Puttakkana Makkalu: ಕರಗಿದ ರಾಜಿ ಅಹಂಕಾರ, ಪುಟ್ಟಕ್ಕನ ಪಾದಗಳೇ ಗತಿ ಅಂತ ಓಡೋಡಿ ಬಂದ್ಲು ರಾಜಿ

Written by Soma Shekar

Published on:

---Join Our Channel---

Puttakkana Makkalu: ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಗಳಲ್ಲಿ ಸದ್ಯಕ್ಕೆ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿರುವುದು ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್. ಬಂಗಾರಮ್ಮನ ಮಗಳು ವಸು ಸೀಮಂತ ಶಾಸ್ತ್ರ ನಡೆದಿದೆ, ಬಂಗಾರಮ್ಮ ನಂಜಮ್ಮನ ಮೇಲಿನ ಕೋಪ ಬದಿಗಿಟ್ಟು ನಂಜಮ್ಮನ ಮನೆಗೆ ಬಂದು ಈ ವಿಚಾರದಲ್ಲಿ ನೀನೇ ಗೆದ್ದೆ ಮಕ್ಕಳ ಸಂತೋಷಕ್ಕೆ ನಾನು ತಲೆ ತಗ್ಗಿಸೋಕು ಸಿದ್ಧ ಅನ್ನೋ ಮಾತನ್ನ ಹೇಳಿದ್ದಾಳೆ‌

ಮತ್ತೊಂದು ಕಡೆ ಸಹನಾ ದೆವ್ವದಂತೆ ರಾಜಿ (Raji) ಮುಂದೆ ಬಂದು ಹೊಡೆದು ಹೋದ ಮೇಲೆ ರಾಜಿ ಅದೇ ಭಯದಲ್ಲಿ ದಿನಗಳನ್ನ ದೂಡ್ತಾ ಇದ್ದಾಳೆ. ನಂಜಮ್ಮ ಮಗಳ ಸೀಮಂತಕ್ಕೆ ಬಾ ಅಂದ್ರೂ ಬರದೇ ಸುಮ್ಮನಾಗಿದ್ದಾಳೆ. ಈಗ ಮತ್ತೆ ಸಹನಾ (Sahana) ಕಾಣಿಸಿಕೊಂಡು ಕತ್ತು ಹಿಸುಕಿದ್ದು, ರಾಜಿ ಇನ್ನಷ್ಟು ಭಯ ಪಟ್ಟುಕೊಂಡಿದ್ದಾಳೆ. ಪುಟ್ಟಕ್ಕನ ತಂಟೆಗೆ ಹೋಗಲ್ಲ ಅಂತ ಹೇಳಿದ್ದಾಳೆ.

ಸಹನಾ ನಿಜವಾಗಿ ದೆವ್ವ ಆಗಿ ತನ್ನನ್ನ ಕಾಡ್ತಾ ಇದ್ದಾಳೆ ಅಂತ ನಂಬಿರೋ ರಾಜಿ ಈಗ ಭಯದಿಂದ ಓಡಿ ಬಂದು ಪುಟ್ಟಕ್ಕನ ಕಾಲು ಹಿಡಿದಿದ್ದಾಳೆ. ನೀನು‌ ಮಾಡ್ಸಿರೋ ಮಾಟ ತೆಗ್ಸು ಅಂತ ಬೇಡಿಕೊಂಡಿದ್ದಾಳೆ. ಊಟ ಮಾಡೋಕು, ನಿದ್ದೆ ಮಾಡೋಕು ಆಗ್ತಿಲ್ಲ, ನಿನ್ನ ಮಗಳು ಕನಸಲ್ಲಿ ಬಂದು ಕಾಡ್ತಿದ್ದಾಳೆ ಅಂತೆಲ್ಲಾ ಬಡಬಡಾಯಿಸಿದ್ದಾಳೆ ರಾಜಿ.

ರಾಜಿ ಏನು ಹೇಳ್ತಿದ್ದಾಳೆ ಅನ್ನೋದು ಪುಟ್ಟಕ್ಕನಿಗೆ ಅರ್ಥ ಆಗಿಲ್ಲ.‌ ಪುಟ್ಟಕ್ಕನ ಗಂಡ ಅದೆಲ್ಲಾ ರಾಜಿ ಮಾಡಿರೋ ಪಾಪ ಅದೇ ಅವಳನ್ನ ಕಾಡ್ತಾ ಇರೋದು ಅಂತ ಹೇಳಿದ್ದು, ರಾಜಿ ಬಾಯಿ ತಪ್ಪಿ ಕೆಟ್ಟದಾಗಿ ಮಾತಾಡೋಕೆ ಹೋದ್ರು ನಂತರ ಸಹನಾ ಭಯಕ್ಕೆ ಇನ್ನೊಂದ್ಸಲ ಹಾಗೆ ಹೇಳಲ್ಲ ಅಂತ ಹೇಳಿದ್ದಾಳೆ. ಪುಟ್ಟಕ್ಕನ ಕಾಲಿಗೆ ಬಿದ್ದ ರಾಜಿ ಅಲ್ಲೇ ಪ್ರಜ್ಞೆ ತಪ್ಪಿದ್ದಾಳೆ. ಮುಂದೆ ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಾಗಿದೆ.

Leave a Comment