ್ ಯಶ್, ರಾಮ್ ಚರಣ್, ಮಹೇಶ್ ಬಾಬು (Mahesh Babu), ಶಾರುಖ್ ಖಾನ್, ರಣಬೀರ್ ಸಿಂಗ್, ಆಲಿಯಾ ಭಟ್, ಮಾಧುರಿ ದೀಕ್ಷಿತ್ ಸೇರಿದಂತೆ ಬಹಳಷ್ಟು ಜನ ಸೆಲೆಬ್ರಿಟಿಗಳು ಮದುವೆಯಲ್ಲಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಇನ್ನು ಟಾಲಿವುಡ್ ನಟ ಮಹೇಶ್ ಬಾಬು ಅವರು ಪ್ರಸ್ತುತ ಎಸ್ ಎಸ್ ರಾಜಮೌಳಿ ಅವರ ಜೊತೆಗೆ ಸಿನಿಮಾ ಮಾಡುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ.

ಈ ಸಿನಿಮಾದ ಕುರಿತಾಗಿ ಆಗಾಗ ಹೊಸ ಅಪ್ಡೇಟ್ ಗಳು ಹೊರಬಂದು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕುತ್ತಿದೆ. ಈ ಸಿನಿಮಾಕ್ಕಾಗಿ ಮಹೇಶ್ ಬಾಬು ಅವರು ಹೊಸ ಹೇರ್ ಸ್ಟೈಲ್ ಅಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಪಾತ್ರಕ್ಕಾಗಿ ಅವರು ತಮ್ಮಲ್ಲಿ ಇನ್ನಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.‌

ಆದರೆ ಈಗ ಅನಂತ್ ಅಂಬಾನಿ ಮದುವೆ ಅಟೆಂಡ್ ಆಗೋದಕ್ಕೆ ಮಹೇಶ್ ಬಾಬು ಅವರು ರಾಜ ಮೌಳಿ ( S S Rajamouli) ವಿಧಿಸಿದ್ದ ಒಂದು ಕಂಡೀಶನ್ ಅನ್ನು ಬ್ರೇಕ್ ಮಾಡಿದ್ದಾರೆ ಎನ್ನಲಾಗಿದೆ. ಸಿನಿಮಾ ಆರಂಭಕ್ಕೂ ಮೊದಲೇ ರಾಜಮೌಳಿಯವರು ಈ ಕಂಡೀಶನ್ ಅನ್ನು ಹಾಕಿದ್ದರು ಅಂತ ಹೇಳಲಾಗಿದೆ.

ಈ ಸಿನಿಮಾದಲ್ಲಿ ಮಹೇಶ್ ಬಾಬು ಅವರ ಲುಕ್ ಹೇಗಿರಲಿದೆ ಅನ್ನೋದನ್ನ ಬಹಿರಂಗಪಡಿಸದಿರಲು ರಾಜಮೌಳಿ ನಿರ್ಧಾರ ಮಾಡಿದ್ದರು.‌ ಆದ್ದರಿಂದಲೇ ಮಹೇಶ್ ಬಾಬುಗೆ ಮಾದ್ಯಮಗಳಿಂದ ಆದಷ್ಟು ದೂರವಿರಲು ಸೂಚನೆಯನ್ನು ನೀಡಿದ್ದರುಮ. ಆದರೆ ಈಗ ಅಂಬಾನಿ ಮನೆ ಮದ್ವೆ ಕಾರಣದಿಂದ ಮಹೇಶ್ ಬಾಬು ಅವರ ಲುಕ್ ಎಲ್ಲರ ಮುಂದೆ ರಿವೀಲ್ ಆಗಿದೆ.

Leave a Comment