Rashmika Mandanna: ಹೊಸ ಸುದ್ದಿ ಕೇಳಿ ಹುಚ್ಚೆದ್ದು ಕುಣಿದ ರಶ್ಮಿಕಾ ಫ್ಯಾನ್ಸ್, ಹಾಗಿದ್ರೆ ಇದೇ ನಿಜಾನ?

Written by Soma Shekar

Published on:

---Join Our Channel---

Rashmika Mandanna: ರಶ್ಮಿಕಾ ಮಂದಣ್ಣ (Rashmika Mandanna) ಸದ್ಯಕ್ಕೆ ಟಾಲಿವುಡ್ ನಿಂದ ಬಾಲಿವುಡ್ ವರೆಗೂ ಸಿಕ್ಕಾಪಟ್ಟೆ ಬೇಡಿಕೆಯನ್ನು ಸೃಷ್ಟಿಸಿಕೊಂಡಿರುವ ನಟಿಯಾಗಿದ್ದಾರೆ.‌ ತಾನು ನಟಿಸುವ ಬಹುತೇಕ ಸಿನಿಮಾಗಳೆಲ್ಲಾ ಬ್ಲಾಕ್ ಬಸ್ಟರ್ ಆಗುತ್ತಿದ್ದು, ನಿರ್ಮಾಪಕರು ಮತ್ತು ನಿರ್ದೇಶಕರ ಮೊದಲ ಆಯ್ಕೆ ರಶ್ಮಿಕಾ ಆಡುತ್ತಿದ್ದಾರೆ. ಬಾಲಿವುಡ್ ನಲ್ಲಿ (Bollywood) ಮೊದಲ ಎರಡು ಸಿನಿಮಾಗಳು ಸಕ್ಸಸ್ ಪಡೆಯದೇ ಹೋದರೂ ಇತ್ತೀಚಿಗೆ ನಟಿಸಿದ ಅನಿಮಲ್ (Animal) ಸಿನಿಮಾ ಬ್ಲಾಕ್ ಬಸ್ಟರ್ ಸಿನಿಮಾಗಳ ಸಾಲಿಗೆ ಸೇರಿದ್ದು, ಬಾಲಿವುಡ್ ನಲ್ಲೂ ಈಗ ರಶ್ಮಿಕಾ ಹವಾ ಸೃಷ್ಟಿಸಿಕೊಂಡಿದ್ದಾರೆ.

ಈಗ ನಟಿಯ ಅಭಿಮಾನಿಗಳು ಥ್ರಿಲ್ ಆಗುವಂತಹ ಹೊಸ ಸುದ್ದಿಯೊಂದು ಹೊರ ಬಂದಿದೆ. ಏನದು ಥ್ರಿಲ್ಲಿಂಗ್ ಸುದ್ದಿ ಅನ್ನೋದಾದ್ರೆ ರಶ್ಮಿಕಾ ಮಂದಣ್ಣ ಬಾಲಿವುಡ್ ನ ಹೊಸ ಸಿನಿಮಾವೊಂದರಲ್ಲಿ ಸ್ಟಾರ್ ನಟ ಸಲ್ಮಾನ್ ಖಾನ್ ಗೆ ಜೋಡಿಯಾಗಿ ತೆರೆಯನ್ನು ಹಂಚಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಅನಿಮಲ್ ನಂತರ ನಟಿ ದೊಡ್ಡ ಸ್ಟಾರ್ ಜೊತೆಗೆ ನಾಯಕಿಯಾಗುವ ಅವಕಾಶವನ್ನು ಪಡೆದುಕೊಂಡಿದ್ದಾರೆ.

ತಮಿಳಿನ ಜನಪ್ರಿಯ ನಿರ್ದೇಶಕ ಎ. ಮುರುಗದಾಸ್ (A. Muruga Das) ಅವರ ಮುಂದಿನ ಸಿನಿಮಾದಲ್ಲಿ ಸಲ್ಮಾನ್ ಖಾನ್ (Salman Khan) ನಾಯನಾಗಿದ್ದಾರೆ. ಸಾಜಿದ್ ನಾಡಿಯಾವಾಲಾ ನಿರ್ಮಾಣದ ಈ ಸಿನಿಮಾವನ್ನು ಬಾರೀ ಬಜೆಟ್ ನಲ್ಲಿ ನಿರ್ಮಾಣವನ್ನು ಮಾಡಲಾಗುತ್ತಿದ್ದು, ಇದರಲ್ಲಿ ನಾಯಕಿಯಾಗಿ ರಶ್ಮಿಕಾ ಇರಲಿದ್ದಾರೆಂದು ರಮೇಶ್ ಬಾಬಾ ಟ್ವೀಟ್ ಮಾಡಿದ್ದು, ಇದು ವೈರಲ್ ಆಗಿದೆ.

ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಇತ್ತೀಚಿಗೆ ನಟಿಸಿದ ಸಿನಿಮಾಗಳು ಅಷ್ಟಾಗಿ ಗೆಲುವನ್ನು ಕಂಡಿಲ್ಲ. ಶಾರೂಖ್ ಖಾನ್ ಆ್ಯಟ್ಲಿ ಜೊತೆ ಕೈಜೋಡಿಸಿ ಜವಾನ್ ನಂತಹ ದೊಡ್ಡ ಹಿಟ್ ಕೊಟ್ಟರೆ, ರಣಬೀರ್ ಕಪೂರ್ ಸಂದೀಪ್ ರೆಡ್ಡಿ ವಂಗಾ ಜೊತೆಗೆ ಅನಿಮಲ್ ನಂತಹ ಹಿಟ್ ಸಿನಿಮಾವನ್ನು ನೀಡಿದ್ದಾರೆ. ಈಗ ಸಲ್ಮಾನ್ ಸಹಾ ದಕ್ಷಿಣದ ನಿರ್ದೇಶಕರ ಕಡೆಗೆ ಗಮನವನ್ನು ನೀಡಿದ್ದಾರೆ.

ಪೊನ್ನಿಯನ್ ಸೆಲ್ವನ್ ಸಿನಿಮಾದ ನಂತರ ತ್ರಿಶಾ ಅವರ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆಗಳು ಹರಿದು ಬಂದಿತ್ತು. ಅದರ ಬೆನ್ನಲ್ಲೇ ಸಲ್ಮಾನ್ ಖಾನ್ ಅವರ ಸಿನಿಮಾದಲ್ಲಿ ತ್ರಿಶಾ ನಾಯಕಿ ಎನ್ನುವ ಸುದ್ದಿಗಳಾಗಿತ್ತು. ಆದರೆ ಈಗ ತ್ರಿಶಾ ಬದಲಾಗಿ ರಶ್ಮಿಕಾ ನಾಯಕಿ ಎನ್ನಲಾಗಿದ್ದು, ಬಾಲಿವುಡ್ ಸಿನಿಮಾಗಳ ಎಕ್ಸ್ ಪರ್ಟ್ ತರಣ್ ಆದರ್ಶ್ ಅವರ ಪೋಸ್ಟ್ ನಲ್ಲೂ ಸಹಾ ರಶ್ಮಿಕಾ ಹೆಸರೇ ಕೇಳಿ ಬಂದಿದೆ.

Leave a Comment