Shravani Subramanya: ಸುಬ್ಬು ವಿಚಾರದಲ್ಲಿ ಮತ್ತೆ ಮದನ್ ಹುಚ್ಚಾಟ, ಆಕ್ರೋಶದಿಂದ ಗುಡುಗಿದ ವೀರೇಂದ್ರ

Written by Soma Shekar

Published on:

---Join Our Channel---

Shravani Subramanya: ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಸೀರಿಯಲ್ ಆರಂಭವಾಗಿ ಕೆಲವೇ ದಿನಗಳಾಗಿದ್ದರೂ ಸಹಾ ಈಗಾಗಲೇ ಪ್ರೇಕ್ಷಕರ ಮನಸ್ಸನ್ನು ಗೆದ್ದು ಟಾಪ್ ಐದು ಸೀರಿಯಲ್ ಗಳಲ್ಲಿ (Kannada Serial) ಸ್ಥಾನವನ್ನು ಪಡೆದುಕೊಂಡಿದೆ. ತನ್ನ ಕೆಲಸದ ಬಗ್ಗೆ ಸ್ವಾಮಿ ನಿಷ್ಠೆಯಿಂದ ಕೆಲಸ ಮಾಡುತ್ತಾ ಕುಟುಂಬದ ಜವಾಬ್ದಾರಿ ಹೊತ್ತ ಸುಬ್ಬು ಮತ್ತು ಅಪ್ಪನ ಪ್ರೀತಿ ಮತ್ತು ವಾತ್ಸಲ್ಯ ಬಯಸುವ ಶ್ರಾವಣಿ ಕಥೆಯು ಪ್ರೇಕ್ಷಕರ ವಿಶೇಷ ಗಮನವನ್ನು ಸೆಳೆದಿದೆ. ಶ್ರಾವಣಿಯನ್ನ ಕಂಡರೆ ಆಗದ ಮಿನಿಸ್ಟರ್ ವೀರೇಂದ್ರ ಶ್ರಾವಣಿ ಮಾತಿಂದ ಇಂಪ್ರೆಸ್ ಆಗಿದ್ದಾರೆ.

ತನ್ನ ಕಂಪನಿ, ಫ್ಯಾಕ್ಟರಿ ಮತ್ತು ಮನೆ ಕೆಲಸದವರಿಗೆ ಬೋನಸ್ ಕೊಟ್ಟಿರೋ ವೀರೇಂದ್ರ ಸುಬ್ಬುಗೆ ಒಂದು ಲಕ್ಷ ರೂ. ಉಡುಗೊರೆ ಕೊಡಬೇಕಂತ ನಿರ್ಧಾರ ಮಾಡಿ ಅಕ್ಕ ವಿಜಯಾಂಬಿಕೆಗೆ ಸುಬ್ಬುಗೆ ಒಂದು ಲಕ್ಷ ಕೊಡೋಕೆ ಹೇಳಿದ್ದಾರೆ. ಆದರೆ ವಿಜಯಾಂಬಿಕೆ ತಲೆ ಕೆಡಿಸಿದ ಮಗ ಮದನ್ ಮನೆ ಕಾಯೋ ನಾಯಿಗಳಿಗೆಲ್ಲಾ ಒಂದು ಲಕ್ಷ ಕೊಡೋಕೆ ಆಗುತ್ತಾ? ಐವತ್ತು ಸಾವಿರ ಸಾಕು ಅಂತ ಹೇಳಿದ್ದಾನೆ.

ನಂತರ ಹಣದ ಕವರ್ ನ ಸುಬ್ಬು ಕೈಗೆ ಕೊಟ್ಟ ವೀರೇಂದ್ರ ಎಣಿಸಿಕೋ ಎಂದಿದ್ದು, ಈ ಮಾತು ಕೇಳಿ ವಿಜಯಾಂಬಿಕಾ, ಮದನ್ ಶಾಕ್ ಆಗಿದ್ದಾರೆ. ಸುಬ್ಬ ದೇವರ ಪ್ರಸಾದ ಸಿಕ್ಕಾಗ ಅದನ್ನ ನೋಡಬಾರದು ಅಂದಿದ್ದಾನೆ. ಶ್ರಾವಣಿ ಕೂಡಾ ಎಣಿಸಿಕೋ ಎಂದಿದ್ದು, ಸುಬ್ಬು ಹಣ ಲೆಕ್ಕ ಹಾಕುತ್ತಿದ್ರೆ ವಿಜಯಾಂಬಿಕಾ ಮತ್ತು ಮ್ಯಾಡಿ ಎದೆಯಲ್ಲಿ ಡವ ಡವ ಹೆಚ್ಚಾಗಿದೆ. ಸುಬ್ಬು ಎಣಿಸಿ 50 ಸಾವಿರ ಇದೆ ಅಂತ ಅಚ್ಚರಿಯಿಂದ ಹೇಳಿದ್ದಾನೆ.

ಅದನ್ನ ಕೇಳಿ ಸಿಟ್ಟಾದ ವೀರೇಂದ್ರ ಸಿಟ್ಟಿನಿಂದ ಅಕ್ಕನನ್ನ ನಾನು ಹೇಳಿದ್ದು ಒಂದು ಲಕ್ಷ ತಾನೇ ಅಂತ ಕೇಳಿದ್ದು, ವಿಜಯಾಂಬಿಕಾ ಮಗ ಮದನ್ ನ ಪ್ರಶ್ನೆ ಮಾಡಿದ್ದಾಳೆ. ಸಿಕ್ಕಾಪಟ್ಟೆ ಕೋಪಗೊಂಡ ವೀರೇಂದ್ರ ಸುಬ್ಬು ವಿಷಯದಲ್ಲಿ ಯಾವುದೇ ತಪ್ಪು ನಡೀಬಾರದು, ಮಿಸ್ ಆಗಿ ಕೂಡಾ ಎಂದು ಅರಚಿದ್ದಾನೆ. ಮದನ್ ಮಾಡಿದ ತಪ್ಪಿಗೆ ವೀರೇಂದ್ರ ಎಚ್ಚರಿಕೆ ಕೊಡ್ತಾರಾ? ಕಾದು ನೋಡಬೇಕಾಗಿದೆ.

Leave a Comment