Sonu Gowda: ರೇಣುಕಾಸ್ವಾಮಿ ನಂಗೂ ಕೆಟ್ಟ ಮೆಸೆಜ್ ಮಾಡಿದ್ದ, ಸೋನು ಗೌಡ್ ಶಾಕಿಂಗ್ ಹೇಳಿಕೆ

Written by Soma Shekar

Published on:

---Join Our Channel---

Sonu Gowda: ಬಿಗ್ ಬಾಸ್ (Bigg Boss) ಖ್ಯಾತಿಯ ಬಾಡಿ ಬಿಲ್ಡರ್ ಚಿತ್ರಾಲ್ ರಂಗಸ್ವಾಮಿ (Chitral Rangaswamy) ಅವರು ಕೊ ಲೆ ಯಾಗಿರುವ ರೇಣುಕಾ ಸ್ವಾಮಿ (Renuka Swamy) ತನ್ನ ಫೇಕ್ ಅಕೌಂಟ್ ಬಿಂದ ನನಗೂ ಕೆಟ್ಟ ಮೆಸೆಜ್ ಗಳನ್ನು ಮಾಡಿದ್ದ, ಆತನ ಅಕೌಂಟ್ ಬ್ಲಾಕ್ ಲಿಸ್ಟ್ ನಲ್ಲಿದೆ ಎಂದು ಫೋಟೋ ಶೇರ್ ಮಾಡಿಕೊಂಡಿದ್ದು ಅದು ಎಲ್ಲೆಡೆ ವೈರಲ್ ಆಗುವಾಗಲೇ ಸೋಶಿಯಲ್ ಮೀಡಿಯಾ ಸ್ಟಾರ್ ಅಂತ ಕರೆಸಿಕೊಂಡಿದೋ ಸೋನು ಗೌಡ ಈಗ ಮತ್ತೊಂದು ಹೊಸ ವಿಚಾರವನ್ನು ಹಂಚಿಕೊಂಡು ಶಾ ಕ್ ಕೊಟ್ಟಿದ್ದಾರೆ.

ನಟ ದರ್ಶನ್ ಮತ್ತು ಗ್ಯಾಂಗ್ ನಿಂದ ಕೊ ಲೆ ಯಾಗಿದೆ ಎನ್ನಲಾದ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟನ ಸಹಿತ ಒಂದಷ್ಟು ಜನ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.‌ ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಕೆಟ್ಟದಾಗಿ ಮೆಸೆಜ್ ಮಾಡಿದ್ದ ಎನ್ನುವ ಕಾರಣಕ್ಕೆ ಇಷ್ಟೆಲ್ಲಾ ನಡೆದಿತ್ತು ಎನ್ನುವುದು ಪೋಲಿಸರು ತಿಳಿಸಿರುವ ವಿಚಾರವಾಗಿದೆ. ಈಗ ರೇಣುಕಾ ಸ್ವಾಮಿ ನನಗೂ ಕೆಟ್ಟದಾಗಿ ಮೆಸೆಜ್ ಮಾಡಿದ್ದ ಅಂತ ಬಿಗ್ ಬಾಸ್ ಖ್ಯಾತಿಯ ಸೋನು ಗೌಡ (Sonu Gowda) ಕೂಡಾ ಹೇಳಿಕೊಂಡಿದ್ದಾರೆ.

ಯೂಟ್ಯೂಬ್ ನಲ್ಲಿ ನಾನೊಂದು ವೀಡಿಯೋ ನೋಡಿದೆ. ಅದರಲ್ಲಿ ಒಂದು ಅಕೌಂಟ್ ನಿಂದ ಸಾಕಷ್ಟು ಹುಡುಗಿಯರಿಗೆ ಕೆಟ್ಟ ಕೆಟ್ಟದಾಗಿ ಮೆಸಜ್ ಮಾಡಿದ್ದ. ನಾನು ನನ್ನ ಫೋನ್ ಚೆಕ್ ಮಾಡಿದೆ. ಆಗ ಆಯಪ್ಪ ನನಗೂ ಮೆಸೆಜ್ ಮಾಡಿದ್ದಾರೆ. ಆತ ತಪ್ಪು ಮಾಡಿದ್ದಾನೆ ಅಂತ ನಾನು ಅವರ ಕುಟುಂಬಕ್ಕೆ ಹೇಳ್ತಾ ಇಲ್ಲ.‌ ನನಗೂ ಕೆಟ್ಟದಾಗಿ ಕಾಮೆಂಟ್ ಅನ್ನು ಮಾಡುತ್ತಾರೆ.

ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ‌ಕಾಮೆಂಟ್ ಮಾಡಿದರೆ ನೀವು ಸುಮ್ಮನೆ ಇರ್ತೀರಾ? ಅವರು ಕೂಡಾ ಒಳ್ಳೆಯವರಾಗಿದ್ದರೆ ದೇವರು ಅವರನ್ನು ಚೆನ್ನಾಗಿ ಇಡ್ತಾರೆ ಎನ್ನುವ ಮಾತುಗಳನ್ನು ಸೋನು ಗೌಡ ಹೇಳಿದ್ದಾರೆ. ಚಿತ್ರಾಲ್ ರಂಗಸ್ವಾಮಿ ನಂತರ ಈಗ ಸೋನು ರೇಣುಕಾ ಸ್ವಾಮಿ ಬಗ್ಗೆ ಹೇಳಿದ್ದಾರೆ. ಇನ್ನು ಯಾರಾದ್ರೂ ಈ ಬಗ್ಗೆ ಹೇಳ್ತಾರಾ, ಇನ್ನೂ ಏನೆಲ್ಲಾ ವಿಷಯಗಳು ಹೊರಗೆ ಬರುತ್ತೋ ಸದ್ಯಕ್ಕೆ ಹೇಳೋದು ಸಾಧ್ಯವಿಲ್ಲ.

Leave a Comment