Darshan Case : ಸ್ಯಾಂಡಲ್ ವುಡ್ ನಟ ದರ್ಶನ್ (Darshan Case) ರೇಣುಕಾಸ್ವಾಮಿ ಕೊ ಲೆ ಕೇಸ್ ವಿಷಯವಾಗಿ ಪೊಲೀಸರ ಬಂಧನದಲ್ಲಿದ್ದಾರೆ. ದರ್ಶನ್ ಮತ್ತು ತಂಡ (Darshan and Gang) ಕಳೆದ ಕೆಲವು ದಿನಗಳಿಂದಲೂ ವಿಚಾರಣೆಯನ್ನು ಎದುರಿಸುತ್ತಿದ್ದೆ. ಈ ವಿಚಾರವಾಗಿ ಮಾದ್ಯಮಗಳಲ್ಲಿ ಸಾಕಷ್ಟು ಸುದ್ದಿಗಳಾಗಿದೆ. ಅಲ್ಲದೇ ಮಾಧ್ಯಮಗಳಲ್ಲಿ ಈ ವಿಚಾರವಾಗಿ ಒಂದಷ್ಟು ಚರ್ಚೆಗಳು ನಡೆದಿವೆ. ಕೆಲವು ಸೆಲೆಬ್ರಿಟಿಗಳು ಈಗಾಗಲೇ ಮಾದ್ಯಮಗಳಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಪ್ರಕರಣದ ಕುರಿತಾಗಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ (Umapathy Srinivas) ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅವರು ಮಾತನಾಡುತ್ತಾ, ಮಾಡಿದವರ ಪಾಪ ಆಡಿದವರ ಬಾಯಲ್ಲಿ ಅನ್ನೋ ಹಾಗೆ ಬೇಡ ಎನ್ನುವ ಮಾತನ್ನು ಹೇಳಿದ್ದಾರೆ. ತಪ್ಪು ಮಾಡಿದ್ರೆ ಕಾನೂನು ಅಡಿಯಲ್ಲಿ ಶಿಕ್ಷೆ ಸಿಗಲಿದೆ. ಈಗಾಗಲೇ ಕಾನೂನು ಚೌಕಟ್ಟಿನಲ್ಲಿ ಏನೆಲ್ಲ ಆಗಬೇಕು ಅದು ನಡೀತಿದೆ ಅನ್ನೋ ಮಾತುಗಳನ್ನು ಉಮಾಪತಿ ಅವರು ಹೇಳಿದ್ದಾರೆ.
ಪೊಲೀಸ್ ಇಲಾಖೆ ಕೂಡಾ ಒಳ್ಳೆ ರೀತಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಸೆಲೆಬ್ರಿಟಿ ಅಂತ ಅಲ್ಲ, ತಪ್ಪು ಯಾರೇ ಮಾಡಿದ್ರು ಅದು ತಪ್ಪೇ. ರೇಣುಕಾ ಸ್ವಾಮಿ ಪ್ರಕರಣದಲ್ಲಿ ಸಾಕಷ್ಟು ವಿಚಾರಗಳನ್ನ ಕೇಳಿದೆ, ಸಾಕಷ್ಟು ಪ್ರಭಾವಿಕಳು ಕರೆ ಮಾಡಿ ದರ್ಶನ ಅವರನ್ನು ಬಿಡಿಸೋದಕ್ಕೆ ಪ್ರಯತ್ನಪಟ್ಟಿದ್ದಾರೆ ಅಂತ. ಈಗ ಇವರುಗಳ ಮನೆಯಲ್ಲೇ ಕೊ ಲೆ ಆದ್ರೆ ಬಿಡುತ್ತಾರಾ? ಎಂದು ಉಮಾಪತಿಯವರು ಪ್ರಶ್ನೆ ಮಾಡಿದ್ದಾರೆ.
ನಿರ್ಮಾಪಕ ಉಮಾಪತಿ ಶ್ರೀನಿವಾಸ ಅವರು 2021 ರಲ್ಲಿ ತೆರೆಗೆ ಬಂದಂತಹ ದರ್ಶನ್ ನಾಯಕನಾಗಿದ್ದ ರಾಬರ್ಟ್ (Robert) ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಅನಂತರದ ದಿನಗಳಲ್ಲಿ ಒಂದಷ್ಟು ವಿಚಾರಗಳಲ್ಲಿ ಇಬ್ಬರ ನಡುವೆ ವೈಮನಸ್ಸು ಮೂಡಿದೆ ಹಾಗೂ ಮಾದ್ಯಮಗಳಲ್ಲಿ ಒಬ್ಬರು ಮತ್ತೊಬ್ನರ ಬಗ್ಗೆ ಅಸಮಾಧಾನದ ಮಾತುಗಳನ್ನು ಆಡಿದ್ದು ದೊಡ್ಡ ಸುದ್ದಿಯಾಗಿತ್ತು ಹಾಗೂ ಚರ್ಚೆಗಳಿಗೆ ಅದು ಕಾರಣವಾಗಿತ್ತು.