Chikkanna: ರೇಣುಕಾ ಸ್ವಾಮಿ ಪ್ರಕರಣ, ಹಾಸ್ಯ ನಟ ಚಿಕ್ಕಣ್ಣಗೆ ನೋಟೀಸ್ ಕೊಟ್ಟಿದ್ದು ಯಾಕೆ?

Written by Soma Shekar

Published on:

---Join Our Channel---

Chikkanna: ರೇಣುಕಾ ಸ್ವಾಮಿ ಕೊ ಲೆ ಪ್ರಕರಣದಲ್ಲಿ ಈಗಾಗಲೇ ಒಂದಷ್ಟು ಜನರು ಬಂಧಿತರಾಗಿದ್ದಾರೆ. ಅಲ್ಲದೇ ಇನ್ನೊಂದಷ್ಟು ಜನರನ್ನು ತನಿಖೆ ಮಾಡಲಾಗುತ್ತಿದ್ದು, ವಿಷಯದ ಕುರಿತಾಗಿ ಪ್ರತಿದಿನ ಹೊಸ ಹೊಸ ವಿಚಾರಗಳು ಹೊರಗೆ ಬರುತ್ತಿವೆ. ಈ ಪ್ರಕರಣದಲ್ಲಿ ಸ್ಟಾರ್ ನಟನ ಪಾತ್ರವಿದೆ ಎನ್ನುವ ಕಾರಣಕ್ಕಾಗಿ ಇದು ಸಂಚಲನ ಸೃಷ್ಟಿಸಿದ್ದು, ಇದರ ಬಗ್ಗೆ ಪರ ವಿ ರೋ ಧ ಚರ್ಚೆಗಳು ನಡೆಯುತ್ತಿವೆ.

ಈಗ ಎಲ್ಲಾ ಬೆಳವಣಿಗೆಗಳ ನಡುವೆಯೇ ಈಗ ಸ್ಯಾಂಡಲ್ವುಡ್ ನಲ್ಲಿ ಹಾಸ್ಯ ನಟನಾಗಿ ಹೆಸರು ಮಾಡಿ, ಈಗ ನಾಯಕ ನಟನೂ ಆಗಿರುವ ಚಿಕ್ಕಣ್ಣ (Chikkanna) ಅವರಿಗೆ ಸಹಾ ಪೊಲೀಸ್ ನೋಟೀಸ್ ತಲುಪಿದೆ ಎನ್ನುವ ವಿಚಾರವೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೌದು, ನಟ ಚಿಕ್ಕಣ್ಣ ಅವರು ಸಹಾ ಅಂದು ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎನ್ನುವ ಸುದ್ದಿಯ ಆಧಾರದಲ್ಲಿ ವಿಚಾರಣೆಗೆ ಬರುವಂತೆ ನೋಟೀಸ್ ನೋಡಲಾಗಿದೆ ಎಂದು ತಿಳಿದು ಬಂದಿದೆ.

ಶನಿವಾರ ಮಧ್ಯಾಹ್ನದಿಂದ ವಿನಯ್ ಮಾಲಿಕತ್ವದ ಸ್ಟೋನಿಬ್ರೂಕ್ ನಲ್ಲಿ ದರ್ಶನ್ (Darshan) ಮತ್ತು ಟೀಂ ಪಾರ್ಟಿ ಮಾಡಿದ್ದರು ಎನ್ನಲಾಗಿದೆ. ಈ ವೇಳೆ ಚಿಕ್ಕಣ್ಣ ಪಾರ್ಟಿಯಲ್ಲೇ ಇದ್ದರು ಎನ್ನಲಾಗಿದೆ. ಸಂಜೆ ವೇಳೆಗೆ ದರ್ಶನ್ ಸ್ವಲ್ಪ ಕೆಲಸ ಇದೆ ಎಂದು ಹೇಳಿ ಪಾರ್ಟಿಯಿಂದ ‌ನಿರ್ಗಮಿಸಿದ್ದರು ಎನ್ನಲಾಗಿದೆ. ದರ್ಶನ್ ಬಂಧನದ ನಂತರ ಈಗ ಚಿಕ್ಕಣ್ಣ ಅವರಿಗೂ ನೋಟೀಸ್ ನೀಡಲಾಗಿದೆ ಎನ್ನಲಾಗಿದೆ.

ಕೊ ಲೆ ಯ ವಿಚಾರವಾಗಿ ಸ್ಟೋನಿಬ್ರೂಕ್ ಪಬ್ ನಲ್ಲಿ ಏನಾದರೂ ಚರ್ಚೆಗಳು ನಡೆದಿತ್ತಾ ಎನ್ನುವುದನ್ನು ತಿಳಿದುಕೊಳ್ಳುವುದಕ್ಕಾಗಿ ಚಿಕ್ಕಣ್ಣ ಅವರಿಗೆ ನೋಟೀಸ್ ನೀಡಿ ಕರೆಸಬೇಕಾ, ಬೇಡವಾ ಎಂದು ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ್ದ ಪೊಲೀಸರು ಈಗ ನೋಟೀಸ್ ನೀಡಿದ್ದಾರೆ. ಪ್ರಸ್ತುತ ಚಿಕ್ಕಣ್ಣ ಎಲ್ಲಿದ್ದಾರೆ ಎನ್ನುವುದರ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎನ್ನಲಾಗಿದೆ.

Leave a Comment