SeethaRama Serial: ಸಿಹಿ ತಂದೆ ಬಗ್ಗೆ ಸೂರಿ ಮುಂದೆ ಮೌನ ಮುರಿದ ಸೀತಾ; ಅಸಲಿ ಸತ್ಯ ಈಗ ಹೊರ ಬೀಳುತ್ತಾ?

Written by Soma Shekar

Published on:

---Join Our Channel---

SeethaRama Serial : ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಗಳಲ್ಲಿ ಒಂದಾಗಿರುವ ಸೀತಾ ರಾಮ ಸೀರಿಯಲ್ (SeethaRama Serial) ಈಗಾಗಲೇ ಟಾಪ್ ಐದು ಸೀರಿಯಲ್ ಗಳಲ್ಲಿ ಒಂದಾಗಿ ಸ್ಥಾನವನ್ನು ಪಡೆದುಕೊಂಡಿದೆ. ಆರಂಭದ ದಿನಗಳಲ್ಲೇ ಟಾಪ್ ರೇಸ್ ಗೆ ಎಂಟ್ರಿ ನೀಡಿದ್ದ ಸೀತಾ ರಾಮ ಅನಂತರ ಕೆಲವು ದಿನಗಳ ಕಾಲ ಟಾಪ್ ಐದರಿಂದ ಹೊರ ಬಂದಿತ್ತು. ಆದರೆ ಈಗ ಕಥೆಯಲ್ಲಿನ ಹೊಸ ಟ್ವಿಸ್ಟ್ ಗಳಿಂದಾಗಿ ಮತ್ತೆ ಪ್ರೇಕ್ಷಕರ ಕುತೂಹಲವನ್ನು ಕೆರಳಿಸುತ್ತಾ ಈಗ ಮತ್ತೊಮ್ಮೆ ಟಾಪ್ ಸೀರಿಯಲ್ ಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಪ್ರಸ್ತುತ ಸೀರಿಯಲ್ ನಲ್ಲಿ ಸೀತಾ ರಾಮನ ಮದುವೆಯ ವಿಚಾರವು ಪ್ರಮುಖ ಆಕರ್ಷಣೆಯಾಗಿದೆ. ಮೊಮ್ಮಗ ರಾಮ್ ನ ಮದುವೆಯ ಕನಸನ್ನು ಕಂಡಿದ್ದ ಸೂರ್ಯಪ್ರಕಾಶ್ ಸೀತಾ ಜೊತೆಗೆ ಮದುವೆಯ ಮಾತನಾಡಲು ಮನೆಗೆ ಕರೆಸಿಕೊಂಡಿದ್ದಾನೆ. ಆದರೆ ಈ ವಿಷಯ ಒಂದು ಕಡೆ ರಾಮ್ ಗೆ ಮತ್ತೊಂದು ಕಡೆ ಭಾರ್ಗವಿಗೆ ದೊಡ್ಡ ಚಿಂತೆಯ ಕಾರಣವಾಗಿ ಪರಿಣಮಿಸಿದೆ.

ಸೀತಾಗೆ ಒಬ್ಬ ಮಗಳಿರುವ ವಿಷಯ ಸೂರ್ಯಪ್ರಕಾಶ್ ಗೆ ಗೊತ್ತಿಲ್ಲ. ತನ್ನ ಮೊಮ್ಮಗನಿಗೆ ಹೆಂಡತಿಯಾಗಿ ಬರುವ ಹುಡುಗಿಗೆ ಅದು ಮೊದಲ ಮದುವೆ ಆಗಿರಬೇಕೆನ್ನುವುದು ಸೂರ್ಯಪ್ರಕಾಶ್ ಆಸೆಯಾಗಿದೆ. ಆದರೆ ಸೀತಾಗೆ ಮಗಳಿದ್ದಾಳೆ ಅನ್ನೋ ವಿಷಯ ಗೊತ್ತಾದ್ರೆ ಹೇಗೆ ಅನ್ನೋದು ರಾಮ್ ನ ಚಿಂತೆಯ ಕಾರಣವಾಗಿದೆ. ‌ಇನ್ನೊಂದು ಕಡೆ ಸೀತಾಗೆ ಮಗಳಿರುವ ವಿಷಯ ಗೊತ್ತಾದ್ರೆ ಸೂರ್ಯಪ್ರಕಾಶ್ ಮದುವೆಗೆ ಒಪ್ಪಲ್ಲ ಎನ್ನುವ ನಿರೀಕ್ಷೆಯಲ್ಲಿದ್ದಳು.

ಸೀತಾಗೆ ಮಗಳು ಇರೋ ಕಾರಣದಿಂದ ಸೂರಿ ಮದುವೆಗೆ ಒಪ್ಪಲ್ಲ ಅಂತ ಭಾರ್ಗವಿ ನಿರೀಕ್ಷೆ ಮಾಡಿದ್ದಳು. ಆದ್ರೆ ಸೂರಿ ತಾನು ಮತ್ತೊಮ್ಮೆ ಸೀತಾ ಜೊತೆ ಮಾತಾಡಬೇಕು ಅಂತ ನಿರ್ಧಾರವನ್ನು ಮಾಡಿ ಸೀತಾ ಮನೆಗೆ ಬಂದಿದ್ದಾರೆ. ಅಲ್ಲಿ ಸಿಹಿಯನ್ನು ನೋಡಿದ್ದಾರೆ. ಸಿಹಿ ತಾನು ಸೀತಾ ಜೊತೆಗೆ ಅದೇ ಮನೆಯಲ್ಲಿ ಇರೋದು ಅನ್ನೋ ಮಾತನ್ನ ಸಹಾ ಹೇಳಿದ್ದಾಳೆ. ಇನ್ನು ಈಗ ಸೀತಾ ಮಗಳ ಬಗ್ಗೆ ಸೂರ್ಯಪ್ರಕಾಶ್ ಜೊತೆಗೆ ಮಾತನಾಡೋಕೆ ಸಿದ್ಧವಾಗಿದ್ದಾಳೆ.

ಸೂರ್ಯಪ್ರಕಾಶ್ ಮನೆಗೆ ಬಂದಿರೋ ಸೀತಾ ಮತ್ತು ಸೂರಿ ನಡುವೆ ಮಾತುಕತೆ ಶುರುವಾಗಿದೆ. ಆಗ ಸೀತಾ ತಾನು ಸಿಹಿ ತಾಯಿ ಅಂತ ಹೇಳೋದಕ್ಕೆ ಯಾವ ಮುಜುಗರವೂ ಇಲ್ಲ. ಸಿಹಿ ನನಗೆ ಮೊದಲ ಆದ್ಯತೆ, ಸಿಹಿಯ ತಂದೆ ಯಾರು ಅನ್ನೋದು ನಿಮ್ಮ ಪ್ರಶ್ನೆ ಇರಬಹುದು, ಸಿಹಿ ತಂದೆ ಯಾರಂದ್ರೆ ಅಂತ ಸೀತಾ ತನ್ನ ಮಾತನ್ನ ಆರಂಭ ಮಾಡಿದ್ದಾಳೆ. ಪ್ರೊಮೋದಲ್ಲಿ ಇಷ್ಟನ್ನು ಮಾತ್ರ ತೋರಿಸಲಾಗಿದೆ. ಹಾಗಾದ್ರೆ ಸೀತಾ ಸಿಹಿಯ ತಂದೆ ಯಾರಂತ ಹೇಳ್ತಾಳಾ? ಸೂರ್ಯ ಪ್ರಕಾಶ್ ಸಿಹಿ ಮತ್ತು ಸೀತಾನ ಒಪ್ಪಿಕೊಳ್ತಾರಾ ಕಾದು ನೋಡಬೇಕಾಗಿದೆ.

Leave a Comment