ಎಲ್ಲಾ ನೈಟ್ ಶಿಫ್ಟ್ ಮಹಿಮೆ ಅಂತಾನೇ ಭಾರೀ ಸಾಹಸ ಮಾಡಿದ ರಶ್ಮಿಕಾ; ಥ್ರಿಲ್ ಆಗಿ ಸೂಪರ್ ಅಂತಿದ್ದಾರೆ ಫ್ಯಾನ್ಸ್

Written by Soma Shekar

Published on:

---Join Our Channel---

Rashmika Mandanna: ರಶ್ಮಿಕಾ ಮಂದಣ್ಣ (Rashmika Mandanna) ಸದ್ಯಕ್ಕೆ ಬ್ಯುಸಿ ನಟಿ, ಪುಷ್ಪ 2 ರಶ್ಮಿಕಾ ಅವರ ಬಹು ನಿರೀಕ್ಷಿತ ಸಿನಿಮಾ ಆಗಿದೆ. ಅದೇ ವೇಳೆ ನಟಿಯು ತಮಿಳಿನ ಸ್ಟಾರ್ ನಟ ಧನುಷ್ (Dhanush) ಜೊತೆಗೆ ಕುಬೇರ (Kubera) ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ತಮ್ಮ ಹೊಸ ಸಿನಿಮಾಕ್ಕಾಗಿ ನಟಿಯು ಶ್ರಮ ಪಡುತ್ತಿದ್ದು ಆ ವಿಷಯವನ್ನು ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳ ಮುಂದೆ ಇರಿಸಿದ್ದಾರೆ.

ಜಿಮ್ ನಲ್ಲಿ ಬೆವರು ಹರಿಸುತ್ತಿರುವ ನಟಿಯು ನೂರು ಕೆಜಿ ಭಾರವನ್ನು ಎತ್ತಿದ್ದಾರೆ. ಇದು ಹೇಗೆ ಸಾಧ್ಯವಾಯಿತು, ರಶ್ಮಿಕಾ ಅಷ್ಟೊಂದು ಸ್ಟ್ರಾಂಗ್ ಆದ್ರಾ ಎಂದು ಅಚ್ಚರಿ ಪಡುವವರಿಗೆ, ಎಲ್ಲಾ ನೈಟ್ ಶಿಫ್ಟ್ ಪ್ರಭಾವ ಅಂತಾ ಕೂಡಾ ಬರ್ಕೊಂಡು ತಮ್ಮ ಕಡೆಯಿಂದ ರಶ್ಮಿಕಾ ಉತ್ತರವನ್ನು ನೀಡಿದ್ದಾರೆ.

ರಶ್ಮಿಕಾ ಮತ್ತು ಧನುಷ್ ಜೋಡಿಯಾಗಿ ನಟಿಸುತ್ತಿರುವ ಸಿನಿಮಾ ಕುಬೇರ ಚಿತ್ರೀಕರಣ ಮುಂಬೈನಲ್ಲಿ ಭರದಿಂದ ಸಾಗುತ್ತಿದ್ದು, ಸಿನಿಮಾದ ಶೂಟಿಂಗ್ ಬಹುತೇಕ ರಾತ್ರಿ ವೇಳೆಯಲ್ಲೇ ನಡೆಯುತ್ತಿದೆ.‌ ನಿತ್ಯ ನೈಟ್ ಶೂಟ್ ನಿಂದಾಗಿ ನನ್ನ ರಾತ್ರಿ ಹಗಲಾಗಿದೆ, ಹಗಲು ರಾತ್ರಿ ಆಗಿದೆ ಎಂದಿದ್ದಾರೆ ನಟಿ ರಶ್ಮಿಕಾ.

ನೈಟ್ ಶೂಟ್ ನಿಂದಾಗಿ ಸರಿಯಾಗಿ ವರ್ಕೌಟ್ ಮಾಡೋಕೆ ಆಗ್ತಿಲ್ಲ. ಇದರಿಂದ ಮನಸ್ಸಿನ ಚಡಪಡಿಕೆ ಆಗುತ್ತದೆ. ಈ ಮೈಂಡ್ ಸೆಟ್ ನಲ್ಲಿ ರಾತ್ರಿ ಶೂಟ್ ಗೆ ಹೋಗೋ ಮೊದಲು ವರ್ಕೌಟ್ ಮಾಡುತ್ತೇನೆ. ನೂರು ಕೆಜಿ ಭಾರವನ್ನೂ ಎತ್ತುವ ಸಾಹಸವನ್ನು ಮಾಡಿದ್ದೇನೆ. ನೈಟ್ ಶೂಟ್ ಮುಗಿಸಿ ಬಂದು ಮಧ್ಯಾಹ್ನ ಹನ್ನೆರಡಕ್ಕೆ ಮಲಗಿ ಸಂಜೆ ಆರಕ್ಕೆ ಏಳುವ ಹಿಂಸೆ ಯಾರಿಗೂ ಬೇಡ ಎಂದಿದ್ದಾರೆ ರಶ್ಮಿಕಾ.

ಕುಬೇರ ಸಿನಿಮಾದಲ್ಲಿ ತೆಲುಗಿನ ಹಿರಿಯ ನಟ, ಸ್ಟಾರ್ ನಟ ನಾಗಾರ್ಜುನ ಅವರು ಸಹಾ ನಟಿಸುತ್ತಿದ್ದಾರೆ. ಅನಿಮಲ್ ಸಿನಿಮಾದ ದೊಡ್ಡ ಸಕ್ಸಸ್ ನ ನಂತರ ರಶ್ಮಿಕಾ ಹೊಸ ಹೊಸ ಸಿನಿಮಾಗಳ ಕೆಲಸಗಳಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಪುಷ್ಪ 2, ದಿ ರೂಲ್, ರೈನ್ ಬೋ, ಗರ್ಲ್ ಫ್ರೆಂಡ್ ಸದ್ಯ ನಟಿಯ ಕೈಲಿರುವ ಸಿನಿಮಾಗಳಾಗಿದೆ.

Leave a Comment