Shobhita Dulipala: ಸುತ್ತಿ ಸಂಸಾರ ಹಾಳು ಮಾಡ್ದೇ ಕೆರಿಯರ್ ಚಿಂತೆ ಮಾಡು; ನಾಗಚೈತನ್ಯ ಗರ್ಲ್ ಫ್ರೆಂಡ್ ಮೇಲೆ ನೆಟ್ಟಿಗರ ಸಿಟ್ಟು

Written by Soma Shekar

Published on:

---Join Our Channel---

Shobhita Dhulipala: ಸಮಂತಾ (Samantha) ಜೊತೆಗೆ ವಿಚ್ಚೇದನದ ನಂತರ ನಾಗಚೈತನ್ಯ (NagaChaitanya) ಹೆಸರು ಕೆಲವು ನಟಿಯರ ಜೊತೆಗೆ ತಳಕು ಹಾಕಿಕೊಂಡಿತ್ತು. ಅದರಲ್ಲಿ ಹೆಚ್ಚು ಸುದ್ದಿಯಾಗಿರೋದು ಮಾತ್ರ ಶೋಭಿತಾ ಧೂಳಿಪಾಲ (Shobhita Dulipala). ಈ ನಟಿಯ ಬಾಯ್ ಫ್ರೆಂಡ್ ನಾಗಚೈತನ್ಯ ಎನ್ನುವಂತೆ ಸುದ್ದಿಗಳು ಹರಿದಾಡಿದೆ. ನಾಗಚೈತನ್ಯ ಮತ್ತು ಶೋಭಿತಾ ಅಧಿಕೃತವಾಗಿ ತಮ್ಮ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲವಾದರೂ ಈ ಬಾರಿ ಇಬ್ಬರೂ ಯೂರೋಪ್ ನಲ್ಲಿ (Europe) ಜೊತೆಯಾಗಿ ವೆಕೇಷನ್ ಎಂಜಾಯ್ ಮಾಡಿದ್ದಾರೆ.‌

ಹಿಂದೊಮ್ಮೆ ವಿದೇಶ ಪ್ರವಾಸದ ವೇಳೆ ಇವರಿಬ್ಬರ ಫೋಟೋ ಹೊರ ಬಂದಿತ್ತು. ಕೆಲವೇ ದಿನಗಳ ಹಿಂದೆ ಜಂಗಲ್ ಸಫಾರಿ ಮಾಡಿದ ಫೋಟೋಗಳು ವೈರಲ್ ಆಗಿದ್ದವು. ಅವೆಲ್ಲವುಗಳ ಬೆನ್ನಲ್ಲೇ ಈಗ ಯೂರೋಪ್ ಟ್ರಿಪ್ ಮಾಡಿದ್ದು ಇದನ್ನೆಲ್ಲಾ ನೋಡಿದ ನೆಟ್ಟಿಗರು ಹೊಸ ನಟಿಯರು ಸಿನಿಮಾ ರಂಗದಲ್ಲಿ ಸ್ಥಾನ ಪಡೆಯೋದಕ್ಕೆ ಶ್ರಮ ಪಡ್ತಾರೆ ಆದರೆ ನೀವು ಸುತ್ತೋಡೋದ್ರಲ್ಲಿ ಬ್ಯುಸಿ ಎಂದು ಕಾಮೆಂಟ್ ಮಾಡಿದ್ದಾರೆ.

ನಾಗಚೈತನ್ಯ ಮತ್ತು ಸಮಂತಾ ಸಂಸಾರ ಒಡೆಯಲು ಈ ನಟಿಯೇ ಕಾರಣ ಎಂದು ಕೆಲವರು ಟೀಕೆ ಮಾಡಿದ್ದು, ಅವರ ವಿಚ್ಚೇದನ ಆದ ಮೇಲೆ ಶೋಭಿತಾ ನಾಗಚೈತನ್ಯ ಜೊತೆ ಕಾಣಿಸಿಕೊಳ್ಳೋದು ನೋಡಿ ಅನೇಕರಿಗೆ ಅನುಮಾನವನ್ನು ಮೂಡಿಸಿದೆ. ಒಬ್ಬ ಸಹ ನಟಿಯ ಸಂಸಾರವನ್ನು ಒಡೆದವಳು ಶೋಭಿತಾ ಧೂಳಿಪಾಲ ಎಂದು ಕೆಲವರು ತಮ್ಮ ಸಿಟ್ಟು ವ್ಯಕ್ತಪಡಿಸಿದ್ದಾರೆ. ‌

ಮತ್ತೆ ಕೆಲವರು ಹೀಗೆ ಸುತ್ತಾಡೋದು ಬಿಟ್ಟು ಕೆರಿಯರ್ ಕಡೆಗೆ ಗಮನ ನೀಡಿ ಎಂದು ಸಲಹೆಗಳನ್ನು ನೀಡುತ್ತಿದ್ದಾರೆ. ಶೋಭಿತಾ ಮತ್ತು ನಾಗಚೈತನ್ಯ ಹೆಸರು ಕಳೆದೊಂದು ವರ್ಷದಿಂದಲೂ ಹೆಚ್ಚಾಗಿ ಕೇಳಲು ಶುರುವಾಗಿದೆ. ಯೂರೋಪ್ ನಲ್ಲಿ ನಾಗಚೈತನ್ಯ ಮತ್ತು ಶೋಭಿತಾ ವೈನ್ ಎಂಜಾಯ್ ಮಾಡ್ತಿರೋ ಫೋಟೋ ಎಲ್ಲರ ಗಮನವನ್ನು ಸೆಳೆದಿದ್ದು, ನಟಿಯನ್ನು ಟ್ರೋಲ್ ಮಾಡಲಾಗುತ್ತಿದೆ.

Leave a Comment