Rave Party : ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಂತಹ ರೇವ್ ಪಾರ್ಟಿ (Rave Party) ವಿಚಾರ ದೇಶದಾದ್ಯಂತ ಮಾದ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿದೆ. ಇದರಲ್ಲಿ ಟಾಲಿವುಡ್ ನ ನಟಿಯರು, ಮಾಡೆಲ್ ಗಳು ಮತ್ತು ಸೆಲೆಬ್ರಿಟಿಗಳು ಭಾಗಿಯಾಗಿದ್ದು, ಸಿಸಿಬಿ ಪೋಲಿಸರ ಧಾಳಿಯ ವೇಳೆಯಲ್ಲಿ ಮುಖ ಮುಚ್ಚಿಕೊಂಡು ಓಡುತ್ತಿದ್ದ ದೃಶ್ಯಗಳು ಮಾದ್ಯಮಗಳಲ್ಲಿ ವೈರಲ್ ಆಗಿದೆ. ಈ ಪಾರ್ಟಿಯ ವಿಚಾರವಾಗಿ ತೆಲುಗಿನ ಜನಪ್ರಿಯ ನಟಿ ಹೇಮ (Hema) ಅವರ ಹೆಸರು ಬಹಳ ಸದ್ದು, ಸುದ್ದಿಯನ್ನು ಮಾಡಿದೆ.
ಆದರೆ ತನ್ನ ಹೆಸರು ಬಂದ ಕೂಡಲೇ ವೀಡಿಯೋ ಒಂದನ್ನು ಮಾಡಿ ನನಗೂ ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಗೂ (Bengaluru Rave Party) ಸಂಬಂಧವೇ ಇಲ್ಲ. ನಾನು ಹೈದರಾಬಾದ್ ನಲ್ಲೇ ಒಂದು ಫಾರ್ಮ್ ಹೌಸ್ ನಲ್ಲಿ ಇದ್ದೀನಿ ಎಂದು ಹೇಳಿದ್ದರು. ಆದರೆ ಈ ವೀಡಿಯೋದಲ್ಲಿ ನಟಿ ಹೇಳಿದ್ದು ಸುಳ್ಳು ಎನ್ನುವುದಾಗಿ ಈಗ ಸುದ್ದಿಗಳಾಗಿದೆ. ಅಲ್ಲದೇ ಬೆಂಗಳೂರು ಪೊಲೀಸರು ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ನಟಿ ಹೇಮಾ ಪಾರ್ಟಿಯಲ್ಲಿ ಇದ್ದಿದ್ದು ಖಾತ್ರಿಯಾಗಿದೆ.
ಅಲ್ಲದೇ ತೆಲುಗು ಮಾದ್ಯಮಗಳು ಸಹಾ ನಟಿ ಹೇಳುತ್ತಿರುವುದು ಅಪ್ಪಟ ಸುಳ್ಳು. ನಟಿ ತಾನು ಯಾವ ಫಾರ್ಮ್ ಹೌಸ್ ನಲ್ಲಿ ಇದ್ದೀನಿ ಅಂತ ವೀಡಿಯೋ ಮಾಡಿದ್ದಾರೋ ಅದು ಬೆಂಗಳೂರಿನಲ್ಲಿ ರೇವ್ ಪಾರ್ಟಿ ನಡೆದ ಅದೇ ಫಾರ್ಮ್ ಹೌಸ್ ಎಂದಿದ್ದಾರೆ. ಪೊಲೀಸರು ಬಿಡುಗಡೆ ಮಾಡಿರೋ ವೀಡಿಯೋದಲ್ಲಿ ನಟಿ ಧರಿಸಿರುವ ಡ್ರೆಸ್ ಮತ್ತು ನಟಿ ತಾನು ಹೈದ್ರಾಬಾದ್ ನಲ್ಲಿ ಇದ್ದೀನಿ ಅಂತ ಹೇಳಿರೋ ವೀಡಿಯೋದಲ್ಲಿ ಇರೋ ಡ್ರೆಸ್ ಸೇಮ್ ಇದೆ.
ಇದನ್ನು ನೋಡಿದ ನೆಟ್ಟಿಗರು ಎರಡು ವೀಡಿಯೋಗಳಲ್ಲಿ ನಟಿ ಹೇಗೆ ಒಂದೇ ಡ್ರೆಸ್ ನಲ್ಲಿ ಕಾಣಿಸಿಕೊಳ್ಳೋಕೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ನಟಿ ತಾನು ಹೈದ್ರಾಬಾದ್ ನಲ್ಲಿ ಇದ್ದೀನಿ ಅಂತ ಮರಗಳ ಮುಂದೆ ನಿಂತು ವೀಡಿಯೋ ಮಾಡಿದ್ದಾರೆ ಹೊರತು ಆ ಫಾರ್ಮ್ ಹೌಸ್ ನ ಯಾವುದೇ ವಿವರ ನೀಡಿಲ್ಲ. ಇದನ್ನು ನೋಡಿ ರೇವ್ ಪಾರ್ಟಿ ನಡೆದ ಫಾರ್ಮ್ ಹೌಸ್ ನಲ್ಲೇ ಬೇರೆ ಕಡೆ ನಿಂತು ವೀಡಿಯೋ ಮಾಡಿದ್ದಾರೆ ಎನ್ನುವುದು ಪೊಲೀಸ್ ಮೂಲಗಳ ಮಾಹಿತಿಯಾಗಿದೆ.
ನಟಿಯು ಪೊಲೀಸರ ಕಸ್ಟಡಿಯಲ್ಲಿ ಇರುವಾಗಲೇ ಜನರ ದಾರಿ ತಪ್ಪಿಸುವ ಸಲುವಾಗಿ ಆತುರವಾಗಿ ಒಂದು ವೀಡಿಯೋ ಮಾಡಿ ಶೇರ್ ಮಾಡಿದ್ದಾರೆ. ಪೊಲೀಸರು ಅಲ್ಲಿದ್ದವರನ್ನು ಹೊರಗೆ ಕರೆದು ತರುವಾಗ ನಟಿ ಮುಖ ಮುಚ್ಚಿಕೊಂಡು ಹೊರಗೆ ಬಂದಿದ್ದಾರೆ ಎನ್ನುವ ವಿಷಯ ಸಹಾ ಸುದ್ದಿಯಾಗಿದೆ. ಒಟ್ಟಿನಲ್ಲಿ ನಟಿ ಹೇಮಾ ರೇವ್ ಪಾರ್ಟಿಯಲ್ಲಿ ತಾನಿರಲಿಲ್ಲ ಅಂತ ಸಾಬೀತು ಮಾಡೋಕೆ ಸುಳ್ಳು ಹೇಳಿದ್ದಾರೆನ್ನುವುದು ಈಗ ಚರ್ಚೆಗೆ ಕಾರಣವಾಗಿದೆ.