Rishab Shetty: ಬೆಂಗಳೂರಿಗೆ ಬೈ, ಕುಂದಾಪುರಕ್ಕೆ ಶಿಫ್ಟ್, ರಿಷಬ್ ಶೆಟ್ಟಿ ನಿರ್ಧಾರಕ್ಕೆ ಶಾಕ್ ಆದ ಫ್ಯಾನ್ಸ್

Written by Soma Shekar

Published on:

---Join Our Channel---

Rishab Shetty: ಸ್ಯಾಂಡಲ್ವುಡ್ ಮಂದಿಗೆ ಬೆಂಗಳೂರು (Bengaluru) ಬಹಳ ಇಷ್ಟ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಸಿನಿಮಾ ಚಟುವಟಿಕೆಗಳು ನಡೆಯುವುದು ಇಲ್ಲೇ. ಅದಕ್ಕೆ ಸಿನಿಮಾ ಆಸಕ್ತಿ ಇರುವವರು ಬೇರೆ ಬೇರೆ ಕಡೆಗಳಿಂದ ಬೆಂಗಳೂರಿಗೆ ಬಂದು ನೆಲೆಸುತ್ತಾರೆ. ಆದರೆ ಈಗ ಈ ವಿಚಾರದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ವಿಭಿನ್ನವಾದ ನಿಲುವನ್ನು ತಳೆಯುವ ಮೂಲಕ ಸುದ್ದಿಯಾಗಿದ್ದು, ಎಲ್ಲರ ಗಮನವನ್ನು ಸೆಳೆದಿದ್ದಾರೆ.

ಹೌದು ರಿಷಭ್ ಶೆಟ್ಟಿ ಅವರು ಸದ್ಯ ಬೆಂಗಳೂರಿಂದ ಕುಂದಾಪುರಕ್ಕೆ ಶಿಫ್ಟ್ ಆಗಿದ್ದಾರೆ. ತಮ್ಮ ಮಗನನ್ನು ಸಹಾ ಕುಂದಾಪುರದ ಶಾಲೆಗೆ ಸೇರಿಸಿದ್ದಾರೆ. ಇದಕ್ಕೆ ಮುಖ್ಯವಾದ ಕಾರಣ ಅವರ ಕಾಂತಾರ 1 (Kantara Chapter 1) ಸಿನಿಮಾ ಎನ್ನಲಾಗಿದೆ. ಈ ಸಿನಿಮಾದ ಚಿತ್ರೀಕರಣ ಕುಂದಾಪುರದಲ್ಲಿ ನಡೆಯುತ್ತಿರುವ ಕಾರಣ ಪತ್ನಿ ಪ್ರಗತಿ ಮತ್ತು ಮಕ್ಕಳೊಂದಿಗೆ ರಿಷಬ್ ಅವರು ಕುಂದಾಪುರಕ್ಕೆ ತೆರಳಿದ್ದಾರೆ.

ಕಾಂತಾರ ಅಧ್ಯಾಯ 1 ಸಿನಿಮಾಕ್ಕಾಗಿ ಕುಂದಾಪುರದಲ್ಲಿ ದೊಡ್ಡ ಸ್ಟುಡಿಯೋ ಮತ್ತು ಸೆಟ್ ನಿರ್ಮಾಣ ಮಾಡಲಾಗಿದ್ದು, ಈಗಾಗಲೇ ಒಂದು ಹಂತದ ಚಿತ್ರೀಕರಣ ಸಹಾ ಮುಗಿದಿದೆ ಎನ್ನಲಾಗಿದೆ. ಸಿನಿಮಾದ ಒಳಾಂಗಣ ಮತ್ತು ಹೊರಾಂಗಣ ಚಿತ್ರೀಕರಣವು ಅಲ್ಲೇ ನಡೆಯುತ್ತಿದೆ ಎಂದು ರಿಷಬ್ ಶೆಟ್ಟಿ ಅವರು ಮಾಹಿತಿಯನ್ನು ನೀಡಿದ್ದಾರೆ.

ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಗಿದಿದ್ದು, ಸುಮಾರು ನೂರಕ್ಕೂ ಅಧಿಕ ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಅನಂತರ ಅನ್ಯ ಭಾಷೆಗಳಿಗೆ ಡಬ್ಬಿಂಗ್ ಕೆಲಸ ನಡೆಯಲಿದೆ ಎನ್ನಲಾಗಿದ್ದು, ಸಿನಿಮಾ ಕೆಲಸಗಳು ಈ ವರ್ಷವೇ ಕೊನೆಗಳಲ್ಲಿದ್ದು, ಮುಂದಿನ ವರ್ಷ ಸಿನಿಮಾ ಬಿಡುಗಡೆ ಆಗಲಿದ್ದು, ಸಿನಿಮಾ ಬಿಡುಗಡೆ ಬಗ್ಗೆ ಹೊಂಬಾಳೆ ಫಿಲ್ಮ್ಸ್ ನಿರ್ಣಯ ತೆಗೆದುಕೊಳ್ಳಲಿದೆ ಎನ್ನಲಾಗಿದೆ.

Leave a Comment