Prabhas: ಅವರಿಬ್ಬರು ಸಲಿಂಗಕಾಮಿಗಳು, ಲಂಡನ್ ನಲ್ಲಿ ನನ್ನ ಗಂಡನ ಜೊತೆ, ಸುಚಿತ್ರಾ ಶಾಕಿಂಗ್ ಹೇಳಿಕೆ

Written by Soma Shekar

Published on:

---Join Our Channel---

Suchithra : ಗಾಯಕಿ ಸುಚಿತ್ರಾ ರಾಮದುರೈ (Suchithra) ಅವರು ಮೊನ್ನೆ ಮೊನ್ನೆಯಷ್ಟೇ ತಮ್ಮ ಮಾಜಿ ಪತಿ ತಮಿಳು ನಟ ಕಾರ್ತಿಕ್ ಕುಮಾರ್ ಅವರನ್ನು ಸಲಿಂಗಕಾಮಿ ಎಂದು ಕರೆದಿದ್ದರು ಹಾಗೂ ಸ್ಟಾರ್ ನಟ ಧನುಷ್ ಮತ್ತು ನನ್ನ ಗಂಡ ಒಂದೇ ರೂಮ್ ನಲ್ಲಿ ಇರ್ತಾ ಇದ್ರು ಏನ್ಮಾಡ್ತಿದ್ರೋ ಗೊತ್ತಿಲ್ಲ ಅನ್ನೋ ಮಾತನ್ನ ಸಹಾ ಹೇಳಿದ್ದರು. ಈ ವಿಚಾರ ದೊಡ್ಡ ಸಂಚಲನವನ್ನೇ ಸೃಷ್ಟಿಸಿ, ಬಹಳ ಚರ್ಚೆಗಳನ್ನು ಹುಟ್ಟು ಹಾಕಿರುವಾಗಲೇ ಸುಚಿತ್ರ ಮತ್ತೊಂದು ಬಾಂ ಬ್ ಸಿಡಿಸಿದ್ದಾರೆ.

ಈಗ ಸುಚಿತ್ರಾ ಅವರು ತಮ್ಮ ಪತಿಯ ಜೊತೆಗೆ ಬಾಲಿವುಡ್ ನ ಸ್ಟಾರ್ ನಟ ಶಾರೂಖ್ ಖಾನ್ (Shah Rukh Khan) ಮತ್ತು ನಿರ್ಮಾಪಕ ಕರಣ್ ಜೋಹರ್ (Karan Johar) ಅವರನ್ನು ಸಲಿಂಗಕಾಮಿಗಳೆಂದು ಕರೆಯುವ ಮೂಲಕ ಮತ್ತೊಮ್ಮೆ ಮಾದ್ಯಮಗಳ ಪ್ರಮುಖ ಸುದ್ದಿಯಾಗಿದ್ದಾರೆ. ಸಂದರ್ಶನವೊಂದರಲ್ಲಿ ಬಾಲಿವುಡ್ ನ ದೊಡ್ಡ ಸೆಲೆಬ್ರಿಟಿಗಳ ಬಗ್ಗೆಯೇ ಶಾಕಿಂಗ್ ಹೇಳಿಕೆಗಳನ್ನು ನೀಡುವ ಮೂಲಕ ಸುಚಿತ್ರ ಈಗ ಎಲ್ಲರ ಗಮನವನ್ನು ಸೆಳೆದಿದ್ದಾರೆ.

ನನ್ನ ಗಂಡ ಕಾರ್ತಿಕ್ ಲಂಡನ್ ನಲ್ಲಿ ಶಾರೂಖ್ ಮತ್ತು ಕರಣ್ ಜೋಹರ್ ನ ಭೇಟಿಯಾಗಿದ್ದರು. ಅಲ್ಲಿ ಅವರು ತುಂಡು ಬಟ್ಟೆಗಳನ್ನ ತೊಟ್ಟು, ಕ್ರಾಸ್ ಡ್ರೆಸಿಂಗ್ ಗಳನ್ನ ಮಾಡ್ಕೊಂಡು ಓಡಾಡೋದು ಸಾಮಾನ್ಯ. ಬಾಲಿವುಡ್ ನ ಈ ಬಿಗ್ ಸೆಲೆಬ್ರಿಟಿಗಳು ಸಲಿಂಗಕಾಮ ಕಾನೂನು ಬದ್ಧ ಇರೋ ದೇಶಗಳಿಗೆ ಹೋಗಿ ಎಂಜಾಯ್ ಮಾಡ್ತಾರೆ.

ಶಾರೂಖ್ ಖಾನ್ ಮತ್ತು ಕರಣ್ ಜೋಹರ್ ಕೂಡಾ ಆ ದೇಶಗಳಿಗೆ ಹೋದಾಗ ಅಂತಹ ಡ್ರೆಸ್ಸಿಂಗ್ ಗಳನ್ನು ತೊಟ್ಟು ಸಲಿಂಗಕಾಮಿಗಳು ಇರುವಂತಹ ಸ್ಥಳಗಳಲ್ಲಿ ಓಡಾಡೋಕೆ ಹೋಗ್ತಾರೆ, ಅಲ್ಲಿ ರಾತ್ರಿಗಳಲ್ಲಿ ಮಂಚ ವನ್ನು ಹಂಚಿಕೊಂಡು ಸುಖ ಪಡ್ತಾರೆ ಎಂದು ಹೇಳುವ ಮೂಲಕ ಸುಚಿತ್ರ ಅವರು ದೊಡ್ಡ ಸಂಚಲನವನ್ನು ಸೃಷ್ಟಿಸಿದ್ದಾರೆ.

Leave a Comment