Puttakkana Makkalu: ಸಹನಾ ಸತ್ತಿಲ್ಲ, ಕೊನೆಗೂ ಸಿಕ್ಕೇ ಬಿಡ್ತು ಸುಳಿವು; ಸುಮ ಮಾತಿಗೆ ಎಲ್ಲರೂ ಶಾಕ್ !

Written by Soma Shekar

Published on:

---Join Our Channel---

Puttakkana Makkalu: ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಪುಟ್ಟಕ್ಕನ ಮಕ್ಕಳು (Puttakkana Makkalu) ಕಳೆದ ಕೆಲವು ದಿನಗಳಿಂದಲೂ ಸಹಾ ಸಹನಾ ಸಾವಿನ ಸುತ್ತಾ ಕಥೆ ಸುತ್ತುತ್ತಾ ಇದೆ. ಸಹನಾ (Sahana) ಸಾವಿನ ನೋವಲ್ಲಿ ದಿನವೂ ಕಣ್ಣೀರು ಸುರಿಸ್ತಾ ಇದ್ದ ಪುಟ್ಟಕ್ಕ ಬಂಗಾರಮ್ಮನ ಸಾಂತ್ವನದ ಮಾತುಗಳನ್ನು ಕೇಳಿ ಸ್ವಲ್ಪ ಸಮಾಧಾನಗೊಂಡಿದ್ದು ಮಾತ್ರವೇ ಅಲ್ಲದೇ ಎಲ್ಲದಕ್ಕೂ ಕಾರಣ ಅಂತ ಬೈದಿದ್ದ ಸ್ನೇಹ ಜೊತೆಗೆ ಕೂಡಾ ಮೊದಲಿನ ಹಾಗೆ ಮಾತನಾಡೋಕೆ ಶುರು ಮಾಡಿದ್ದಾಳೆ.

ಸಹನಾ ಮನೆ ಬಿಟ್ಟು ಹೋದ ಮೇಲೆ ಸಿಕ್ಕ ಅಪರಿಚಿತ ಶವ, ಅದರೊಟ್ಟಿಗೆ ಇದ್ದ ಸಹನಾ ಗುರುತು ನೋಡಿ ಎಲ್ಲರೂ ಸಹನಾ ಸತ್ತಳೆಂದೇ ಭಾವಿಸಿ ಅಂತಿಮ ಸಂಸ್ಕಾರ ಮಾಡಿ ಮುಗಿಸಿದ್ದಾರೆ. ಇದೇ ವೇಳೆ ಮತ್ತೊಂದು ಕಡೆ ಸಹನಾ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕೆಂದು ತೀರ್ಮಾನ ಮಾಡಿ ಅದರ ಕಡೆ ಗಮನ ಕೊಟ್ಟಿದ್ದಾಳೆ.

ಆದರೆ ಈಗ ಅವೆಲ್ಲವುಗಳ ನಡುವೆ ಪುಟ್ಟಕ್ಕನ ಕೊನೆಯ ಮಗಳು ಸುಮಳಿಗೆ ಹೊಸ ಅನುಮಾನ ಮೂಡಿದೆ. ಅವಳು ಅದನ್ನು ಮನೆಯವರ ಮುಂದೆ ಹೇಳಿದ್ದಾಳೆ. ಕೋಣೆಯಲ್ಲಿ ಇರೋ ಸೀರೆಗಳಲ್ಲಿ ಒಂದು ಸೀರೆ ಮಿಸ್ ಆಗಿದೆ ಅಂತ ಹೇಳಿದ್ದಾಳೆ ಸಹನಾ. ಅಕ್ಕ ಉಟ್ಕೊಂಡು ಹೋಗಿದ್ದ ಆ ಸೀರೇನೆ ಮಿಸ್ಸಿಂಗ್ ಅಂತ ಮನೆಯವರಿಗೆ ಹೇಳಿದ್ದಾಳೆ.

ಸಹನಾನೇ ಹೋದ್ಮೇಲೆ ಸೀರೆ ವಿಷಯ ಯಾಕೆ ಅಂತ ಗೋಪಾಲ ಹೇಳಿದಾಗ ಸುಮ ಇಲ್ಲ ಅಲ್ಲೊಂದು ವಿಷಯ ಇದೆ ಅಂತ ಮನೆಯವರಿಗೆ ಯಾವುದೋ ವಿಚಾರವನ್ನು ಅರ್ಥ ಮಾಡಿಸೋ ಪ್ರಯತ್ನಕ್ಕೆ ಮುಂದಾಗಿದ್ದಾಳೆ.‌ ಸುಮ ತಿಳ್ಕೊಂಡ ಸತ್ಯದಿಂದ ಈಗ ಸಹನಾ ಸತ್ತಿಲ್ಲ ಅನ್ನೋ ಅನುಮಾನ ಎಲ್ಲರಿಗೂ ಬರುತ್ತಾ? ಕಾದು ನೋಡಬೇಕಾಗಿದೆ.

Leave a Comment