SeethaRama: ರೀಲ್ ಜೋಡಿಯ ರಿಯಲ್ ಮದುವೆ ಬಗ್ಗೆ ಶುರುವಾಯ್ತು ಚರ್ಚೆ; ನಮಗೆ ಖುಷಿ ಎಂದ ಫ್ಯಾನ್ಸ್

Written by Soma Shekar

Published on:

---Join Our Channel---

SeethaRama : ಜೀ ಕನ್ನಡ ವಾಹಿನಿಯ ಜನಪ್ರಿಯ ಸೀರಿಯಲ್ ಗಳಲ್ಲಿ ಸೀತಾ ರಾಮ (SeethaRama) ಸೀರಿಯಲ್ ಸಹಾ ಒಂದಾಗಿದ್ದು, ಈಗಾಗಲೇ ಅಪಾರ ಜನಪ್ರಿಯತೆಯನ್ನು ಮತ್ತು ಜನಮೆಚ್ಚುಗೆಯನ್ನು ಪಡೆದುಕೊಂಡಿರುವ ಸೀರಿಯಲ್ ಆಗಿದೆ. ಧಾರಾವಾಹಿಯಲ್ಲಿ ಈಗ ನಾಯಕ ರಾಮ್ ಮತ್ತು ನಾಯಕಿ ಸೀತಾ ಮದುವೆಯ ಮಾತುಕತೆ ನಡೆಯುತ್ತಿದ್ದು, ಸೀರಿಯಲ್ ನಲ್ಲಿ ಹೊಸ ಹೊಸ ತಿರುವುಗಳು ಇನ್ನಷ್ಟು ಆಸಕ್ತಿಯನ್ನು ಮೂಡಿಸಿದೆ.

ಈಗ ಇವೆಲ್ಲವುಗಳ ನಡುವೆಯೇ ಸೋಶಿಯಲ್ ಮೀಡಿಯಾ ದಲ್ಲಿ ಒಂದು ಹೊಸ ಚರ್ಚೆ ಶುರುವಾಗಿದೆ. ಸೀತಾ ರಾಮ ಇಬ್ಬರೂ ರೀಲ್ ಲೈಫ್ ನಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಸಹಾ ಜೋಡಿಯಾದ್ರೆ ತುಂಬಾ ಚೆನ್ನಾಗಿರುತ್ತೆ ಎಂದು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ರಿಯಲ್ ಲೈಫ್ ನಲ್ಲಿ ಇವರು ಜೋಡಿಯಾದ್ರೆ ಕ್ಯೂಟ್ ಜೋಡಿಯಾಗ್ತರೆ ಅಂತಿದ್ದಾರೆ ಅಭಿಮಾನಿಗಳು.

ಸೀರಿಯಲ್ ನಲ್ಲಿ ಇವರ ಜೋಡಿ ಬಹಳ ಚೆನ್ನಾಗಿ ಕಾಣುತ್ತೆ, ಅದೇ ರೀತಿಯಲ್ಲಿ ರಿಯಲ್ ಲೈಫ್ ನಲ್ಲಿ ಕೂಡಾ ಜೋಡಿಯಾದರೆ ಅವರು ಅಷ್ಟೇ ಚೆನ್ನಾಗಿ ಕಾಣ್ತಾರೆ. ಆದರೆ ಮದುವೆ ಅನ್ನೋದು ಹಣೆ ಬರಹದಲ್ಲಿ ಇರಬೇಕಲ್ವಾ ಅನ್ನೋ ಮಾತನ್ನ ಸಹಾ ಕೆಲವರು ಹಂಚಿಕೊಂಡಿದ್ದಾರೆ. ಇವರಿಬ್ಬರು ಮದುವೆ ಆದರೆ ನಮಗೆಲ್ಲಾ ಬಹಳ ಸಂತೋಷವಾಗುತ್ತದೆ. ಸೂಪರ್ ಜೋಡಿ ಎಂದಿದ್ದಾರೆ.

ಸೀತಾರಾಮ ಸೀರಿಯಲ್ ನಲ್ಲಿ ವೈಷ್ಣವಿ ಗೌಡ (Vaishnavi Gowda), ಗಗನ್ ಚಿನ್ನಪ್ಪ (Gagan Chinnappa) ಮತ್ತು ರೀತು ಸಿಂಗ್, ಪವಿತ್ರ ಲೋಕೇಶ್ ಮತ್ತು ಸಿಹಿ ಕಹಿ ಚಂದ್ರು ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೀತಾ ರಾಮ ಸೀರಿಯಲ್ ಆರಂಭದಲ್ಲಿ ಟಾಪ್ ಸೀರಿಯಲ್ ಗಳಿಗೆ ಸ್ಪರ್ಧೆಯನ್ನು ನೀಡಿತ್ತು. ಇತ್ತೀಚಿನ ದಿನಗಳಲ್ಲಿ ಅದರ ವೇಗ ಸ್ವಲ್ಪ ಕಡಿಮೆಯಾಗಿದೆ ಅನ್ನೋದು ಸಹಾ ಸತ್ಯವಾಗಿದೆ.

Leave a Comment