Kalki 2898 AD : 10 ವರ್ಷ ಫಿಕ್ಸ್, ಕಲ್ಕಿಯಲ್ಲಿ ಡಾರ್ಲಿಂಗ್ ಪ್ರಭಾಸ್ ಗೆ ರಾಜಮೌಳಿ ಸಾಥ್; ಸಿಕ್ಕಾಪಟ್ಟೆ ಥ್ರಿಲ್ಲಾದ ಫ್ಯಾನ್ಸ್

Written by Soma Shekar

Published on:

---Join Our Channel---

Kalki 2898 AD : ಬಹುನಿರೀಕ್ಷಿತ ಕಲ್ಕಿ 2898 AD (Kalki 2898 AD) ಸಿನಿಮಾ ನಿನ್ನೆ ಬಿಡುಗಡೆಯಾಗಿ ಬಹಳ ಉತ್ತಮವಾದ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ. ಸಲಾರ್ ನಂತರ ಪ್ರಭಾಸ್ (Prabhas) ಅಭಿನಯದ ಮತ್ತೊಂದು ಸಿನಿಮಾ ಗೆಲುವಿನ ಕಡೆಗೆ ಹೆಜ್ಜೆ ಹಾಕಿದೆ. ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿರುವ ಅಮಿತಾಬ್ ಬಚ್ಚನ್ (Amitabh Bachchan) ಹಾಗೂ ಕಮಲ ಹಾಸನ್ (Kamal Hassan) ಪಾತ್ರಗಳನ್ನು ನೋಡಿ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಪ್ರಭಾಸ್ ಮತ್ತು ಅಮಿತಾಬ್ ನಡುವಿನ ಆ್ಯಕ್ಷನ್ ದೃಶ್ಯಗಳು ಥ್ರಿಲ್ಲಿಂಗ್ ಅನುಭವವನ್ನು ನೀಡ್ತಿದೆ ಅನ್ನೋದು ಸಿನಿ ಪ್ರಿಯರ ಮಾತಾಗಿದೆ.

ಕಲ್ಕಿ ಸಿನಿಮಾದಲ್ಲಿ ಅಮಿತಾಬ್, ಕಮಲ ಹಾಸನ್ ರಂತಹ ದಿಗ್ಗಜ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರೆ ಅತಿಥಿ ಪಾತ್ರಗಳಲ್ಲಿ ನಟಿಸಿ ಅಚ್ಚರಿ ಮೂಡಿಸಿರುವ ಸ್ಟಾರ್ ಗಳ ಒಂದು ದಂಡೇ ಇದೆ ಎನ್ನುವುದು ಸಹಾ ವಾಸ್ತವದ ವಿಚಾರವಾಗಿದೆ. ಅತಿಥಿ ಪಾತ್ರಗಳ ನಟ, ನಟಿಯರ ಕುರಿತಾಗಿ ಸಿನಿಮಾ ಬಿಡುಗಡೆವರೆಗೂ ಎಲ್ಲೂ ಅಲ್ಪ ಸ್ವಲ್ಪ ಮಾಹಿತಿಯು ಕೂಡಾ ಹೊರ ಬಂದಿರಲಿಲ್ಲ.

ವಿಶೇಷ ಏನೆಂದರೆ ಸ್ಟಾರ್ ನಿರ್ದೇಶಕ ರಾಜಮೌಳಿ (Rajamouli) ಸಹಾ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿರುವುದಾಗಿದೆ. ಸಿನಿಮಾದ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಜಮೌಳಿ ಸಿನಿ ಪ್ರೇಮಿಗಳಿಗೆ ಭರ್ಜರಿ ಕಿಕ್ ನೀಡಿದ್ದಾರೆ. ಸಿನಿಮಾದಲ್ಲಿ ಪ್ರಭಾಸ್ ಮತ್ತು ರಾಜಮೌಳಿ ನಡುವಿನ ಡೈಲಾರ್ ಬಹಳ ಫನ್ನಿಯಾಗಿದ್ದು, ಅಭಿಮಾನಿಗಳಿಗೆ ಮಾತ್ರ ಇದು ಸಖತ್ ಖುಷಿಯನ್ನು ನೀಡಿದೆ.

ನೆಕ್ಸ್ಟ್ ನನ್ನ ಕೈಗೆ ಸಿಕ್ರೆ ಹತ್ತು ವರ್ಷ ಫಿಕ್ಸ್ ಎಂದು ರಾಜಮೌಳಿ ಹೇಳೋ ಡೈಲಾಗ್ ಗೆ ಪ್ರೇಕ್ಷಕರು ಶಿಳ್ಳೆ ಹೊಡೆದಿದ್ದಾರೆ. ರಾಜಮೌಳಿ ಅವರು ಸಿನಿಮಾ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾ, ಲವ್ಡ್ ದಿ ವರ್ಲ್ಡ್ ಬಿಲ್ಡಿಂಗ್, ಇದು ತನ್ನ ಅದ್ಭುತ ಸೆಟ್ಟಿಂಗ್ ಗಳೊಂದಿಗೆ ನನ್ನನ್ನ ವಿವಿಧ ಕ್ಷೇತ್ರಗಳಿಗೆ ಕರೆದುಕೊಂಡು ಹೋಗಿದೆ. ಡಾರ್ಲಿಂಗ್ ಅಭಿನಯ ಸೂಪರ್ ಆಗಿದೆ. ಅಮಿತಾಬ್, ಕಮಲ ಹಾಸನ್ ಮತ್ತು ದೀಪಿಕಾ ಅವರಿಂದ ಉತ್ತಮ ಬೆಂಬಲ ದೊರೆತಿದೆ.

ಚಿತ್ರದ ಕೊನೆಯ ಮೂವತ್ತು ನಿಮಿಷಗಳು ನನ್ನನ್ನ ಹೊಸದೊಂದು ಲೋಕಕ್ಕೆ ಕರೆದುಕೊಂಡು ಹೋಗಿದೆ. ಅದನ್ನು ತೆರೆಯ ಮೇಲೆ ತರುವುದಕ್ಕೆ ಸಾಟಿಯಿಲ್ಲದ ಪ್ರಯತ್ನಗಳಿಂದಾಗಿ ನಾನು ಇಡೀ ವೈಜಯಂತಿ ತಂಡಕ್ಕೆ ಅಭಿನಂದನೆಗಳನ್ನು ತಿಳಿಸುತ್ತೇನೆಂದು ಹೇಳಿದ್ದಾರೆ. ರಾಜಮೌಳಿ ಅವರು ಸಿನಿಮಾದಲ್ಲಿ ನಟಿಸಿರುವ ವಿಚಾರ ಸಿನಿ ಪ್ರೇಮಿಗಳಿಗಂತೂ ಅಚ್ಚರಿಯನ್ನು ಮೂಡಿಸಿದೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

Leave a Comment