Entertainment

Pushpa 2: ಉಗ್ರರೂಪದಲ್ಲಿ ಅಲ್ಲು ಅರ್ಜುನ್, ಪುಷ್ಪ 2 ಟೀಸರ್ ಎಬ್ಬಿಸಿದೆ ಸುನಾಮಿ, ದೇವಿಯಲ್ಲ ಇವನು ಮಾರಿ ಎಂದ ಫ್ಯಾನ್ಸ್

Pushpa 2 : ಟಾಲಿವುಡ್ ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ಜನ್ಮದಿನದ ಸಂಭ್ರಮ, ಈ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್‌ (Allu Arjun) ಅವರ ಅಭಿಮಾನಿಗಳು ಸಹಾ ತಮ್ಮ ಅಭಿಮಾನ ನಟನ ಹುಟ್ಟುಹಬ್ಬದ ಸಂಭ್ರಮವನ್ನು ಖುಷಿಯಿಂದ ಆಚರಿಸುತ್ತಿದ್ದು, ಈ ಖುಷಿಯನ್ನು ದುಪ್ಪಟ್ಟು ಮಾಡುವಂತೆ ಅವರ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳು ಸಾಕಷ್ಟು ನಿರೀಕ್ಷೆಯಿಂದ ಕಾಯುತ್ತಿದ್ದ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಹು ನಿರೀಕ್ಷಿತ ಸಿನಿಮಾ ಆಗಿ ಮಾರ್ಪಟ್ಡಿರುವ ʼಪುಷ್ಪ-2ʼ (Pushpa 2) ಸಿನಿಮಾದ ಹೊಸ ಟೀಸರ್ ಒಂದನ್ನು ಬಿಡುಗಡೆ ಮಾಡಲಾಗಿದೆ.

ಟೀಸರ್ (Pushpa 2 new teaser) ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಅವರ ವೀಕ್ಷಣೆಯು ಇಪ್ಪತ್ತೈದು ಲಕ್ಷ ವೀಕ್ಷಣೆಗಳ ಗಡಿಯನ್ನು ದಾಟಿದೆ. ಅಲ್ಲು ಅರ್ಜುನ್‌ ಅವರ ಜನ್ಮದಿನದ ವಿಶೇಷ ಎನ್ನುವಂತೆ ಬಹು ನಿರೀಕ್ಷಿತ ಟೀಸರ್ ಅಭಿಮಾನಿಗಳ ಮುಂದೆ ಬಂದಾಗಿದೆ. ಮೈಮೇಲೆ ಆಭರಣಗಳನ್ನು ಧರಿಸಿ, ಜಾತ್ರೆಯಲ್ಲಿ ಆವೇಶದಿಂದ ನರ್ತಿಸುವ ದೇವಿಯ ರೂಪದಲ್ಲಿ ಅಲ್ಲು ಅರ್ಜುನ್ ಮಾಸ್ ಲುಕ್ ಇದ್ದು, ಇದನ್ನ ನೋಡಿ ಫ್ಯಾನ್ಸ್ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ.

ನೃತ್ಯದ ಜೊತೆಗೆ ಒಂದು ಭರ್ಜರಿ ಫೈಟಿಂಗ್ ದೃಶ್ಯವನ್ನು ಸಹಾ ಟೀಸರ್ ನಲ್ಲಿ ತೋರಿಸಿ ಸಿನಿ ಪ್ರೇಮಿಗಳ ಕುತೂಹಲವನ್ನು ಕೆರಳಿಸಿದ್ದಾರೆ. ಇನ್ನು ಇಂತಹುದೊಂದು ಅದ್ಭುತವಾದ ಸನ್ನಿವೇಶಕ್ಕೆ ಮೈನವಿರೇಳುವಂತಹ ಸಂಗೀತವನ್ನು ನೀಡಿದ್ದಾರೆ ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್. ಅಲ್ಲು ಅರ್ಜುನ್ ಅವರ ಹೊಸ ಲುಕ್ ಸದ್ಯಕ್ಕೆ ಎಲ್ಲರ ಗಮನವನ್ನು ಸೆಳೆದಿದೆ ಮತ್ತು ಮೆಚ್ಚುಗೆಗಳನ್ನು ಪಡೆಯುತ್ರಿದೆ.

ಪುಷ್ಪ ದಿ ರೈಸ್ ಸಿನಿಮಾ ಮೊದಲ ಭಾಗವಾಗಿ ಮೂಡಿ ಬಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿ ದೊಡ್ಡ ಸಕ್ಸಸ್ ಪಡೆದಿತ್ತು. ಈಗ ಪುಷ್ಪ ದಿ ರೂಲ್ ಪ್ರೇಕ್ಷಕರನ್ನು ರಂಜಿಸಲು ಆಗಸ್ಟ್ 15 ರಂದು ವಿವಿಧ ಭಾಷೆಗಳಲ್ಲಿ ತೆರೆಗೆ ಬರಲು ಸಿದ್ಧತೆ ನಡೆಸಿದೆ. ಈ ಸಿನಿಮಾವನ್ನು ಸುಕುಮಾರ್ (Sukumar) ನಿರ್ದೇಶನ ಮಾಡಿದ್ದು, ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ.

Soma Shekar

Recent Posts

Kiara Advani: ಕಾನ್ ಸಿನಿಮೋತ್ಸವದಲ್ಲಿ ಅಂದದ ಕಿಚ್ಚು ಹೊತ್ತಿಸಿದ ಕಿಯಾರಾ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

Kiara Advani: ಕಾನ್ (Cannes 2024) ಸಿನಿಮಾ ಉತ್ಸವ ಬಂತೆಂದರೆ ಅಲ್ಲಿ ವಿಶ್ವದ ಸಿನಿಮಾ ತಾರೆಯರ ಚಿತ್ರ ವಿಚಿತ್ರ ಹಾಗೂ…

2 hours ago

Pavithra Jayram: ಪವಿತ್ರ ಕರೀತಿದ್ದಾಳೆ ಅಂತ ಹೆಂಡ್ತಿ ಮಕ್ಕಳನ್ನ ಮರೆತು ಸಾವಿಗೆ ಶರಣಾದ ಚಂದು

Pavithra Jayaram: ತ್ರಿನಯನಿ (Trinayani) ತೆಲುಗು ಸೀರಿಯಲ್ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದ ನಟಿ ಪವಿತ್ರಾ ಜಯರಾಂ (Pavithra Jayaram)…

5 hours ago

Brundavana Serial: ಬೃಂದಾವನ ಸೀರಿಯಲ್ ಪ್ರೇಕ್ಷಕರಿಗೆ ಬ್ಯಾಡ್ ನ್ಯೂಸ್; ಇದನ್ನ ಯಾರೂ ನಿರೀಕ್ಷೆ ಮಾಡಿರ್ಲಿಲ್ಲ

Brundavana Serial: ಕನ್ನಡ ಕಿರುತೆರೆಯಲ್ಲಿ ಬೃಂದಾವನ ಸೀರಿಯಲ್ (Brundavana Serial) ತನ್ನದೇ ಆದ ಒಂದು ಸ್ಥಾನವನ್ನು ಪಡೆದುಕೊಂಡು ಜನಪ್ರಿಯತೆಯನ್ನು ಪಡೆದುಕೊಂಡಿದೆ.…

10 hours ago

Sai Pallavi: ಮಾಡಲ್ಲ, ಮಾಡಲ್ಲ ಅಂತಾನೇ ಗ್ರೀನ್ ಸಿಗ್ನಲ್ ಕೊಟ್ಟಿದ್ಯಾಕೆ? ಶಾಕ್ ನಲ್ಲಿ ಸಾಯಿಪಲ್ಲವಿ ಫ್ಯಾನ್ಸ್

Sai Pallavi: ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿ ಸಾಯಿ ಪಲ್ಲವಿ (Sai Pallavi) ಈಗ ಪ್ಯಾನ್ ಇಂಡಿಯಾ ಸ್ಟಾರ್…

11 hours ago

Rashmika Mandanna: ಅಟಲ್ ಸೇತುವನ್ನು ಹೊಗಳಿದ ರಶ್ಮಿಕಾ ಮೇಲೆ ಸಿಡಿದೆದ್ದ ಕೇರಳ ಕಾಂಗ್ರೆಸ್ ಘಟಕ

Rashmika Mandanna: ಸೌತ್ ಬ್ಯೂಟಿ ರಶ್ಮಿಕಾ (Rashmika Mandanna) ಮತ್ತೊಮ್ಮೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಈ ಬಾರಿ ನಟಿ ಯಾವುದೇ ಸಿನಿಮಾದ…

14 hours ago

Prabhas: ಅವರಿಬ್ಬರು ಸಲಿಂಗಕಾಮಿಗಳು, ಲಂಡನ್ ನಲ್ಲಿ ನನ್ನ ಗಂಡನ ಜೊತೆ, ಸುಚಿತ್ರಾ ಶಾಕಿಂಗ್ ಹೇಳಿಕೆ

Suchithra : ಗಾಯಕಿ ಸುಚಿತ್ರಾ ರಾಮದುರೈ (Suchithra) ಅವರು ಮೊನ್ನೆ ಮೊನ್ನೆಯಷ್ಟೇ ತಮ್ಮ ಮಾಜಿ ಪತಿ ತಮಿಳು ನಟ ಕಾರ್ತಿಕ್…

1 day ago

This website uses cookies.